ಹೃದಯಾಘಾತದಿಂದ ಮೃತಪಟ್ಟರೂ ಬಸ್​ ಚಾಲಕನಿಗೆ ಪರಿಹಾರ; ಹೈಕೋರ್ಟ್​ ಮಹತ್ವದ ಆದೇಶ

ಎನ್ಇಕೆಆರ್​ಟಿಸಿ ಚಾಲಕ ವಿಜಯಕುಮಾರ್​​ ಸತತ 11 ಗಂಟೆ ಕರ್ತವ್ಯ ನಿರ್ವಹಣೆ ಮಾಡಿದ್ದರು. ಈ ವೇಳೆ ಹೃದಯಾಘಾತದಿಂದ ಮೃತ ಪಟ್ಟಿದ್ದರು. ಹೃದಯಾಘಾತ ಕೂಡ ಅಪಘಾತವೆಂದು ಪರಿಗಣಿಸಿ 21,98,090 ರೂಪಾಯಿ ಪರಿಹಾರಕ್ಕೆ ಕಾರ್ಮಿಕ ಆಯುಕ್ತರು ಆದೇಶಿಸಿದ್ದರು.

ಹೃದಯಾಘಾತದಿಂದ ಮೃತಪಟ್ಟರೂ ಬಸ್​ ಚಾಲಕನಿಗೆ ಪರಿಹಾರ; ಹೈಕೋರ್ಟ್​ ಮಹತ್ವದ ಆದೇಶ
ಸಾಂಕೇತಿಕ ಚಿತ್ರ
Edited By:

Updated on: Dec 28, 2020 | 10:10 PM

ಬೆಂಗಳೂರು: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಬಸ್​ ಚಾಲಕನಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.

‌ಎನ್ಇಕೆಆರ್​ಟಿಸಿ ಚಾಲಕ ವಿಜಯಕುಮಾರ್​​ ಸತತ 11 ಗಂಟೆ ಕರ್ತವ್ಯ ನಿರ್ವಹಣೆ ಮಾಡಿದ್ದರು. ಈ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಹೃದಯಾಘಾತ ಕೂಡ ಅಪಘಾತವೆಂದು ಪರಿಗಣಿಸಿ 21,98,090 ರೂಪಾಯಿ ಪರಿಹಾರಕ್ಕೆ ಕಾರ್ಮಿಕ ಆಯುಕ್ತರು ಆದೇಶಿಸಿದ್ದರು. ಈ ಬಗ್ಗೆ ಎನ್ಇಕೆಆರ್​ಟಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಸುನಿಲ್ ದತ್ ಯಾದವ್, ಪಿ.ಎನ್.ದೇಸಾಯಿರವರಿದ್ದ ಪೀಠ ವಜಾಗೊಳಿಸಿತು.

ಈ ಮೂಲಕ ಕಾರ್ಮಿಕ ಆಯುಕ್ತರ ಆದೇಶವನ್ನು ಎತ್ತಿ ಹಿಡಿಯಿತು. ಬಸ್​ ಚಾಲಕನಿಗೆ ಕಾರ್ಯಭಾರದ ಒತ್ತಡದಿಂದ ಹೃದಯಾಘಾತವಾದ ಸಾಧ್ಯತೆ ಇದೆ. ಹೀಗಾಗಿ, ಅವರ ಕುಟುಂಬ ಪರಿಹಾರ ಪಡೆಯಲು ಅರ್ಹವಾಗಿದೆ ಎಂದು ಕೋರ್ಟ್​ ಹೇಳಿದೆ.

ಕಬ್ಬನ್ ಪಾರ್ಕ್ ಒಳಾಂಗಣದಲ್ಲಿ ವಾಹನಗಳ ಓಡಾಟ ನಿಷೇಧಿಸಿ: 5 ತಿಂಗಳ ಮಗುವಿನಿಂದ ಹೈಕೋರ್ಟ್​ಗೆ ಅರ್ಜಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us