ಖಾವಿ ಕಳಚಿ ಟೀಶರ್ಟ್ನಲ್ಲಿ ಸುತ್ತಾಡುತ್ತಿದ್ದ ಹಾಲಶ್ರೀಯನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸರು, ಇಲ್ಲಿದೆ ಸ್ವಾಮೀಜಿ ಟ್ರಾವೆಲ್ ಹಿಸ್ಟರಿ
ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಅರೆಸ್ಟ್ ಆಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಮೂರನೇ ಆರೋಪಿ ಹಾಲಶ್ರೀ ಒಡಿಶಾದ ಕಟಕ್ನಲ್ಲಿ ಸಿಕ್ಕಿಬಿದ್ದಿದ್ದಾನೆ. ಇನ್ನು ಸ್ವಾಮೀಜಿ ಸಿಕ್ಕಿಬಿದ್ದಿದ್ದೇಗೆ? ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆಯೇ ಹಾಲಶ್ರೀ ಎಲ್ಲಿಂದ ಅಲ್ಲಿಗೆ ಹೋಗಿದ್ದೇಗೆ? ಎನ್ನುವ ಸ್ವಾಮೀಜಿ ಟ್ರಾವೆಲ್ ಹಿಸ್ಟರಿ ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, (ಸೆಪ್ಟೆಂಬರ್ 19): ಚೈತ್ರಾ ಕುಂದಾಪುರ(Chaitra Kundapura) ವಂಚನೆ ಪ್ರಕರಣದ 3ನೇ ಆರೋಪಿಯಾಗಿರುವ ವಿಜಯನಗರದ(Vijayanagara) ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀಯನ್ನು(Abhinava Halashree) ಸಿಸಿಬಿ ಪೊಲೀಸರ ಮಾಹಿತಿ ಮೇರೆ ಕಟಕ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಾವಿ ಬಿಟ್ಟು ಟೀಶರ್ಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಭವನೇಶ್ವರಿಯಿಂದ ಮಾರ್ಗವಾಗಿ ವಾರಾಣಸಿಗೆ ತೆರಳಲು ರೈಲಿನಲ್ಲಿ ಕುಳಿತುಕೊಂಡಿದ್ದ ವೇಳೆ ಪೊಲೀಸರು ಲಾಕ್ ಮಾಡಿದ್ದಾರೆ. ಬೆಂಗಳೂರು ಸಿಸಿಬಿ ಪೊಲೀಸರ ಮಾಹಿತಿ ಮೇರೆಗೆ ನಿನ್ನೆ(ಸೆಪ್ಟೆಂಬರ್ 18) ರಾತ್ರಿ 9:30ಕ್ಕೆ ಹಾಲಶ್ರೀಯನ್ನು ಕಟಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈಗಾಗಲೇ ಸಿಸಿಬಿ ಅಧಿಕಾರಿಗಳು ಕಟಕ್ ತಲುಪಿದ್ದು, ಟ್ರಾನ್ಸಿಟ್ ವಾರಂಟ್ ಪಡೆದು iಂದು (ಸೆಪ್ಟೆಂಬರ್ 19) ಸಂಜೆ ವೇಳೆಗೆ ಬೆಂಗಳೂರಿಗೆ ಹೊರಡಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸ್ವಾಮೀಜಿ ಸಿಕ್ಕಿಬಿದ್ದಿದ್ದೇಗೆ? ಚೈತ್ರಾ ಕುಂದಾಪುರ ಅರೆಸ್ಟ್ ಆಗುತ್ತಿದ್ದಂತೆಯೇ ಹಾಲಶ್ರೀ ಎಲ್ಲಿಂದ ಎಲ್ಲಿಗೆ ಹೋಗಿದ್ದರು? ಎನ್ನುವ ವಿವರ ಇಲ್ಲಿದೆ.
ಸ್ವಾಮೀಜಿ ಸಿಕ್ಕಿಬಿದ್ದಿದ್ದೇಗೆ?
ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆಯೇ ಹಾಲಶ್ರೀ ಇತ್ತ ವಿಜಯನಗರದ ಹಿರೇ ಹಡಗಲಿಯ ಮಠಕ್ಕೂ ಬಾರದೇ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ಮೊದಲು ಹೊಸ ಮೊಬೈಲ್ ‘ಖರೀದಿ ಮಾಡಿದ್ದ ಸ್ವಾಮೀಜಿ, ಪ್ರತಿಯೊಂದು ಕಾಲ್‌ಗೂ ಮೊಬೈಲ್ ಸಿಮ್ ಚೇಂಜ್ ಮಾಡುತ್ತಿದ್ದ, ಆದ್ರೆ ಕರ್ನಾಟಕಕ್ಕೆ ಪೋನ್ ಮಾಡಿದ್ದಾಗ ಸಿಕ್ಕಿಬಿದ್ದಿದ್ದಾನೆ. ಕರ್ನಾಟಕದ ಯಾರಿಗೋ ಒಬ್ಬರಿಗೆ ಕರೆ ಮಾಡಿದ್ದ ಲೋಕೇಷನ್ ಮೂಲಕ ಪತ್ತೆ ಹಚ್ಚಿ, ಹಾಲಶ್ರೀಯನ್ನು ಟ್ರೇಸ್ ಮಾಡಿ ಬಂಧಿಸುವಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ಗ್ಯಾಂಗ್ನ ಪ್ರಮುಖ ಆರೋಪಿ ಹಾಲಶ್ರೀ ಅರೆಸ್ಟ್, ದೊಡ್ಡವರ ಹೆಸರು ಹೊರಬರುತ್ತಾ?
ಹಾಲಶ್ರೀ ಎಲ್ಲಿಂದ ಎಲ್ಲಿಗೆ ಹೋಗಿದ್ದು ಗೊತ್ತಾ?
ಕರ್ನಾಟಕದ ಮೈಸೂರಿಗೆ ಹೋಗಿದ್ದ ಸ್ವಾಮೀಜಿ ಅಲ್ಲಿಂದ ಕಾರಿನಲ್ಲಿ ಆಂಧ್ರಪ್ರದೇಶಕ್ಕೆ ತೆರಳಿದ್ದ. ಬಳಿಕ ಹೈದರಾಬಾದ್ ವಿಮಾನ ನಿಲ್ದಾಣದಿಂದ ಓಡಿಶಾದ ಕಟಕ್‌ಗೆ ತೆರಳಿದ್ದ ಸ್ವಾಮೀಜಿ, ನಂತರ ಖಾವಿ ಬಿಟ್ಟು ಟೀಶರ್ಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಭವನೇಶ್ವರಿಯಿಂದ ಮಾರ್ಗವಾಗಿ ವಾರಾಣಸಿಗೆ ತೆರಳಲು ರೈಲಿನಲ್ಲಿ ಕುಳಿತುಕೊಂಡಿದ್ದ ವೇಳೆ ಸಿಸಿಬಿ ಪೊಲೀಸರು ಲಾಕ್ ಮಾಡಿದ್ದಾರೆ.
ಅಭಿನವ ಹಾಲಾಶ್ರೀ ಟ್ರಾವೆಲ್ ಹಿಸ್ಟರಿ
- ಚೈತ್ರಾ ಕುಂದಾಪುರ ಅರೆಸ್ಟ್ ಆಗುತ್ತಿದ್ದಂತೆಯೇ ಡ್ರೈವರ್ ನಿಂಗರಾಜು ಜೊತೆ ಎಸ್ಕೇಪ್ ಆಗಿದ್ದ ಸ್ವಾಮೀಜಿ ಸೆಪ್ಟೆಂಬರ್ 11ರ ರಾತ್ರಿ ಹಿರೇಹಡಗಲಿಯಿಂದ ಮೈಸೂರಿಗೆ ತೆರಳಿದ್ದರು.
- ಸೆಪ್ಟೆಂಬರ್ 12ನೇ ತಾರೀಖು ಮೈಸೂರಿನ HAL ವೀರಸ್ವಾಮಿ ಮಠದಲ್ಲಿ ಒಂದು ದಿನ ವಾಸ ಮಾಡಿದ್ದರು.
- ಸೆಪ್ಟೆಂಬರ್ 13ನೇ ತಾರೀಖು ಬೆಳಿಗ್ಗೆ ಮೈಸೂರಿನ ಬಸ್ ಸ್ಟ್ಯಾಂಡ್ ಮುಂದಿರುವ ಅಪೂರ್ವ ಮೊಬೈಲ್ ಸ್ಟೋರ್ ಗೆ ತೆರಳಿದ್ದ ಸ್ವಾಮೀಜಿ, ನಾಲ್ಕು ಮೊಬೈಲ್ ಹಾಗೂ ನಾಲ್ಕು ಸಿಮ್ ಖರೀದಿ.
- ಬಿಳಿಕ ಎರಡು ಮೊಬೈಲ್ ಹಾಗೂ ಎರಡು ಸಿಮ್ ಕೊಂಡೊಯ್ದಿದ್ದ ಸ್ವಾಮೀಜಿ, ಅದೇ ದಿನ ಮಧ್ಯಾಹ್ನ ಅತ್ಯಾಪ್ತ ಪ್ರಣವ್ನಿಂದ ನಿಂಗರಾಜು ಮೂಲಕ 50 ಲಕ್ಷ ರೂಪಾಯಿ ತರಿಸಿದ್ದ.
- ನಂತರ ಅದೇ ಕಾರ್ ನಲ್ಲಿ ನಂಬರ್ ಪ್ಲೇಟ್ ತೆಗೆದು ಎಸ್ಕೇಪ್
- ಮೈಸೂರುನಿಂದ ಹೈದರಾಬಾದ್ (ಸಿಖಂದರಾಬಾದ್) ಗೆ ತೆರಳಿದ್ದ ಸ್ವಾಮೀಜಿ.
- ಇತ್ತ ನಿಂಗರಾಜು ವಶಕ್ಕೆ ಪಡೆಯುತಿದ್ದಂತೆ ಶ್ರೀಶೈಲಗೆ ಪರಾರಿಯಾಗಿದ್ದ ಅಭಿನವ ಹಾಲಾಶ್ರಿ.
- ನಂತರ ಪೂರಿ- ಗಂಜಾಂ- ಕಟಕ್‌ಗೆ ಟ್ರೈನ್ ನಲ್ಲೇ ಟ್ರಾವೆಲ್ ಮಾಡಿದ್ದ ಸ್ವಾಮೀಜಿ
- ಸದ್ಯ ಕಟಕ್ ನಲ್ಲಿ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.
- ಪೊಲೀಸರಿಗೆ ಅನುಮಾನ ಬಾರದ ರೀತಿ ಖಾವಿ ಕಳಚಿಟ್ಟು ವೇಷಭೂಷಣ ಬದಲಾಯಿಸಿಕೊಂಡು ಸಂಚರಿಸುತಿದ್ದ ಹಾಲಶ್ರೀ
Published On - 12:35 pm, Tue, 19 September 23