ಹಾವೇರಿ, ಡಿಸೆಂಬರ್ 14: ದೊಡ್ಡ ನಗರಗಳಿಗೆ ಮಾತ್ರ ಹೆಲ್ಮೆಟ್ (helmet) ಕಡ್ಡಾಯ ಸಿಮೀತ ಆಗಿತ್ತು ಆದರೆ ಇದೀಗ ಹಾವೇರಿ ಜಿಲ್ಲೆಯಲ್ಲಿ ಕಡ್ಡಾಯ ಆಗಿದೆ. ಜಿಲ್ಲೆಗೆ ಹೊಸದಾಗಿ ಬಂದ ಪೋಲಿಸ್ ವರಿಷ್ಠಾಧಿಕಾರಿ ಅಂಶುಕುಮಾರ ಅವರ ವಿಶೇಷ ಆಸಕ್ತಿಯಿಂದ ಜಿಲ್ಲಾದ್ಯಂತ ಕಳೆದ ಎರಡು ವಾರಗಳಿಂದ ಹೆಲ್ಮೆಟ್ ಜಾಗೃತಿ ಜೊತೆಗೆ ದಂಡ ಹಾಕುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರಿಂದ ಜಿಲ್ಲೆಯಲ್ಲಿ ಶೇ 50-60 ರಷ್ಟು ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುತ್ತಿದ್ದಾರೆ.
ಜೀವ ಉಳಿಸುವ ಹೆಲ್ಮೆಟ್ ಕಡ್ಡಾಯಕ್ಕಾಗಿ ಹಾವೇರಿ ಪೋಲಿಸರು ಸಾರ್ವಜನಿಕರಲ್ಲಿ ವಿಶೇಷ ಅಭಿಯಾನ ಮಾಡುತ್ತಿದ್ದಾರೆ. ರಾಣೆಬೆನ್ನೂರ ಪೋಲಿಸರು ಯಮಧರ್ಮ, ಚಿತ್ರಗುಪ್ತ, ಯಮಕಿಂಕರ ವೇಷ ಧರಿಸಿ ಯಮ ಪಾಷ ಹಾಕಿ ಹೆಲ್ಮೆಟ್ ಹಾಕದಿದ್ದರೆ ನಿಮ್ಮ ಜೀವಗಳಿಗೆ ಆಪತ್ತು ಎಂದು ಭಯ ಹುಟ್ಟಿಸುವ ಕೇಲಸ ಮಡಿದ್ದಾರೆ. ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ವಿನಂತಿಸಿಕೊಳ್ಳುತ್ತಿದ್ದಾರೆ. ಬೈಕ್ ಸವಾರರನ್ನು ಪೋಲಿಸರು ತಡೆದು ನಿಲ್ಲಿಸಿದಾಗ ರಾಜಕಾರಣಿಗಳು, ಹಿಂಬಾಲಕರ ಒತ್ತಡಕ್ಕೆ ಪೋಲಿಸರು ಡೊಂಟ್ ಕೇರ ಅನ್ನುತ್ತಿದ್ದಾರೆ.
ಸರಕಾರಿ ನೌಕರರು ತಮ್ಮ ಗುರುತಿನ ಚೀಟಿ ತೋರಿಸಿ ದಂಡದಿಂದ ವಿನಾಯಿತಿ ಪಡೆಯುತ್ತಿದ್ದರು. ಆದರೆ ಈಗ ಎಸ್ಪಿಯವರು ಸರಕಾರಿ ಅಧಿಕಾರಿಗಳಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತಿದೆ.
