ಮಹಿಳೆಯರೇ ಡ್ರಾಪ್ ಕೇಳುವ ಮುನ್ನ ಹುಷಾರ್: ಸಹಾಯ ಮಾಡುವ ನೆಪದಲ್ಲಿ ಹೀಗಾ ಮಾಡೋದು?
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ತಿರ್ಲಾಪುರ ಕ್ರಾಸ್ ಬಳಿ ಅಘಾತಕಾರಿ ಘಟನೆ ನಡೆದಿದೆ. ಬೈಕ್ ಸವಾರನ ಬಳಿ ಡ್ರಾಪ್ ಕೇಳಿದ ಮಹಿಳೆಯ 29 ಗ್ರಾಂ ಮಾಂಗಲ್ಯ ಸರವನ್ನು ಕಳ್ಳ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದೆ. ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ, ಡಿಸೆಂಬರ್ 29: ಡ್ರಾಪ್ ಕೇಳಿದ್ದ ಮಹಿಳೆಯ ಮೂರು ಲಕ್ಷ ಮೌಲ್ಯದ ಚಿನ್ನದ ಸರವನ್ನು (Chain Snatching) ಖದೀಮ ಎಗರಿಸಿದ ಘಟನೆ ಹಾವೇರಿ (Haveri) ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿರ್ಲಾಪುರ ಕ್ರಾಸ್ ಬಳಿ ನಡೆದಿದೆ. ರತ್ನಾ ಬಣಕಾರ್ ಸರ ಕಳೆದುಕೊಂಡ ಮಹಿಳೆ. 29 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಖದೀಮ ಪರಾರಿಯಾಗಿದ್ದಾನೆ. ಕಾಗಿನೆಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
ರತ್ನಾ ಬಣಕಾರ್ ಅವರು ಬೈಕ್ಗೆ ಕೈ ಮಾಡಿ ಕುಮ್ಮೂರು ಕ್ರಾಸ್ನಿಂದ ಗುಮ್ಮನಹಳ್ಳಿವರೆಗೆ ಡ್ರಾಪ್ ಕೇಳಿದ್ದಾರೆ. ಬೈಕ್ ಸವಾರ ಹತ್ತಿಸಿಕೊಂಡಿದ್ದಾನೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿಪಲಾಪುರ ಕ್ರಾಸ್ ಬಳಿ ನಮ್ಮ ಸಂಬಂಧಿಕರು ಬರುತ್ತಿದ್ದಾನೆ ಅಂತಾ ರತ್ನಾ ಅವರನ್ನು ಇಳಿಸಿದ್ದಾನೆ. ಈ ವೇಳೆ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಖದೀಮ ಪರಾರಿ ಆಗಿದ್ದಾನೆ.
ಬೆಂಗಳೂರಿನಲ್ಲಿ ಸರಣಿ ಕಳ್ಳತನ
ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹುಳಿಮಾವು 80 ಅಡಿ ರಸ್ತೆಯ ಪ್ಯಾರಮೌಂಟ್ ಅಪಾರ್ಟ್ಮೆಂಟ್ ಮುಂಭಾಗದ ಮಳಿಗೆಗಳಲ್ಲಿ ಸರಣಿ ಕಳ್ಳತನ ನಡೆದಿದೆ. ತಾರಸಿ ಶೀಟ್ ಮುರಿದು ಒಳ ನುಗ್ಗಿರುವ ಕಳ್ಳ ಮೊದಲು ಎಸ್.ಎಸ್ ಲಿಕ್ಕರ್ ಶಾಪ್ನಲ್ಲಿ 3 ಸಾವಿರ ನಗದು ಮದ್ಯದ ಬಾಟಲಿ ಕದ್ದಿದ್ದಾರೆ.
ಇದನ್ನೂ ಓದಿ: ಗೋಲ್ಡ್ ಇಟ್ಟಿಲ್ಲ, ಲೋನ್ ಪಡೆದಿಲ್ಲ: ಮತ್ತೊಂದು ಕೆನರಾ ಬ್ಯಾಂಕಿನಿಂದ ಮಹಾ ಮೋಸ
ಕರ್ನಾಟಕ ಪ್ಲೈವುಡ್ ಮತ್ತು ಹಾರ್ಡ್ ವೇರ್ ಶಾಪ್ನಲ್ಲಿ 50 ಸಾವಿರ ನಗದು ಎಗರಿಸಿದ್ದಾರೆ. ಪಕ್ಕದ ಆಟೋಮೊಬೈಲ್ ಶಾಪ್ನಲ್ಲಿ ಹತ್ತು ಸಾವಿರ ನಗದು ಕಳವು ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಸೋಮವಾರ ಬೆಳಗ್ಗೆ ಸಿಬ್ಬಂದಿಗಳು ಮಳಿಗೆ ಬಳಿ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಬಾರ್ ಮೇಲ್ವಿಚಾರಣೆ ತೆಗೆದು ಕಳ್ಳ ಒಳಗೆ ಎಂಟ್ರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಸರಣಿ ಕಳ್ಳತನ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




