ಎಸಿಬಿ ಎಡಿಜಿಪಿಗೆ ಆತ್ಮಸಾಕ್ಷಿಯಿಂದ ಕೇಳಿಕೊಳ್ಳಲು ಹೇಳಿ ಎಂದು ಎಡಿಜಿಪಿಗೆ ಮತ್ತೆ ಝಾಡಿಸಿದ ನ್ಯಾ. ಹೆಚ್.ಪಿ. ಸಂದೇಶ್!

ಎಸಿಬಿ ಎಡಿಜಿಪಿಯನ್ನು ರಕ್ಷಿಸಿಕೊಳ್ಳಲಿಕ್ಕಾಗಿಯೇ ನೀಡಿಲ್ಲ. ಎಸಿಬಿ ಎಡಿಜಿಪಿ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ. ಎಸಿಬಿ ಎಡಿಜಿಪಿ ವಿರುದ್ಧ ಅನುಮಾನ ಬರಲೂ ಕಾರಣಗಳಿವೆ. ನಿಮ್ಮ ಎಸಿಬಿ ಎಡಿಜಿಪಿ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲು ಹೇಳಿ ಎಂದು ಎಸಿಬಿ ಗೆ ನ್ಯಾ. ಹೆಚ್.ಪಿ. ಸಂದೇಶ್ ಸ್ಪಷ್ಟ ಸಂದೇಶ ಕಳಿಸಿದರು.

ಎಸಿಬಿ ಎಡಿಜಿಪಿಗೆ ಆತ್ಮಸಾಕ್ಷಿಯಿಂದ ಕೇಳಿಕೊಳ್ಳಲು ಹೇಳಿ ಎಂದು ಎಡಿಜಿಪಿಗೆ ಮತ್ತೆ ಝಾಡಿಸಿದ ನ್ಯಾ. ಹೆಚ್.ಪಿ. ಸಂದೇಶ್!
ಎಡಿಜಿಪಿ ವಿರುದ್ಧ ನನಗೇನೂ ವೈಯಕ್ತಿಕ ದ್ವೇಷವಿಲ್ಲ: ಜಡ್ಜ್​ 'ಸಂದೇಶ'
TV9kannada Web Team

| Edited By: sadhu srinath

Jul 07, 2022 | 3:54 PM

ಬೆಂಗಳೂರು: ಬೆಂಗಳೂರು ಜಿಲ್ಲಾಧಿಕಾರಿ ಜೆ ಮಂಜುನಾಥ್ ಅವರಿಂದ (J Manjunath) ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ಇಂದು ಮುಂದುವರಿದಿದೆ. ಈ ವೇಳೆ ನ್ಯಾ. ಹೆಚ್.ಪಿ. ಸಂದೇಶ್ ಅವರು (Judge HP Sandesh) ಮತ್ತಷ್ಟು ಖಾರವಾಗಿ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ (ACB ADGP) ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ (Seemanthkumar Singh) ವಿರುದ್ಧ ವಿಚಾರಣೆ ವೇಳೆಯೇ ಟೀಕಾಪ್ರಹಾರ ನಡೆಸಿದ್ದಾರೆ.

ನೀವು ಕೊಟ್ಟ ವರದಿ ಸಂಪೂರ್ಣ ಸತ್ಯವಾದ ವರದಿಯಲ್ಲ. ನೀವು ಈ ಆಟ ಆಡುತ್ತೀರೆಂದು ತಿಳಿದೇ ಮಾಹಿತಿ ಪಡೆದಿದ್ದೇನೆ. ನೀವು ಈ ವರ್ಷ ಸಲ್ಲಿಸಿದ ಬಿ ರಿಪೋರ್ಟ್ ಗಳ ಮಾಹಿತಿ ನೀಡಿಲ್ಲ. ಆದರೆ ಮಾರ್ಚ್, ಜೂನ್ ತಿಂಗಳ ಬಿ ರಿಪೋರ್ಟ್ ಸಲ್ಲಿಸಿದ್ದೀರಿ. 819 ಸರ್ಚ್ ವಾರೆಂಟ್ ಗಳನ್ನು ಪಡೆಯಲಾಗಿತ್ತು. 28 ಸರ್ಚ್ ವಾರೆಂಟ್ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಕೋರ್ಟ್ ಹೇಳಿದ ಮೇಲೆ ಜಿಲ್ಲಾಧಿಕಾರಿಯನ್ನು ಆರೋಪಿ ಮಾಡಿದ್ದೀರಿ. ಈಗ ದಾಳಿ ಮಾಡಿದ್ದೀರಿ, ಮೊದಲೇ ಏಕೆ ಮಾಡಲಿಲ್ಲ? ಕ್ರಮ ಕೈಗೊಳ್ಳುವುದು ಎಸಿಬಿ ಎಡಿಜಿಪಿ ಕರ್ತವ್ಯವಲ್ಲವೇ? ನೌಕರನಲ್ಲದ ವ್ಯಕ್ತಿ ಡಿಸಿಗೆ ಸಹಾಯಕನಾಗಲು ಹೇಗೆ ಸಾಧ್ಯ? ಡಿಸಿ ಸ್ವತಃ 1ನೇ ಆರೋಪಿ ಜೊತೆ ಮಾತನಾಡಲು ಹೇಳಿದ್ದಾರೆ. 1 ನೇ ಆರೋಪಿ ಆದೇಶ ಸಿದ್ದವಿದ್ದರೂ ಡಿಸಿ ಏಕೆ ಸಹಿ ಮಾಡಿರಲಿಲ್ಲ? ಎಂದು ಒಂದೇ ಸಮನೆ ಎಸಿಬಿ ಪರ ವಕೀಲರಿಗೆ ನ್ಯಾ. ಹೆಚ್.ಪಿ. ಸಂದೇಶ್ ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.

