ಎತ್ತಿನಬಂಡಿಯಲ್ಲೇ ಜಾತ್ರೆಗೆ ಟೂರ್: ಹಾವೇರಿಯಲ್ಲಿ ಹಳೇ ಸಂಪ್ರದಾಯಕ್ಕೆ ಜೀವಕಳೆ!

ಹಾವೇರಿ: ಎತ್ತುಗಳಿಗೆ ಫುಲ್ ಸಿಂಗಾರ.. ಎತ್ತಿನ ಬಂಡಿಗೆ ಅದ್ಧೂರಿ ಅಲಂಕಾರ. ರಸ್ತೆಯುದ್ಧಕ್ಕೂ ಝಲ್ ಝಲ್ ಅಂಥಾ ಮಾರ್ಧನಿಸ್ತಿರೋ ಗಂಟೆ ನಾದ. ಹೊಯ್.. ಹೊಯ್​.. ಹೈಯ್ಯಾ.. ಹೈಯ್ಯಾ ಅಂತ ಬಂಡಿ ಓಡಿಸ್ತಿರೋ ಮಂದಿ.. ಇದೇ ಕಣ್ರೀ ಹಳ್ಳೀ ಸೊಗಡಿನ ಖದರ್ ಅಂದ್ರೆ. ಯೆಸ್.. ಹಳ್ಳಿ ಲೈಫ್​ ಗಮ್ಮತ್ತೇ ಅಂಥಾದ್ದು. ಇಂಥಾ ಸೊಬಗು, ಮೋಜು ಸಿಗೋದು ಹಳ್ಳಿಗಾಡಿನಲ್ಲೇ ಬಿಡಿ. ದೇಶಕ್ಕೆ ರೈತ ಬೆನ್ನೆಲುಬಾದ್ರೆ, ಅದೇ ರೈತನಿಗೆ ಈ ಎತ್ತುಗಳೇ ಜೀವನಾಡಿ. ಅದ್ರೆ ಹಾವೇರಿ ಜಿಲ್ಲೆಯಲ್ಲಿ ಬಸ್, ಕಾರು, ಬೈಕ್​​ಗೆ ಹೊಡಿ […]

ಎತ್ತಿನಬಂಡಿಯಲ್ಲೇ ಜಾತ್ರೆಗೆ ಟೂರ್: ಹಾವೇರಿಯಲ್ಲಿ ಹಳೇ ಸಂಪ್ರದಾಯಕ್ಕೆ ಜೀವಕಳೆ!
Follow us
ಸಾಧು ಶ್ರೀನಾಥ್​
|

Updated on: Feb 10, 2020 | 12:27 PM

ಹಾವೇರಿ: ಎತ್ತುಗಳಿಗೆ ಫುಲ್ ಸಿಂಗಾರ.. ಎತ್ತಿನ ಬಂಡಿಗೆ ಅದ್ಧೂರಿ ಅಲಂಕಾರ. ರಸ್ತೆಯುದ್ಧಕ್ಕೂ ಝಲ್ ಝಲ್ ಅಂಥಾ ಮಾರ್ಧನಿಸ್ತಿರೋ ಗಂಟೆ ನಾದ. ಹೊಯ್.. ಹೊಯ್​.. ಹೈಯ್ಯಾ.. ಹೈಯ್ಯಾ ಅಂತ ಬಂಡಿ ಓಡಿಸ್ತಿರೋ ಮಂದಿ.. ಇದೇ ಕಣ್ರೀ ಹಳ್ಳೀ ಸೊಗಡಿನ ಖದರ್ ಅಂದ್ರೆ.

ಯೆಸ್.. ಹಳ್ಳಿ ಲೈಫ್​ ಗಮ್ಮತ್ತೇ ಅಂಥಾದ್ದು. ಇಂಥಾ ಸೊಬಗು, ಮೋಜು ಸಿಗೋದು ಹಳ್ಳಿಗಾಡಿನಲ್ಲೇ ಬಿಡಿ. ದೇಶಕ್ಕೆ ರೈತ ಬೆನ್ನೆಲುಬಾದ್ರೆ, ಅದೇ ರೈತನಿಗೆ ಈ ಎತ್ತುಗಳೇ ಜೀವನಾಡಿ. ಅದ್ರೆ ಹಾವೇರಿ ಜಿಲ್ಲೆಯಲ್ಲಿ ಬಸ್, ಕಾರು, ಬೈಕ್​​ಗೆ ಹೊಡಿ ಗೋಲಿ, ಎತ್ತಿನಬಂಡಿಯಲ್ಲಿ ಸಾಗೋದೆ ಜಾಲಿ ಅಂತಿದ್ದಾರೆ.

