ಬೆಂಗಳೂರು, ಮೇ 10: ಕಿಡ್ನ್ಯಾಪ್ ಕೇಸ್‌ನಲ್ಲಿ ಜೈಲು ಪಾಲಾಗಿರುವ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ (HD Revanna) ವಿಲ ವಿಲ ಅಂತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ ಚಡಪಡಿಸುತ್ತಿದ್ದಾರೆ. ರಾತ್ರಿ ನಿದ್ರೆ ಇಲ್ಲದೆಯೇ ಹೈರಾಣಾಗಿದ್ದಾರೆ. ಇದರ ಮಧ್ಯೆ ರೇವಣ್ಣಗೆ ಮತ್ತೊಂದು ಶಾಕ್ ಎದುರಾಗಿದೆ. ಇಂದಿನಿಂದ ಮೂರು ದಿನ ಸರ್ಕಾರಿ ರಜೆ ಹಿನ್ನೆಲೆ ಆಪ್ತರು, ಕುಟುಂಬಸ್ಥರಿಗೆ ರೇವಣ್ಣ ಭೇಟಿಗೆ ಅವಕಾಶವಿಲ್ಲ. ಆಪ್ತರ ಭೇಟಿಯಿಂದ ತನ್ನ ದುಗುಡ ಹೇಳಿಕೊಳ್ಳುತ್ತಿದ್ದರು. ಆ ಮೂಲಕ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಅದಕ್ಕೂ ಸರ್ಕಾರಿ ರಜೆ ಅಡ್ಡಿಯಾಗಿದೆ.
ಬೆಂಗಳೂರಿನ ಬಸವನಗುಡಿಯಲ್ಲಿರುವ ಹೆಚ್.ಡಿ.ರೇವಣ್ಣ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಎಸ್ಐಟಿ ಅಧಿಕಾರಿಗಳಿಂದ ಪಂಚನಾಮೆ ಸಾಧ್ಯತೆ ಹಿನ್ನೆಲೆ ಅಗತ್ಯವಿರುವ ಪರಿಕರಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಭದ್ರತೆ ನೀಡಲಾಗಿದೆ.
ಜಾಮೀನು ನಿರೀಕ್ಷೆಯಲ್ಲಿದ್ದ ಹೆಚ್.ಡಿ.ರೇವಣ್ಣಗೆ ರಿಲೀಫ್ ಸಿಕ್ಕಿಲ್ಲ. ಜಾಮೀನು ಅರ್ಜಿ ವಿಚಾರಣೆಯನ್ನ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ. ಇದರಿಂದಾಗಿ ಕಂಗಾಲಾಗಿರುವ ಹೆಚ್.ಡಿ.ರೇವಣ್ಣ ಮತ್ತಷ್ಟು ಟೆನ್ಷನ್ಗೆ ಒಳಗಾಗಿದ್ದಾರೆ. ಬೇಲ್ ಸಿಗದ್ದಕ್ಕೆ ರೇವಣ್ಣ ಮತ್ತಷ್ಟು ಮಂಕಾಗಿದ್ದಾರೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹೆಚ್.ಡಿ.ರೇವಣ್ಣ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೊಟ್ಟೆ ನೋವು ಕಾಣಿಸಿಕೊಂಡ ಬಳಿಕ ಈಗ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. ಡಾ.ಹರ್ಷವರ್ಧನ್ ರೇವಣ್ಣಗೆ ಚಿಕಿತ್ಸೆಯನ್ನ ನೀಡಿದ್ದಾರೆ. ರೇವಣ್ಣ ಆರೋಗ್ಯದ ಮೇಲೆ ಜೈಲಿನ ಸಿಬ್ಬಂದಿ ನಿಗಾ ಇಟ್ಟಿದ್ದಾರೆ.
ಇದನ್ನೂ ಓದಿ: ಎಚ್.ಡಿ ರೇವಣ್ಣಗೆ ಮತ್ತೆ ಬಿಗ್‌ಶಾಕ್.. ಇನ್ನಷ್ಟು ದಿನ ಜೈಲುವಾಸ ಮುಂದುವರಿಕೆ!
ರೇವಣ್ಣಗೆ ಜೈಲಲ್ಲಿ ಚಿಕಿತ್ಸೆ ನೀಡಿದ ಬಳಿಕ ಮಲಗಲು ದಿವಾನ್ ಕಾಟ್ ನೀಡಲಾಗಿದೆ. ಜೈಲಿನ ಕ್ವಾರಂಟೈನ್ ರೂಮ್ನಲ್ಲಿ ಇದ್ದಾರೆ. ಈ ಹಿಂದೆ ಪಿಎಸ್ಐ ನೇಮಕಾತಿಯ ಅಕ್ರಮ ಕೇಸ್‌ನಲ್ಲಿ ಅಮೃತ್ ಪಾಲ್ ಇದ್ದ ಕೊಠಡಿಯಲ್ಲಿಯೇ ರೇವಣ್ಣ ಇದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣಕ್ಕೆ ಸ್ಫೋಟಕ ತಿರುವು: ಸಂತ್ರಸ್ತೆಗೆ ಬೆದರಿಕೆ, ಮಹಿಳಾ ಆಯೋಗದಿಂದ ಬಹಿರಂಗ
ಹೆಚ್.ಡಿ.ರೇವಣ್ಣಗೆ ಧೈರ್ಯ ತುಂಬಲು ನಿನ್ನೆ ದಳ ಶಾಸಕರು ಭೇಟಿ ನೀಡಿದ್ದರು. ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ಅರಕಲಗೂಡು ಶಾಸಕ ಎ.ಮಂಜು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ರೇವಣ್ಣಗೆ ಮಾನಸಿಕ ಸ್ಥೈರ್ಯ ತುಂಬಿದ್ದರು. ಶಾಸಕರ ಭೇಟಿ ವೇಳೆ ನ್ಯಾಯಾಲಯ ಇದೆ, ಧರ್ಮ ಇದೆ ಅಂತಾ ಹೇಳಿರುವ ರೇವಣ್ಣ. ಸೋಮವಾರ ಏನಾಗುತ್ತೆ ನೋಡೋಣ ಅಂತಾ ತಿಳಿಸಿದ್ರಂತೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.