ಹಾಸನ: ಬೆಳಗ್ಗೆ ನಿತ್ಯಕರ್ಮಕ್ಕೆ ಎದ್ದಾಗ ಕಾಲುಜಾರಿ ಬಿದ್ದು ಶ್ರೀಗಳ ಸಾವು; ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ
ಐತಿಹಾಸಿಕ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ(Charukirthi Bhattarak Swamiji) ಇಂದು (ಮಾ.23) ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿಯವರು ಇಂದು ಬೆಳಿಗ್ಗೆ ನಿತ್ಯಕರ್ಮಕ್ಕೆ ಎದ್ದಾಗ ಕಾಲುಜಾರಿ ಬಿದ್ದು ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಶ್ರೀಗಳು ಸಾವನ್ನಪ್ಪಿದ್ದಾರೆ ಎಂದು ಹಾಸನ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸ್ಪಷ್ಟಪಡಿಸಿದ್ದಾರೆ.
ಹಾಸನ: ಐತಿಹಾಸಿಕ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ(Charukirthi Bhattarak Swamiji) ಇಂದು (ಮಾ.23) ಮುಂಜಾನೆ ಮಂಡ್ಯ ಜಿಲ್ಲೆಯ ಬೆಳ್ಳರೂ ಕ್ರಾಸ್ನ ಆದಿಚುಂಚನಗಿರಿ ಆಸ್ಪತ್ರೆಯಲ್ಕಿ ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿಯವರು ಇಂದು ಬೆಳಿಗ್ಗೆ ನಿತ್ಯಕರ್ಮಕ್ಕೆ ಎದ್ದಾಗ ಕಾಲುಜಾರಿ ಬಿದ್ದು ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಶ್ರೀಗಳು ಸಾವನ್ನಪ್ಪಿದ್ದಾರೆ ಎಂದು ಹಾಸನ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಹೇಳಿದ್ದಾರೆ. ಸ್ವಾಮೀಜಿಯವರು ಹಲವು ದಿನಗಳಿಂದ ಕಾಲುನೋವಿನಿಂದ ಬಳಲುತ್ತಿದ್ದರು. ಈ ಕಾರಣದಿಂದ ಶ್ರೀಗಳು ನಿಯಂತ್ರಣ ತಪ್ಪಿ ಮುಂಜಾನೆ ಬಿದ್ದ್ದಿದ್ದಾರೆ. ತೀವ್ರ ಗಾಯದಿಂದ ಬಳಲಿದ್ದ ಶ್ರೀಗಳನ್ನ ಸಿಬ್ಬಂದಿಯವರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ತಲೆಗೆ ಗಂಭೀರ ಗಾಯವಾದ್ದರಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನು ಸಂಜೆ 6 ಗಂಟೆಯೊಳಗೆ ಶ್ರೀಗಳ ಅಂತ್ಯಸಂಸ್ಕಾರ ನಡೆಸಲು ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದ ತಪ್ಪಲಿನಲ್ಲಿ ಸಿದ್ಧತೆ ಮಾಡಲಾಗಿದೆ ಎಂದರು.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು 1949ರ ಮೇ 3 ರಂದು ಜನಿಸಿದ್ದರು. ಮೂಲತಃ ಕಾರ್ಕಳದ ವರಂಗ ಗ್ರಾಮದವರು. 1970 ರಲ್ಲಿ ಜೈನ ಮಠದ ಪೀಠವೇರಿದ್ದ ಶ್ರೀಗಳು, ಇತಿಹಾಸ ತಜ್ಞ, ತತ್ವಜ್ಞಾನಿ, ಇತಿಹಾಸ, ಕನ್ನಡ, ಸಂಸ್ಕೃತ ದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಪ್ರಾಕೃತ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1981ರ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನೆರವೇರಿಸಿದ್ದಕ್ಕೆ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಇವರಿಗೆ ಕರ್ಮಯೋಗಿ ಎಂದು ಬಿರುದು ನೀಡಿದ್ದರು.
ಇದನ್ನೂ ಓದಿ:ಎದುರಾಳಿಗೆ ಹೃದಯಾಘಾತ ಆಗಲಿ: ಮಾಜಿ ಶಾಸಕರ ಸಾವು ಬಯಸಿದರಾ ಜೆಡಿಎಸ್ ಮುಖಂಡ?
ಚಾರುಕೀರ್ತಿ ಬಿರುದು ನೀಡಿದ ಹೊಯ್ಸಳ ದೊರೆ
ಸ್ವಸ್ಥಿ ಶ್ರಿ ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನಭಟ್ಟಾರಕ ಸ್ವಾಮೀಜಿಗಳು ಕರ್ನಾಟಕದಲ್ಲಿ ಇದ್ದಾರೆ. ಮೂಲತ ಶ್ರವಣ ಬೆಳಗೊಳದ ಜೈನ ಮಠದ ಸ್ವಾಮೀಜಿಗಳಿಗೆ 13ನೆ ಶತಮಾನದಲ್ಲಿ (1118-19)ಹೊಯ್ಸಳ ದೊರೆ ಬಲ್ಲಾಳರಾಯನು ನೀಡಿದ ಬಿರುದು” ಚಾರುಕೀರ್ತಿ” ಆಗಿನಿಂದ ಆ ಪೀಠದ ಸ್ವಾಮೀಜಿಗಳಿಗೆ ಸ್ವಸ್ಥಿ ಶ್ರಿ ಚಾರುಕೀರ್ತಿ”ಎಂದೆ ಕರೆಯಲಾಗುತ್ತಿದೆ. ಅದೇ ಸ್ವಾಮೀಜಿಗಳು ದಕ್ಷಿಣ ಕನ್ನಡದ (ಕಾರ್ಕಳ ಸಮೀಪ) ನಲ್ಲೂರು ಗ್ರಾಮದಲ್ಲಿ ಜೈನಮಠ ವನ್ನು ಸ್ಥಾಪನೆ ಮಾಡುತ್ತಾರೆ. ಅಲ್ಲಿಂದ ಮುಂದೆ ಹೋಗಿ ಮುಡುಬಿದ್ರೆಯಲ್ಲಿ ಮತ್ತೆ ಒಂದು ಮಠವನ್ನು ಸ್ಥಾಪನೆ ಮಾಡುತ್ತಾರೆ. ಅವರೆ ಆಧ್ಯಶ್ರಿ ಚಾರುಕೀತಿ೯ ಭಟ್ಟಾರಕ ಪ೦ಡಿತಾಚಯ೯ವಯ೯ ಮಹಾಸ್ವಾಮೀಜಿ ಗಳು. ಬಳಿಕ ಕೆಲ ಕಾಲದ ನ೦ತರ ಅವರ ನಲ್ಲೂರಿನಲ್ಲಿ ಸಮಾಧಿ ಸಲ್ಲೇಖನವಾಗುತ್ತದೆ ಇದಕ್ಕೆ ಜೈನ ಪರಿ ಭಾಷೆ ಯಲ್ಲಿ ವ್ರತ ಮರಣ ಎ೦ದು ಹೇಳುತ್ತಾರೆ. ಇದು ಶಾ೦ತಿ ಪೂರ್ವಕ ಮರಣವನ್ನು ಗೆಲ್ಲುವ ಅಗಮದ ನಿಯಮ ಪ್ರಕಾರ ಕೈಗೊಳ್ಳುವ ಜೈನ ಮರಣ ಕಲೆಯಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:23 pm, Thu, 23 March 23