ಇದನ್ನೂ ಓದಿ: ಯಮಧರ್ಮ, ಚಿತ್ರಗುಪ್ತ, ಯಮಕಿಂಕರರ ವೇಷ ಧರಿಸಿ ವಿನೂತನವಾಗಿ ಹೆಲ್ಮೆಟ್ ಜಾಗೃತಿ ಮೂಡಿಸಿದ ಹಾವೇರಿ ಪೊಲೀಸರು
ಮಹಿಳಾ ಸವಾರರು ಬೇಕಾಬಿಟ್ಟಿಯಾಗಿ ಒಡಾಡುತ್ತಿದ್ದರು ಇದೀಗ ಕಡ್ಡಾಯವಾಗಿ ದಂಡ ಕಟ್ಟಲೆಬೇಕಾದ ಪರಿಸ್ಥಿತಿ ಒದಗಿದ್ದು ಕೇಲವೊಂದು ಸಲ ಕಣ್ಣಿರು ಹಾಕುವಂತಾಗಿದೆ.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ 742 ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಇದರಿಂದ ಪೋಲಿಸರು
ಹೆಲ್ಮೆಟ್ ಕಡ್ಡಾಯ ಮಾಡಿ ಜಾಗೃತಿ ಹಾಗು ದಂಡ ಹಾಕುತ್ತಿರುವದರಿಂದ ಜಿಲ್ಲೆಯ ಶೇ 50-60 ರಷ್ಟು ಸವಾರರು ಹೆಲ್ಮೆಟ್ ಹಾಕುತ್ತಿದ್ದಾರೆ ಇದರಿಂದ ಸಾರ್ವಜನಿಕರಿಂದ ಚ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪುರ ಹರಿದುಬಂದಿದೆ.
ಹೆಲ್ಮೆಟ್ ಕಡ್ಡಾಯ ಎನ್ನುವದು ಖಚಿತವಾಗಿ ಬೈಕ್ ಸವಾರರು ದಂಡ ಕಟ್ಟಲಾಗದೆ ಹೆಲ್ಮೆಟ್ ಖರಿದಿಸಲು ಮುಂದಾಗಿದ್ದಾರೆ. ರಸ್ತೆ ಪಕ್ಕದಲ್ಲಿ ಹೆಲ್ಮೆಟ್ ಮಾರಾಟಗಾರರು ಅಂಗಡಿಗಳನ್ನು ತೇರೆದು ಹೆಲ್ಮೆಟ್ ಮಾರುತ್ತಿದ್ದಾರೆ. ಹೆಲ್ಮೆಟ್ ಕಡ್ಡಾಯ ಎಂದ ತಕ್ಷಣ ಎಲ್ಲೆಂದರಲ್ಲಿ ಹೆಲ್ಮೆಟ್ ಮಾರಾಟ ಮಾಡಲು ಮುಂದಾಗಿದ್ದಾರೆ. ಅದರಲ್ಲಿ ಉತ್ತಮ ಗುಣಮಟ್ಟದ ಅಂದರೆ ಐಎಸ್ಐ ಗುರುತಿನ ಶಿರಸ್ತ್ರಾಣ ಖರೀದಿಸಲು ಮನವಿ ಮಾಡಿದ್ದಾರೆ. ಇದರಿಂದ ಅಪಘಾತವಾದಾಗ ತಲೆಗೆ ಯಾವುದೆ ಪೆಟ್ಟಾಗುವುದಿಲ್ಲ.
ಇದನ್ನೂ ಓದಿ: ಬೆಂಗಳೂರು: ಹೆಲ್ಮೆಟ್ ಕಳ್ಳತನ, ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು
ಡಿಸೆಂಬರ್ 13 ರಂದು ಹಾವೇರಿ ಜಿಲ್ಲೆ ಹಾನಗಲ್ ತಾಲುಕಿನ ಅಕ್ಕಿ ಆಲುರ ಬಳಿ ನಡೆದ ಅಪಘಾತದಲ್ಲಿ ಗಂಗಪ್ಪ ಹಲಸೂರ ಎಂಬುವರು ಹೆಸರಿಗಷ್ಟೆ ಹೆಲ್ಮೆಟ್ ಧರಿಸಿ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಅದ್ದರಿಂದ ಉತ್ತಮ ಗುಣ ಮಟ್ಟದ ಹೆಲ್ಮೆಟ್ ಖರೀದಿಸಿ ಎನ್ನುತ್ತಾರೆ ಪೋಲಿಸ್ ವರಿಷ್ಠಾಧಿಕಾರಿ ಅಂಶುಕುಮಾರ.
ಡಿಸೆಂಬರ್ 1 ರಿಂದ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ 3670 ಪ್ರಕರಣಗಳು ದಾಖಲಾಗಿದ್ದು, 1835000ರೂ ದಾಖಲೆಯ ಮೊತ್ತ ಸಂಗ್ರಹವಾಗಿದೆ.
ರವಿ ಹೂಗಾರ. Tv9 ಹಾವೇರಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:27 pm, Thu, 14 December 23