AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರು ಬಿಟ್ಟು ನಮ್ಮ ಜತೆ ಏನು ಚರ್ಚೆ ಮಾಡ್ತಾರೆ? ಸರ್ವಪಕ್ಷ ಸಭೆ ವಿರುದ್ಧ ಹೆಚ್​ಡಿಕೆ ಕೆಂಡಾಮಂಡಲ

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಭಾನುವಾರ ನಡೆದ ಸರ್ವಪಕ್ಷ ಸಭೆಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಗೈರಾಗಿದ್ದರು. ಈ ವಿಚಾರವಾಗಿ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದು, ಸರ್ವಪಕ್ಷಗಳ ಸಭೆಯಲ್ಲಿ ಯಾವ ವಿಚಾರ ಚರ್ಚೆ ಮಾಡಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟು ನಮ್ಮ ಜತೆ ಏನು ಚರ್ಚೆ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.

ನೀರು ಬಿಟ್ಟು ನಮ್ಮ ಜತೆ ಏನು ಚರ್ಚೆ ಮಾಡ್ತಾರೆ? ಸರ್ವಪಕ್ಷ ಸಭೆ ವಿರುದ್ಧ ಹೆಚ್​ಡಿಕೆ ಕೆಂಡಾಮಂಡಲ
ನೀರು ಬಿಟ್ಟು ನಮ್ಮ ಜತೆ ಏನು ಚರ್ಚೆ ಮಾಡ್ತಾರೆ? ಸರ್ವಪಕ್ಷ ಸಭೆ ವಿರುದ್ಧ ಎಚ್​ಡಿಕೆ ಕೆಂಡಾಮಂಡಲ
ಹರೀಶ್ ಜಿ.ಆರ್​.
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 15, 2024 | 7:26 PM

Share

ಬೆಂಗಳೂರು, ಜುಲೈ 15: ತಮಿಳುನಾಡಿಗೆ ನಿತ್ಯ 1 ಟಿಎಂಸಿ (11,000 ಕ್ಯೂಸೆಕ್‌) ಕಾವೇರಿ ನೀರು ಬಡುವಂತೆ ಸಿಡಬ್ಲ್ಯೂಆರ್​ಸಿ (CWRC) ಆದೇಶ ಹೊರಡಿಸಿತ್ತು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಕೃಷ್ಣದಲ್ಲಿ ಭಾನುವಾರ ಸರ್ವಪಕ್ಷಗಳ ಸಭೆ ನಡೆಸಿದ್ದು, ಈ ಸಭೆಯಲ್ಲಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಗೈರಾಗಿದ್ದರು. ಕರ್ನಾಟಕದಲ್ಲಿ ಇದ್ದರೂ ಸಹ ಹೆಚ್​ಡಿಕೆ ಬಂದಿಲ್ಲ ಎಂದು ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಇದೀಗ ಇದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದಾರೆ.

ಈ ವಿಚಾರವಾಗಿ ದೆಹಲಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ್ದು, ಸರ್ವಪಕ್ಷಗಳ ಸಭೆಯಲ್ಲಿ ಯಾವ ವಿಚಾರ ಚರ್ಚೆ ಮಾಡಿದ್ದಾರೆ. ತಮಿಳುನಾಡಿಗೆ ನೀರು ಬಿಟ್ಟು ನಮ್ಮ ಜತೆ ಏನು ಚರ್ಚೆ ಮಾಡುತ್ತಾರೆ? ನೀರನ್ನು ಬಿಟ್ಟು ನಮ್ಮನ್ನು ಸಭೆಗೆ ಕರೆದು ಚರ್ಚೆ ಮಾಡುತ್ತಾರೆ. ಕಾಟಾಚಾರದ ಸಭೆಗೆ ಗೋಡಂಬಿ, ಬಾದಾಮಿ ತಿನ್ನಲು ಹೋಗಬೇಕಿತ್ತಾ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನು ಓದಿ: ತಮಿಳುನಾಡಿಗೆ 1 ಟಿಎಂಸಿ ಬದಲಿಗೆ ನಿತ್ಯ 8000 ಕ್ಯುಸೆಕ್ ಕಾವೇರಿ ನೀರು ಬಿಡಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ

ಕೇಂದ್ರ ಸಚಿವರ ಸಭೆಗೆ ಅಧಿಕಾರಿಗಳು ಹೋಗಬಾರದೆಂಬ ಆದೇಶಿಸಿದ್ದರು. ನಮಗೆ ಪವರ್ ಕೊಡದೆ ಇದ್ದಾಗ ನಮ್ಮಿಂದ ನೀವೇನು ಬಯಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಪೂರ್ವ ನಿಗದಿ ಕಾರ್ಯಕ್ರಮ ಇದ್ದಿದ್ದಕ್ಕೆ ಮಂಡ್ಯಕ್ಕೆ ನಾನು ಹೋಗಿದ್ದೆ. ಇವರ ಅಪ್ಪಣೆ ತೆಗೆದುಕೊಂಡು ಹೋಗಬೇಕಾ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕಾವೇರಿ ವಿವಾದ: ನೀರು ಹರಿಸಲು ಒಪ್ಪದ ಕರ್ನಾಟಕ, ಸರ್ವಪಕ್ಷಗಳ ಸಭೆ ಕರೆದ ತಮಿಳುನಾಡು

ಇವರ ಮಂತ್ರಿ ಪಟಾಲಂ ಹೇಳುವುದನ್ನು ಚರ್ಚಿಸುವ ಅವಶ್ಯಕತೆ ಇಲ್ಲ. ನಮ್ಮಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳೋಕೆ ಕರೆದಿದ್ದಾರಾ? ನಮ್ಮನ್ನು ಯಾವ ರೀತಿ ನಡೆಸಿಕೊಳುತ್ತಿದ್ದೀರಾ ಮೊದಲು ಅದನ್ನು ಸರಿಪಡಿಸಿಕೊಳ್ಳಿ ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ನಾವು ಕಸ ಹೊರುತ್ತೇವೆ, ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ಇವರ ತರ ಕಾನೂನುಬಾಹಿರ ಕೆಲಸ ಮಾಡಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು. ಸರ್ಕಾರ ಆಸ್ತಿ ಲೂಟಿ ಹೊಡೆಯುವ ಕೆಲಸ ನಾನು ಮಾಡುವುದಿಲ್ಲ. ಇವರನ್ನು ಗೆಲ್ಲಿಸಿ ಸಿಎಂ ಮಾಡೋಕೆ ಹೊರಟವರನ್ನೇ ಕಡೆಗಣಿಸಿದ್ದೀರಿ. ನಾನು ಕಾರ್ಪೊರೇಷನ್‌ನಲ್ಲಿ ಕಸವನ್ನು ಹೊತ್ತಿದ್ದೇನೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.