ಬೆಂಗಳೂರು: ವಕೀಲರ ಡ್ರೆಸ್ ಕೋಡ್ಗಿದ್ದ ವಿನಾಯಿತಿಯನ್ನು ರದ್ದು ಮಾಡಲಾಗಿದೆ ಎಂದು ಸಿಜೆ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಫೆಬ್ರವರಿ 1ರಿಂದ ವಕೀಲರಿಗೆ ಕಪ್ಪು ಕೋಟ್, ಗೌನ್ ಮತ್ತು ಬ್ಯಾಂಡ್ ಧರಿಸುವುದು ಕಡ್ಡಾಯ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಕೊವಿಡ್ ಹಿನ್ನೆಲೆಯಲ್ಲಿ, ಈ ಹಿಂದೆ, ವಕೀಲರ ಡ್ರೆಸ್ ಕೋಡ್ಗೆ ವಿನಾಯಿತಿ ನೀಡಲಾಗಿತ್ತು. ಇದೀಗ, ಹೈಕೋರ್ಟ್ ಆವರಣಕ್ಕೆ ವಕೀಲರ ವಾಹನಗಳಿಗೂ ಅನುಮತಿ ನೀಡಲಾಗಿದೆ. ಜೊತೆಗೆ, ಕ್ಯಾಂಟೀನ್ನಲ್ಲಿ ಶೇ.50ರಷ್ಟು ಕುರ್ಚಿ ಬಳಕೆಗೂ ಅನುಮತಿ ನೀಡಲಾಗಿದೆ.
ಇದಲ್ಲದೆ, ನ್ಯಾಯಾಲಯದ ಆವರಣದಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಈ ಎಲ್ಲಾ ಅಂಶಗಳನ್ನು ಸಿಜೆ ಆದೇಶದಂತೆ ರಿಜಿಸ್ಟ್ರಾರ್ ಜನರಲ್ ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಬೆಳ್ಳಂದೂರು ಜಮೀನು ಡಿನೋಟಿಫಿಕೇಶನ್ ಕೇಸ್: ಸಿಎಂ B.S. ಯಡಿಯೂರಪ್ಪಗೆ ಬಿಗ್ ರಿಲೀಫ್