ಗುಜರಾತ್‌ನ ‘ಸ್ಮೃತಿವನ ಮ್ಯೂಸಿಯಂ’ ಪ್ರತಿಷ್ಠಿತ ಯುನೆಸ್ಕೋ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿಗೆ ಆಯ್ಕೆ; ಮೋದಿ ಮೆಚ್ಚುಗೆ
ಗುಜರಾತ್‌ನ ಭುಜ್ ಜಿಲ್ಲೆಯ ಕಛ್ನಲ್ಲಿರುವ ‘ಸ್ಮೃತಿವನ ’(Smriti Van) ಅನ್ನು ಪ್ರತಿಷ್ಠಿತ ಯುನೆಸ್ಕೋ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ, ಜೂ.15: ಗುಜರಾತ್‌ನ ಭುಜ್ ಜಿಲ್ಲೆಯ ಕಛ್ನಲ್ಲಿರುವ ‘ಸ್ಮೃತಿವನ ’(Smriti Van) ಅನ್ನು ಪ್ರತಿಷ್ಠಿತ ಯುನೆಸ್ಕೋ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಛ್ ಪ್ರದೇಶದಲ್ಲಿ 2001ರಲ್ಲಿ ಅನಾಹುತಕಾರಿ ಭೂಕಂಪ (Kutch Earthquake) ಸಂಭವಿಸಿತ್ತು. ