ಹಳೆಯ ಕಾಲದ್ದು ಎನ್ನಲಾದ ಹ್ಯಾಂಡ್ ಗ್ರಾನೈಡ್ ಪತ್ತೆ; ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು

ದೊಂಬಿ ನಡೆದಾಗ, ಪೊಲೀಸರು, ಯುದ್ಧದ ಸಂದರ್ಭದಲ್ಲಿ ಬಳಸಲಾಗುವ ಹ್ಯಾಂಡ್ ಗ್ರಾನೈಡ್ ಇದಾಗಿತ್ತು ಎಂದು ಸದ್ಯ ಮೂಲಗಳು ತಿಳಿಸಿವೆ. ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುವುದಾಗಿ ಎಸ್​.ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

ಹಳೆಯ ಕಾಲದ್ದು ಎನ್ನಲಾದ ಹ್ಯಾಂಡ್ ಗ್ರಾನೈಡ್ ಪತ್ತೆ; ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು
ಹ್ಯಾಂಡ್ ಗ್ರಾನೈಡ್
Follow us
TV9 Web
| Updated By: preethi shettigar

Updated on:Jan 20, 2022 | 10:36 PM

ಹಾವೇರಿ: ಹಳೆಯ ಕಾಲದ್ದು ಎನ್ನಲಾದ ಹ್ಯಾಂಡ್ ಗ್ರಾನೈಡ್(Hand Granide) ಹಾವೇರಿ ನಗರದ ನೇತಾಜಿ ನಗರದಲ್ಲಿ ಪತ್ತೆಯಾಗಿದೆ. ಮನೆ (Home) ಕಟ್ಟುವ ಸಲುವಾಗಿ ಖಾಲಿ ಜಾಗವನ್ನು ಸ್ವಚ್ಛ ಮಾಡುವಾಗ ತುಕ್ಕು ಹಿಡಿದ ಸ್ಥಿತಿಯಲ್ಲಿ ಹ್ಯಾಂಡ್ ಗ್ರಾನೈಡ್ ಪತ್ತೆಯಾಗಿದೆ. ಹ್ಯಾಂಡ್ ಗ್ರಾನೈಡ್ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು (Karnataka police) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರವಿ ಮುಷ್ಠಿ ಎಂಬುವವರಿಗೆ ಸೇರಿದ ಜಾಗದಲ್ಲಿ  ಹ್ಯಾಂಡ್ ಗ್ರಾನೈಡ್ ಪತ್ತೆಯಾಗಿದೆ.

ದೊಂಬಿ ನಡೆದಾಗ, ಪೊಲೀಸರು, ಯುದ್ಧದ ಸಂದರ್ಭದಲ್ಲಿ ಬಳಸಲಾಗುವ ಹ್ಯಾಂಡ್ ಗ್ರಾನೈಡ್ ಇದಾಗಿತ್ತು ಎಂದು ಸದ್ಯ ಮೂಲಗಳು ತಿಳಿಸಿವೆ. ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುವುದಾಗಿ ಎಸ್​.ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

ಕಲಬುರಗಿ: 2 ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನ; ಮಕ್ಕಳು ಸಾವು, ಮಹಿಳೆ ಬಚಾವ್

2 ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ 2 ವರ್ಷದ ದ್ರಾಕ್ಷಾಯಿಣಿ, 4 ತಿಂಗಳ ಮಗು ಪ್ರೇಮಾ ಸಾವನ್ನಪ್ಪಿದ್ದಾರೆ. ತಾಯಿ ಭಾಗ್ಯಶ್ರೀಯನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ. ಸಂಗಾಪುರದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥ ತಾಯಿ ಭಾಗ್ಯಶ್ರೀಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮಂಡ್ಯ: ಪಾಂಡವಪುರ ಪೊಲೀಸರಿಂದ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅರೆಸ್ಟ್

ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿಯನ್ನು ಪಾಂಡವಪುರ ಪೊಲೀಸರು ಬಂಧಿಸಿದ್ದಾರೆ. ತಹಶೀಲ್ದಾರ್ ವಿರುದ್ಧ ಕಾನೂನು ಭಂಗ ಚಳವಳಿ ನಡೆಸಲು ಮುಂದಾಗಿದ್ದು, ಚಳವಳಿಗೂ ಮುನ್ನವೇ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ 9 ಹೋರಾಟಗಾರರನ್ನು ಬಂಧಿಸಲಾಗಿದೆ. ಪಾಂಡವಪುರದ ಮಿನಿ ವಿಧಾನ ಸೌಧದ ಮುಂಭಾಗ ನಡೆಯಬೇಕಿದ್ದ ಚಳವಳಿಗಳು ಮುನ್ನ ಬಂಧಿಸಲಾಗಿದೆ.

ಕಲಬುರಗಿ: ಹಳ್ಳದ ನೀರು ಕುಡಿದಿದ್ದ ಹತ್ತು ಮೇಕೆಗಳು ಸಾವು

ಹಳ್ಳದ ನೀರು ಕುಡಿದಿದ್ದ ಹತ್ತು ಮೇಕೆಗಳು ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಣಮಗಿ ಗ್ರಾಮದಲ್ಲಿ ನಡೆದಿದೆ. ಚಂದ್ರಶ್ಯಾ ಅನ್ನೋರಿಗೆ ಸೇರಿದ್ದ ಮೇಕೆಗಳು ಸಾವನ್ನಪ್ಪಿವೆ. ಗ್ರಾಮದ ಹೊರವಲಯದಲ್ಲಿರುವ ಹಳ್ಳದ ನೀರು ಕುಡದಿದ್ದ ಮೇಕೆಗಳು, ನೀರು ಕುಡಿದ ಕೆಲಹೊತ್ತಿನಲ್ಲಿಯೇ ಹತ್ತು ಮೇಕೆಗಳು ಸಾವನ್ನಪ್ಪಿವೆ.

ಇದನ್ನೂ ಓದಿ: ಪೊಲೀಸ್​ ಭದ್ರಕೋಟೆಯಾದ ಇಡೀ ರಾಮನಗರ: ಇಂದು ಭಾರೀ ಹೈಡ್ರಾಮಾಗೆ ಸಾಕ್ಷಿ ಆಗಲಿದೆ ರಾಮನಗರ! ಏನಿದೆ ಸದ್ಯದ ಪರಿಸ್ಥಿತಿ

ಪತಿಯ ಬಿಟ್ಟು ಒಂಟಿಯಾಗಿದ್ದ ನರ್ಸ್ ಶವ ಪತ್ತೆ, ಜೊತೆಗಾರನ ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ ಖಾಕಿ

Published On - 10:06 pm, Thu, 20 January 22