ಮೈಲಾರ ಜಾತ್ರೆಗೆ ಹರಿದು ಬರುತ್ತಿರುವ ಜನ: ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಜಾತ್ರೆ ಸಾಕಷ್ಟು ಫೇಮಸ್. ಇಲ್ಲಿ ನಡೆಯೋ ಜಾತ್ರೆಗೆ ಉತ್ತರ ಕರ್ನಾಟಕ ಭಾಗದ ಅದ್ರಲ್ಲೂ ಹಾವೇರಿ, ಗದಗ, ಧಾರವಾಡ ಜಿಲ್ಲೆಯಿಂದ ಭಕ್ತರ ದಂಡೇ ಹರಿದು ಬರುತ್ತೆ. ಹಾವೇರಿ ಜಿಲ್ಲೆಯ ಸವಣೂರು, ಹಾವೇರಿ, ರಾಣೆಬೆನ್ನೂರು ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಮೈಲಾರ ಜಾತ್ರೆಗೆ ಹೊರಡೋ ಎತ್ತಿನಬಂಡಿಗಳ ಸಾಲು ಸಾಲೇ ಕಾಣಿಸುತ್ತೆ. ಮೂರ್ನಾಲ್ಕು ದಿನಗಳ ಕಾಲ ಬೇಕಾಗೋ ವಸ್ತುಗಳ ಸಮೇತ ಎಲ್ರೂ ಕುಟುಂಬಸಮೇತ ಜಾತ್ರೆಗೆ ಹೋಗ್ತಾರೆ. ಮೈಲಾರದ ಜಾತ್ರೆಯಲ್ಲಿ ಭಾಗವಹಿಸೋ ಜನರು ವರ್ಷದ ಭವಿಷ್ಯವಾಣಿ ಅಂತಾ ನಂಬಿರೋ ಕಾರ್ಣಿಕವನ್ನ ಕೇಳಿ ಊರಿಗೆ ವಾಪಸ್ ಆಗ್ತಾರೆ.

ಇನ್ನು, ಜಾತ್ರೆಗೆ ಅಂತನಾ ಎತ್ತಿನಬಂಡಿಗಳಿಗೆ ಕೊಲ್ಹಾರಿ ಕಟ್ಟಿ, ಎತ್ತುಗಳಿಗೆ ಜೂಲಾ ಹಾಕಿ, ಕೋಡಿಗೆ ಅಲಂಕಾರ ಮಾಡಿರ್ತಾರೆ. ಕೆಲವರು ಜಾತ್ರೆ ಆರಂಭದ ದಿನವೇ ಮೈಲಾರ ತಲುಪುವಂತೆ ಹೋದ್ರೆ, ಇನ್ನು ಕೆಲವರು ಕಾರ್ಣಿಕ ವಾಣಿ ಕೇಳೋ ದಿನಕ್ಕೆ ಹೋಗ್ತಾರೆ. ನೂರಾರು ಕಿಲೋಮೀಟರ್ ಎತ್ತಿನ ಬಂಡಿಯಲ್ಲೇ ಸಾಗೋದ್ರಿಂದ ಊಟ, ತಿಂಡಿ ಕಟ್ಟಿಕೊಂಡಿರ್ತಾರೆ. ಅದ್ರಲ್ಲೂ ಜಾತ್ರೆಗೆ ಹೋಗೋ ಖುಷಿ ಒಂದ್ಕಡೆ, ಮತ್ತೊಂದ್ಕಡೆ ಎತ್ತಿನಗಾಡಿಯಲ್ಲಿ ಸಾಗೋದ್ರಲ್ಲೂ ಎಲ್ಲರೂ ಫುಲ್ ಎಂಜಾಯ್ ಮಾಡ್ತಾರೆ.

ಒಟ್ನಲ್ಲಿ, ಆಧುನಿಕತೆ ಬೆಳೆದಂತೆ ಹಳ್ಳಿಗಾಡಿನ ಸೊಬಗು, ಹಳ್ಳಿಯಲ್ಲಿನ ಸಂಪ್ರದಾಯಗಳ ಕಣ್ಮರೆಯಾಗ್ತಿವೆ. ಅದ್ರೀಗ, ಇಲ್ಲಿ ನಡೆಯೋ ಸ್ಪೆಷಲ್ ಜಾತ್ರೆ.. ಎತ್ತಿನಬಂಡಿಯಲ್ಲಿ ಫ್ಯಾಮಿಲಿ ಜೊತೆ ಟೂರ್ ಹೋಗ್ತಿರೋದು ನೋಡಿದ್ರೆ ಹಿಂದಿನ ಕಾಲದ ಸಂಸ್ಕೃತಿಗೆ ಜೀವಕಳೆ ಬಂದಿದೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