‘ಅಂತಹ ಮಟ್ಟಕ್ಕೆ ನಾನು ಹೋಗೋದಿಲ್ಲ’: ತಾಯಿ ಅಂತ್ಯಕ್ರಿಯೆ ವೇಳೆ ಡಿಕೆಶಿ ಹೆಸರೇಳದ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ!

ಮಾಜಿ ಪ್ರಧಾನಿ HD ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಸಂಸ್ಕಾರ ಹಾಸನದ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಸೋಮವಾರ ನಡೆದಿದೆ. ಇಂದು (ಜುಲೈ 21) ಸಮಾಧಿ ಸ್ಥಳಕ್ಕೆ ಚೆನ್ನಮ್ಮ ಪುತ್ರ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಕುಟುಂಬಸ್ಥರು ಭೇಟಿ ನೀಡಿದ್ರು. ಸಮಾಧಿ ಮುಂದೆ ವಾಗ್ದಾನ ಮಾಡಿದ ಕುಮಾರಸ್ವಾಮಿ ಅವರು, ಡಿಕೆ ಶಿವಕುಮಾರ್​​ ಕುರಿತ ಈ ಒಂದು ವಿಚಾರಕ್ಕೂ ಸ್ಪಷ್ಟನೆ ನೀಡಿದ್ದಾರೆ.

ಅಂತಹ ಮಟ್ಟಕ್ಕೆ ನಾನು ಹೋಗೋದಿಲ್ಲ: ತಾಯಿ ಅಂತ್ಯಕ್ರಿಯೆ ವೇಳೆ ಡಿಕೆಶಿ ಹೆಸರೇಳದ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆ!
Dk Shivakumar And Hd Kumaraswamy
Edited By:

Updated on: Jul 21, 2026 | 4:25 PM

ಹಾಸನ (ಜುಲೈ.21): ತಮ್ಮ ತಾಯಿ ಚೆನ್ನಮ್ಮರ (Chennamma Devebgowda) ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ಸಲ್ಲಿಸಿದ್ದಕ್ಕೆ ನಿನ್ನೆಯೇ (ಜುಲೈ 20) ಕೇಂದ್ರ ಸಚಿವ ಹೆಚ್​​​ಡಿ ಕುಮಾರಸ್ವಾಮಿ (HD Kumaraswamy) ಧನ್ಯವಾದ ಹೇಳಿದ್ದಾರೆ. ಆದ್ರೆ, ಮಾತನಾಡುವಾಗ ಕೇಂದ್ರ ಸಚಿವರ ಹೆಸರುಗಳನ್ನು ಉಲ್ಲೇಖಿಸಿದ್ದು, ಸಿಎಂ ಡಿಕೆ ಶಿವಕುಮಾರ್ ಹೆಸರು ಮಾತ್ರ ಹೇಳದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಬೇರೆ ಬೇರೆ ರೀತಿಯ ಆರೋಪ ಪ್ರತ್ಯಾರೋಪಗಳು ಶುರುವಾಗಿದೆ. ಇದರ ಬೆನ್ನಲ್ಲೇ ಇದೀಗ ಸ್ವತಃ ಕುಮಾರಸ್ವಾಮಿಯೇ ತಾಯಿ ಸಮಾಧಿ ಬಳಿ ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಎಂದು ಹೇಳಿದ್ದು ಡಿಕೆ ಶಿವಕುಮಾರ್ ಅವರ ಕುರಿತೇ ಹೇಳಿದ್ದು ಎಂದಿದ್ದಾರೆ. ಈ ಮೂಲಕ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ.

ಅಂತಿಮ ದರ್ಶನದ ವೇಳೆ ನಾನು ಮೈಕ್ ಹಿಡಿದು ಮಾತನಾಡಿದೆ. ನಾನು ಮಾತಾಡ್ಬೇಕು ಅನ್ನೊ ಉದ್ದೇಶ ಇರಲಿಲ್ಲ. ಮೈಕ್ ಹಿಡಿದ ವೇಳೆ ನನ್ನ ತಾಯಿಯೇ ನನ್ನನ್ನು ಮಾತನಾಡಿಸಿದಂತಾಗಿದೆ. ಆ ವೇಳೆ ನಾನು ಕೇಂದ್ರ ಸರ್ಕಾರದ ಮಂತ್ರಿಯ ಹೆಸರನ್ನ ಹೇಳಿದೆ. ಆದ್ರೆ ರಾಜ್ಯದ ಮುಖ್ಯಮಂತ್ರಿ ಹೆಸರನ್ನ ಹೇಳಲಿಲ್ಲ ಅನ್ನೋ‌ ಮಾತು ಕೇಳಿ ಬಂದಿದೆ. ಡಿಕೆಶಿ ಹೆಸರು ಹೇಳದೆ ಇರೋದು ಉದ್ದೇಶಪೂರ್ವಕವಾಗಿ ಅಲ್ಲ. ಮುಖ್ಯಮಂತ್ರಿ ಎಂದು ಹೇಳಿದ್ದು ಡಿಕೆ ಶಿವಕುಮಾರ್ ಅವರ ಕುರಿತೇ ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ನೋಡಿ: ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ ಭಾವುಕ ಮಾತು

‘ಅಂತಹ ಮಟ್ಟಕ್ಕೆ ನಾನು ಹೋಗೋದಿಲ್ಲ’

ಸಿಎಂ ಡಿಕೆ ಶಿವಕುಮಾರ್ ಹೆಸರು ಹೇಳಲಿಲ್ಲ ಎಂದು ಒಂದೆರಡು ಜನ ಹೇಳಿದ್ರು. ಆದರೆ ನಾನು ನನ್ನ ಇಚ್ಛೆಯಂತೆ ಬಂದ ಪದ ಅಲ್ಲ. ನಾನು ಸಣ್ಣತನ ತೋರಿದೆ ಎಂದು ಯಾರೂ ಕೂಡ ಭಾವಿಸಬೇಡಿ. ಡಿಕೆ ಶಿವಕುಮಾರ್ ಹೆಸರು ಹೇಳದೆ ಇರೋದು ಉದ್ದೇಶಪೂರ್ವಕವಾಗಿ ಅಲ್ಲ. ಮುಖ್ಯಮಂತ್ರಿ ಎಂದು ಹೇಳಿದ್ದು ಡಿಕೆಶಿ ಅವರ ಕುರಿತೇ ಹೇಳಿದ್ದು. ಅಂತಹ ಮಟ್ಟಕ್ಕೆ ನಾನು ಹೋಗೋದೂ ಇಲ್ಲ. ನಮ್ಮ ಕುಟುಂಬದಲ್ಲೂ ಕೂಡ ಭಿನ್ನಾಭಿಪ್ರಾಯ ಬರುತ್ತವೆ. ಆದರೆ ಎಲ್ಲವನ್ನೂ ಮರೆತು ಒಂದು ಧ್ವನಿಯಾಗಿ ಬದುಕುತ್ತಿದ್ದೇವೆ. ಜೇನಿನಗೂಡು ನಾವೆಲ್ಲ ಎನ್ನುವಂತೆ ನಾವು ಬದುಕುತ್ತಿದ್ದೇವೆ. ಪ್ರತಿ ಕುಟುಂಬವೂ ಹೀಗೆ ಬದುಕಲಿ ಅನ್ನೋದು ನನ್ನ ಸಂದೇಶ ಎಂದಿದ್ದಾರೆ.HDKumaraswamy on DkShivakumar: CM ಡಿಕೆಶಿವಕುಮಾರ್ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಹೀಗ್ಯಾಕಂದ್ರು? | #TV9D

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us