Ayodhya Ram Mandir: ರಾಮಮಂದಿರ ಉದ್ಘಾಟನೆ ದಿನ ಎಲ್ಲೆಡೆ ಕಟ್ಟೆಚ್ಚರ, ಖಾಕಿ ಪಡೆ ಫುಲ್ ಅಲರ್ಟ್

ಬೆಂಗಳೂರಿನಾದ್ಯಂತ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಪಡೆ ಕಣ್ಣಿಟ್ಟಿದೆ. ಯಾವುದೇ ರ್ಯಾಲಿಗಳಿಗೆ ಅವಕಾಶ ಇಲ್ಲ. ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಕ್ಕೆ ಯಾವುದೇ ಅಭ್ಯಂತರ ಇಲ್ಲ. ಸದ್ಯ ಪೊಲೀಸರು ಈಗಾಗಲೇ ಧಾರ್ಮಿಕ ಮುಖಂಡರ ಸಭೆ ಮಾಡಿದ್ದು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಕಿವಿ ಮಾತು ಹೇಳಿದ್ದಾರೆ.

Ayodhya Ram Mandir: ರಾಮಮಂದಿರ ಉದ್ಘಾಟನೆ ದಿನ ಎಲ್ಲೆಡೆ ಕಟ್ಟೆಚ್ಚರ, ಖಾಕಿ ಪಡೆ ಫುಲ್ ಅಲರ್ಟ್
ಅಯೋಧ್ಯೆ ರಾಮ ಮಂದಿರ
Follow us
| Updated By: ಆಯೇಷಾ ಬಾನು

Updated on:Jan 21, 2024 | 8:54 AM

ಬೆಂಗಳೂರು, ಜ.21: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಆ ದಿನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಸೂಚನೆ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಿ. ಕಾನೂನು ವಿರೋಧಿ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.

ಇನ್ನು ಬೆಂಗಳೂರಿನಾದ್ಯಂತ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಖಾಕಿ ಪಡೆ ಕಣ್ಣಿಟ್ಟಿದೆ. ಯಾವುದೇ ರ್ಯಾಲಿಗಳಿಗೆ ಅವಕಾಶ ಇಲ್ಲ. ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಕ್ಕೆ ಯಾವುದೇ ಅಭ್ಯಂತರ ಇಲ್ಲ. ಸದ್ಯ ಪೊಲೀಸರು ಈಗಾಗಲೇ ಧಾರ್ಮಿಕ ಮುಖಂಡರ ಸಭೆ ಮಾಡಿದ್ದು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಕಿವಿ ಮಾತು ಹೇಳಿದ್ದಾರೆ.

ಮಂಗಳೂರು ನಗರದಾದ್ಯಂತ ಪೊಲೀಸರ ಕಟ್ಟೆಚ್ಚರ

ಮತ್ತೊಂದೆಡೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನಲೆ‌ ಮಂಗಳೂರು ನಗರದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಮಧ್ಯರಾತ್ರಿಯಿಂದ 23ರ ಮುಂಜಾನೆವರೆಗೆ ಮದ್ಯ ಮಾರಾಟ ಬಂದ್​ಗೆ ಪ್ರಸ್ತಾವನೆ ಹೊರಡಿಸಲಾಗಿದೆ. ಫ್ಲೆಕ್ಸ್, ಬಂಟಿಂಗ್ಸ್ ಗಳ ಮೇಲೆ ನಿಗಾ ಇಡಲು ಪಾಲಿಕೆಗೆ ಸೂಚನೆ ನೀಡಿದೆ. 196 ಕಡೆ ಧಾರ್ಮಿಕ ಕಾರ್ಯಕ್ರಮ ಸ್ಥಳ ಗುರುತು ಮಾಡಿ ನಿಗಾ ಇಡಲಾಗಿದೆ.

131 ಸೂಕ್ಷ್ಮ ಪ್ರದೇಶ ಗುರುತಿಸಲಾಗಿದೆ. 57 ಸೆಕ್ಟರ್ ಮೊಬೈಲ್ ಸ್ವ್ಕಾಡ್ ಹಗಲು ರಾತ್ರಿ ಗಸ್ತು ಕಾರ್ಯ ನಿರ್ವಹಿಸಲಿದೆ. 14 ಚೆಕ್ ಪಾಯಿಂಟ್ ನಿಯೋಜನೆ ಮಾಡಲಾಗಿದೆ. 9 ಸಿಎಆರ್, 3 ಕೆಎಸ್ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಮಂಗಳೂರಿನ ಎಲ್ಲಾ ಕಡೆ ವಿದ್ವಂಸಕ ತಪಾಸಣಾ ತಂಡದಿಂದ ತಪಾಸಣೆ ನಡೆಸಲಾಗುತ್ತೆ. ಮೆರವಣಿಗೆ, ರ್ಯಾಲಿಗಳಿಗೆ ಅವಕಾಶ ಇಲ್ಲ. 3 ಡಿಸಿಪಿ, 6 ಎಸಿಪಿ, 11 ಪಿಐ, 37 ಪಿಎಸ್ಐ ಹಾಗೂ 781 ಪೊಲೀಸ್ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ಅಯೋಧ್ಯೆ ಜಗಮಗ, ಮದುವಣಗಿತ್ತಿಯಂತೆ ಸಿಂಗಾರಗೊಂಡ ದೇವನಗರಿ

ಅಯೋಧ್ಯೆಯ ರಾಮಮಂದಿರದಲ್ಲಿ ಭಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಶತಶತಮಾನಗಳಿಂದ ರಾಮ ಭಕ್ತರ ಕನವರಿಕೆಗೆ ಫಲಸಿಗುವ ಸನ್ನಿವೇಶ ಒದಗಿ ಬರಲಿದೆ. ಅದಕ್ಕಾಗಿ ದೇವನಗರಿ ಅಯೋಧ್ಯೆ ಹಿಂದೆಂದಿಗಿಂತಲೂ ನವ ವೈಭವದಲ್ಲಿ ಅದ್ಧೂರಿಯಾಗಿ ಸಜ್ಜುಗೊಂಡಿದೆ. ನಾಳೆ ಮಧ್ಯಾಹ್ನ 12 ಗಂಟೆ 29ನಿಮಿಷ ಶುಭ ಮುಹೂರ್ತದಲ್ಲಿ. ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:53 am, Sun, 21 January 24