ಸಿಎಂ ಸಿದ್ದರಾಮಯ್ಯ ಅಕೌಂಟಿಗೆ ನಾವೇ 1000 ರೂ ಹಾಕ್ತೇವೆ ಎಂದು ಸವಣೂರು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಯಾಕೆ ಗೊತ್ತಾ?
ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಪ್ರತಿ ಖಾತೆಗೆ ರೈತರಿಗೆ ಕೇವಲ 2 ಸಾವಿರ ನೀಡುವುದನ್ನ ಬಿಟ್ಟು ಪ್ರತಿ ಎಕರೆಗೆ ಕನಿಷ್ಠ 15 ಸಾವಿರ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹಾವೇರಿ ಜಿಲ್ಲೆಯ ಪ್ರತಿ ರೈತರಿಂದ ಒಂದು ಸಾವಿರ ಸಂಗ್ರಹಿಸಿ ಸಿಎಂ ಸಿದ್ದರಾಮಯ್ಯನವರಿಗೆ ನೀಡುತ್ತೇವೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ರೈತರು.
ಹಾವೇರಿ, ಡಿಸೆಂಬರ್ 12: ರಾಜ್ಯದಲ್ಲಿ ಈ ಬಾರಿ ಭಾರೀ ಬರಗಾಲ. ಸರಕಾರ ಬರ ಘೋಷಣೆ ಮಾಡಿದೆ. ಸರಕಾರ ಪ್ರತಿ ರೈತನಿಗೆ ಮೊದಲ ಕಂತಿನಲ್ಲಿ ಎರಡು ಸಾವಿರ ರುಪಾಯಿ ಬರ ಪರಿಹಾರ ನೀಡುವದಾಗಿ ಘೋಷಣೆ ಮಾಡಿತ್ತು. ಅದಕ್ಕೆ ಇಲ್ಲಿನ ರೈತರು ( farmers) ಮಾಡಿದ್ದಾದರೂ ಎನು? ಅಂತಿರಾ ಈ ಸ್ಟೋರಿ ನೋಡಿ. ರಾಜ್ಯ ಸರಕಾರ (Siddaramaiah) ರಾಜ್ಯದ ರೈತರಿಗೆ ಇತ್ತೀಚೆಗೆ ಬರ ಪರಿಹಾರ ಘೊಷನೆ ಮಾಡಿ ಪ್ರತಿ ರೈತನಿಗೆ ಎರಡು ಸಾವಿರ ರೂಪಾಯಿ ನೀಡಲು ಮುಂದಾಗಿದೆ. ಆದರೆ ಭಿಕ್ಷುರಂತೆ ಸರ್ಕಾರ ನಮಗೆ ಎರಡು ಸಾವಿರ ರುಪಾಯಿ ಪರಿಹಾರ ನೀಡುತ್ತಿದೆ. ಆದರೆ ಸರ್ಕಾರದ ಅಕೌಂಟಿಗೆ ನಾವೇ ಒಂದು ಸಾವಿರ ರುಪಾಯಿ ನೀಡುತ್ತೇವೆ ಎಂದು ಹಾವೇರಿ ಜಿಲ್ಲೆ ಸವಣೂರು (Savanur) ತಾಲೂಕಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
50ಕ್ಕೂ ಅಧಿಕ ರೈತರು ತಲಾ ಒಂದು ಸಾವಿರ ರುಪಾಯಿ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಪ್ರತಿ ಎಕರೆಗೆ ೨೦ ರಿಂದ 30 ಸಾವಿರ ರುಪಾಯಿ ಖರ್ಚು ಮಾಡಿದ್ದೇವೆ. ಅದರೆ ಸರ್ಕಾರ ಮಾತ್ರ ಎರಡು ಸಾವಿರ ರೂಪಾಯಿ ಬರ ಪರಿಹಾರ ನೀಡಿ ನಮ್ಮನ್ನು ಭಿಕ್ಷುರಂತೆ ಕಾಣುತ್ತಿದೆ. ಇದು ನಮಗೆ ಸಿದ್ದರಾಮಯ್ಯ ನೇತ್ರತ್ವದ ಸರಕಾರ ಅವಮಾನ ಮಾಡಿದಂತೆ. ನಮಗೆ 2 ಸಾವಿರ ರೂಪಾಯಿ ಪರಿಹಾರವೆಂದು ವಿಷ ಕುಡಿಯಲು ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ವರ್ಷ ರೈತರು ಎರಡರಿಂದ ಮೂರು ಬಾರಿ ಬಿತ್ತನೆ ಮಾಡಿದ್ದೇವೆ. ಪ್ರತಿ ಬಾರಿ ಬಿತ್ತನೆ ಮಾಡಿದಾಗ ಪ್ರತಿ ಎಕರೆಗೆ 20-30 ಸಾವಿರ ಖರ್ಚಾಗುತ್ತದೆ. ಆದ್ದರಿಂದ ರಾಜ್ಯ ಸರಕಾರ ಎಕರೆಗೆ 15 ಸಾವಿರ ನೀಡಬೇಕು, ಕೇಂದ್ರ ಸರಕಾರ 15 ಸಾವಿರ ರೂಪಾಯಿ ನೀಡಬೇಕು. ಇಲ್ಲದಿದ್ದರೆ ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ನಮ್ಮ ಹಣದಲ್ಲಿ ಭರ್ಜರಿ ಊಟ ಮಾಡಲಿ ಅಂತಾ ನಾವೇ ಅವರಿಗೆ ದುದ್ದು ಕೊಡುತ್ತೇವೆ ಎಂದು ರೈತರೆಲ್ಲರೂ ನೂರು, ಐದನೂರು ರೂಪಾಯಿ ನೋಟು ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸವಣೂರು ತಹಶೀಲ್ದಾರ್ಗೆ ಈ ಸಂಬಂಧ ಮನವಿ ಸಲ್ಲಿಸಿದರು.
ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಪ್ರತಿ ಖಾತೆಗೆ ರೈತರಿಗೆ ಕೇವಲ 2 ಸಾವಿರ ನೀಡುವುದನ್ನ ಬಿಟ್ಟು ಪ್ರತಿ ಎಕರೆಗೆ ಕನಿಷ್ಠ 15 ಸಾವಿರ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹಾವೇರಿ ಜಿಲ್ಲೆಯ ಪ್ರತಿ ರೈತರಿಂದ ಒಂದು ಸಾವಿರ ಸಂಗ್ರಹಿಸಿ ಸಿಎಂ ಸಿದ್ದರಾಮಯ್ಯನವರಿಗೆ ನೀಡುತ್ತೇವೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ರೈತರು.
ವರದಿ: ರವಿ ಹೂಗಾರ, ಟಿವಿ9, ಹಾವೇರಿ