ಯಮಧರ್ಮ, ಚಿತ್ರಗುಪ್ತ, ಯಮಕಿಂಕರರ ವೇಷ ಧರಿಸಿ ವಿನೂತನವಾಗಿ ಹೆಲ್ಮೆಟ್ ಜಾಗೃತಿ ಮೂಡಿಸಿದ ಹಾವೇರಿ ಪೊಲೀಸರು
ಯಮಧರ್ಮ, ಚಿತ್ರಗುಪ್ತ, ಯಮಕಿಂಕರರ ವೇಷ ಧರಿಸಿ ಫೀಲ್ಡ್ಗೆ ಇಳಿದ ಹಾವೇರಿ ಜಿಲ್ಲೆ ರಾಣೇಬೆನ್ನೂರು ಪೋಲಿಸರು ಕೋರ್ಟ್ ವೃತ್ತದ ಬಳಿ ಹೆಲ್ಮೆಟ್ ಹಾಕದವರಿಗೆ ಪಾಠ ಮಾಡಿದ್ದಾರೆ. 500 ರೂ. ದಂಡ ವಿಧಿಸುವ ಜೊತೆಗೆ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಹೆಲ್ಮೆಟ್ ಹಾಕಿಕೊಂಡು ಬಂದ ಸವಾರರಿಗೆ ಗುಲಾಬಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಹಾವೇರಿ, ಡಿ.04: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಹೆಲ್ಮೆಟ್ ಹಾಕದೇ, ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇದರಿಂದ ಅಪಾರ ಸಾವು-ನೋವುಗಳು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಹಾವೇರಿ ಪೊಲೀಸರು ವಿನೂತನವಾಗಿ ಹೆಲ್ಮೆಟ್ ಜಾಗೃತಿ ಮೂಡಿಸಿದ್ದಾರೆ (Helmet Wearing Awareness). ಯಮಧರ್ಮ, ಚಿತ್ರಗುಪ್ತ, ಯಮಕಿಂಕರರ ವೇಷ ಧರಿಸಿ ರಾಣಿಬೆನ್ನೂರು ಪೊಲೀಸರು (Ranebennur Police) ವಿಭಿನ್ನವಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.
ಯಮಧರ್ಮ, ಚಿತ್ರಗುಪ್ತ, ಯಮಕಿಂಕರರ ವೇಷ ಧರಿಸಿ ಫೀಲ್ಡ್ಗೆ ಇಳಿದ ಹಾವೇರಿ ಜಿಲ್ಲೆ ರಾಣೇಬೆನ್ನೂರು ಪೋಲಿಸರು ಕೋರ್ಟ್ ವೃತ್ತದ ಬಳಿ ಹೆಲ್ಮೆಟ್ ಹಾಕದವರಿಗೆ ಪಾಠ ಮಾಡಿದ್ದಾರೆ. 500 ರೂ. ದಂಡ ವಿಧಿಸುವ ಜೊತೆಗೆ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಹೆಲ್ಮೆಟ್ ಹಾಕಿಕೊಂಡು ಬಂದ ಸವಾರರಿಗೆ ಗುಲಾಬಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ 742ಕ್ಕೂ ಅಧಿಕ ಬೈಕ್ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ನೂತನ ಎಸ್ಪಿ ಅಂಶುಕುಮಾರ್ ಅವರು ಕಡ್ಡಾಯ ಹೆಲ್ಮೆಟ್ ಆದೇಶ ಹೊರಡಿಸಿದ್ದು ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ ಇಲಾಖೆ ಮುಂದಾಗಿದೆ. ಹೆಲ್ಮೆಟ್ ಹಾಕಿ ಬೈಕ್ ರೈಡ್ ಮಾಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೇರಳ: ಕೈಗಳಿಲ್ಲದಿದ್ದರೂ ಛಲಬಿಡದೆ, ಅಡೆತಡೆಗಳ ಮೀರಿ ಚಾಲನಾ ಪರವಾನಗಿ ಪಡೆದ ದಿಟ್ಟ ಮಹಿಳೆ
ವಿದ್ಯುತ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ ಅಧಿಕಾರಿಗಳು
ವೈಟ್ ಫೀಲ್ಡ್ ವಿದ್ಯುತ್ ಅವಘಡ ನಂತರ ಎಚ್ಚೆತ್ತ ಬೆಸ್ಕಾಂ ಇಲಾಖೆ ವಿದ್ಯುತ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ವಿದ್ಯುತ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಬೆಸ್ಕಾಂ ಸುರಕ್ಷತಾ ಜಾತಾ ಹಮ್ಮಿಕೊಂಡಿದೆ. ಬೆಸ್ಕಾಂ ಸಿಬ್ಬಂದಿ, ಅಧಿಕಾರಿಗಳು ಪ್ರವಾಸಿ ಮಂದಿರದಿಂದ ಪಟ್ಟಣದ ಬಸ್ ನಿಲ್ದಾಣದವರೆಗೂ ಜಾತಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