ಬೆಂಗಳೂರು, ಜೂನ್ 15: ಕರುನಾಡಿನ ಜನರಿಗೆ ಇಂಧನ ದರ ಏರಿಕೆಯ ಶಾಕ್ ತಟ್ಟಿದೆ. ಲೋಕಸಭೆ ಚುನಾವಣೆ ಮುಗಿದಿದ್ದೇ ತಡ ಪೆಟ್ರೋಲ್ (petrol), ಡಿಸೇಲ್ (diesel) ಬೆಲೆ ಏರಿಕೆ ಮಾಡಿ ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಆ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ವಾಹನ ಸವಾರರಿಗೆ ಬರೆ ಎಳೆದಿದೆ. ಈ ವಿಚಾರವಾಗಿ ಈಗಾಗಲೇ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಎಲ್ಲಾ ಬೆಲೆಗಳು ಜಾಸ್ತಿಯಾಗಿವೆ. ಇದೀಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ. ಹೀಗೆ ಬೆಲೆ ಏರಿಕೆಯಾದರೆ ಬಡವರು ಏನು ಮಾಡಬೇಕು. ತರಕಾರಿಯಿಂದ ಹಿಡಿದು ದಿನಸಿವರೆಗೂ ಬೆಲೆ ಜಾಸ್ತಿಯಾಗಿದೆ. ನಮ್ಮ ಸಂಬಳಗಳು ಮಾತ್ರ ಅಷ್ಟೇ ಇದೆ ಎಂದಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಜನರ ಕೈಗೆ ಚೊಂಬು ಕೊಟ್ಟ ಕಾಂಗ್ರೆಸ್: ಪ್ರಲ್ಹಾದ್ ಜೋಶಿ ಕಿಡಿ
ಎಲೆಕ್ಷನ್ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನ ಕಡಿಮೆ ಮಾಡಿದ್ದರು. ಎಲೆಕ್ಷನ್ ಮುಗಿದ ತಕ್ಷಣ ಬೆಲೆ ಏರಿಕೆ ಮಾಡಿದ್ದಾರೆ. ಎಲೆಕ್ಷನ್ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನ ಕಡಿಮೆ ಮಾಡಿದ್ದರು. ಎಷ್ಟೇ ಆದರೂ ಗಾಡಿಗಳನ್ನ ಓಡಿಸಲೇ ಬೇಕು ಎನ್ನುತ್ತಿದ್ದಾರೆ ವಾಹನ ಸಾವರರು.
ರಾಜ್ಯ ಸರ್ಕಾರದ ವಿರುದ್ಧ ಚಿಕ್ಕಮಗಳೂರಿನಲ್ಲಿ ಸವಾರರು ಆಕ್ರೋಶ ಹೊರಹಾಕಿದ್ದು, ಈ ಸರ್ಕಾರ ಭಾಗ್ಯಗಳನ್ನು ನೀಡಿ ನಮಗೆ ತೊಂದರೆ ಮಾಡುತ್ತಿದೆ. ಭಾಗ್ಯಗಳನ್ನ ನೀಡಲು ಎಲ್ಲಾ ಬೆಲೆ ಹೆಚ್ಚು ಮಾಡುತ್ತಿದ್ದಾರೆ. ಈ ಸರ್ಕಾರ ಬರಲೇಬಾರದಿತ್ತು. ಶಕ್ತಿ ಯೋಜನೆ ಆಟೋ ಚಾಲಕರ ಬದುಕನ್ನ ಕಿತ್ತುಕೊಂಡಿದೆ ಎಂದು ಆಟೋ ಚಾಲಕ ಪ್ರಕಾಶ್ ಎಂಬುವವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: Petrol Diesel Price Hike: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ; ಮಾರಾಟ ತೆರಿಗೆ ಹೆಚ್ಚಿಸಿದ ಸರ್ಕಾರ
ಇನ್ನು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ರೆ ಬದುಕೋದು ಹೇಗೆ? ದಿನನಿತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡ್ತಾ ಇದ್ರೆ ಜನ ತಿರುಗಿ ಬಿಳುವ ದಿನ ದೂರವಿಲ್ಲ. ದಿನ ದುಡಿದ ದುಡ್ಡನ್ನ ಪೆಟ್ರೋಲ್ ಹಾಕಿಸೋಕೆ ಖರ್ಚು ಮಾಡಬೇಕಾ ಎಂದು ಕಾಂಗ್ರೆಸ್ ವಿರುದ್ಧ ವಾಹನ ಸವಾರರು ಗರಂ ಆಗಿದ್ದಾರೆ.
ಕಲಬುರಗಿಯಲ್ಲೂ ಕೂಡ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರ ಹೀಗೆ ಮಾಡಬಾರದಿತ್ತು. ಇನ್ನು ಬೆಲೆ ಕಡಿಮೆ ಮಾಡಬೇಕಿತ್ತು. ಆದರೆ ಹೆಚ್ಚಿಗೆ ಮಾಡಿದ್ರಿಂದ ಜನತೆಗೆ ತೊಂದರೆಯಾಗುತ್ತೆ. ಗ್ಯಾರಂಟಿ ಹೊಡೆತಕ್ಕೆ ಈ ರೀತಿ ಮಾಡಿದೆ. ಇದ್ರಿಂದ ನಮಗೆ ತೊಂದರೆಯಾಗುತ್ತೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಟಿರ್ವಿಗೆ ವಾಹನ ಸವಾರರು ಹೇಳಿದ್ದಾರೆ.
ತೈಲ ಬೆಲೆ ಏರಿಕೆ ಜನ ವಿರೋಧಿಯಾಗಿದೆ. ಚುನಾವಣೆ ಮುಗಿದ ಮೇಲೆ ಬೆಲೆ ಏರಿಕೆ ಮಾಡಿದ್ದಾರೆ. ಬೆಲೆ ಏರಿಕೆ ಜನ ಸಾಮಾನ್ಯರಿಗೆ ಬರೆ ಎಳೆದಂತೆ. ಅಭಿವೃದ್ಧಿ ಹಾಗೂ ಗ್ಯಾರಂಟಿಗಳಿಗಾಗಿ ಬೆಲೆ ಏರಿಕೆ ಯಾಕೆ? ಜನರ ಹಣ ಕಿತ್ತು ಕೆಲಸ ಮಾಡಿದಂತಾಗುತ್ತದೆ. ಪೆಟ್ರೋಲ್, ಡಿಸೈಲ್ ದರ ಏರಿಕೆ ಮಾಡುವುದು ಸರಿಯಲ್ಲ. ಇದಕ್ಕೆ ನಮ್ಮ ವಿರೋಧ ಎಂದ ವಿಜಯಪುರ ಜನರು.
ಬೆಳಗಾವಿಯಲ್ಲಿ ಮಹಿಳೆಯರು ಸೇರಿದಂತೆ ವಾಹನ ಸವಾರರು ಆಕ್ರೋಶಗೊಂಡಿದ್ದು, ಗ್ಯಾರಂಟಿ ಕೊಟ್ಟು ಈಗ ಏಕಾ ಏಕಿ ದರ ಏರಿಕೆ ಮಾಡಿದ್ದಾರೆ. ಒಂದು ಕಡೆ ಕೊಟ್ಟು ಮತ್ತೊಂದು ಕಡೆ ಕಸಿದುಕೊಳ್ಳುತ್ತಿದ್ದಾರೆ. ಸರ್ಕಾರ ಕೂಡಲೇ ದರ ಏರಿಕೆ ಆದೇಶ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:18 pm, Sat, 15 June 24