ಎಡಿಜಿಪಿಗೆ ಬಗ್ಗದ ಎಸ್‌ಪಿಗೆ ಹೊಣೆ ನೀಡಿಲ್ಲ… ಇದೇನಾ ನಿಮ್ಮ ಕಾರ್ಯವೈಖರಿ: ಹೈಕೋರ್ಟ್ ಕಿಡಿಕಿಡಿ

ಬೆಂಗಳೂರಿಗೆ ಸಾಮಾನ್ಯವಾಗಿ ಒಬ್ಬ ಎಸ್‌ಪಿ ಇರುತ್ತಾರೆ. ಎಸಿಬಿ ಕಾರ್ಯಾಲಯ ಸಹಾಯಕರಾಗಿ ಮತ್ತೊಬ್ಬರ ನೇಮಕವಾಗಿರುತ್ತದೆ. ಆ ಮತ್ತೊಬ್ಬ ಎಸ್‌ಪಿಗೆ ಬಿಡಿಎ, ಬಿಬಿಎಂಪಿ ಹೊಣೆ ನೀಡಿದ್ದಾರೆ. ಆದರೆ ಎಡಿಜಿಪಿಗೆ ಬಗ್ಗದ ಎಸ್‌ಪಿ ಯತೀಶ್ ಚಂದ್ರರಿಗೆ ಹೊಣೆ ನೀಡಿಲ್ಲ. ಇದೇನಾ ನಿಮ್ಮ ಕಾರ್ಯವೈಖರಿ ಎಂದು ಎಸಿಬಿ ಎಡಿಜಿಪಿ ಪರ ವಕೀಲರನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಪ್ರಶ್ನಿಸಿದೆ. ಬೆಂಗಳೂರಿಗೆ ಸಾಮಾನ್ಯವಾಗಿ ಒಬ್ಬ ಎಸ್‌ಪಿ ಇರುತ್ತಾರೆ. ಎಸಿಬಿ ಕಾರ್ಯಾಲಯ ಸಹಾಯಕರಾಗಿ ಮತ್ತೊಬ್ಬರ ನೇಮಕವಾಗಿರುತ್ತದೆ. ಆ ಮತ್ತೊಬ್ಬ ಎಸ್‌ಪಿಗೆ ಬಿಡಿಎ, ಬಿಬಿಎಂಪಿ ಹೊಣೆ ನೀಡಿದ್ದಾರೆ. ಆದರೆ ಎಡಿಜಿಪಿಗೆ ಬಗ್ಗದ ಎಸ್‌ಪಿ ಯತೀಶ್ ಚಂದ್ರರಿಗೆ ಹೊಣೆ ನೀಡಿಲ್ಲ. ಇದೇನಾ ನಿಮ್ಮ ಕಾರ್ಯವೈಖರಿ ಎಂದು ಎಸಿಬಿ ಎಡಿಜಿಪಿ ಪರ ವಕೀಲರನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಪ್ರಶ್ನಿಸಿದೆ.

ಎಡಿಜಿಪಿ ವಿರುದ್ಧ ನನಗೇನೂ ವೈಯಕ್ತಿಕ ದ್ವೇಷವಿಲ್ಲ: ಜಡ್ಜ್​ ‘ಸಂದೇಶ’

2022 ರಲ್ಲಿ ದಾಖಲಾದ ಬಿ ರಿಪೋರ್ಟ್ ಗಳ ಮಾಹಿತಿ ನೀಡಿಲ್ಲ. ಎಸಿಬಿ ಎಡಿಜಿಪಿಯನ್ನು ರಕ್ಷಿಸಿಕೊಳ್ಳಲಿಕ್ಕಾಗಿಯೇ ನೀಡಿಲ್ಲ. ಎಸಿಬಿ ಎಡಿಜಿಪಿ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ. ಎಸಿಬಿ ಎಡಿಜಿಪಿ ವಿರುದ್ಧ ಅನುಮಾನ ಬರಲೂ ಕಾರಣಗಳಿವೆ. ನಿಮ್ಮ ಎಸಿಬಿ ಎಡಿಜಿಪಿ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲು ಹೇಳಿ ಎಂದು ಎಸಿಬಿ ಗೆ ನ್ಯಾ. ಹೆಚ್.ಪಿ. ಸಂದೇಶ್ ಸ್ಪಷ್ಟ ಸಂದೇಶ ಕಳಿಸಿದರು.

ಹೈಕೋರ್ಟ್ ಮೊರೆ ಹೋದ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್

ಎಸಿಬಿ ಎಡಿಜಿಪಿ ವಿರುದ್ಧ ನ್ಯಾ.ಹೆಚ್.ಪಿ.ಸಂದೇಶ್ ಟೀಕೆ ಹಿನ್ನೆಲೆ ಟೀಕೆಗೆ ನಿರ್ಬಂಧ ಕೋರಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೈಕೋರ್ಟ್ಗೆ ರಿಟ್ ಸಲ್ಲಿಸಿದ್ದಾರೆ. ಸರ್ವಿಸ್ ರೆಕಾರ್ಡ್ ಕೇಳಿರುವ ಹೈಕೋರ್ಟ್ ಆದೇಶ ರದ್ದುಪಡಿಸಬೇಕು, ತಮ್ಮ ವಿರುದ್ಧ ಟೀಕೆ ಮಾಡದಂತೆ ನಿರ್ಬಂಧ ಹೇರಬೇಕು ಹಾಗೂ ಆದೇಶದಲ್ಲಿ ನ್ಯಾ. ಸಂದೇಶ್ ಅವರ ಮೌಖಿಕ ಅಭಿಪ್ರಾಯ ತೆಗೆಯುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada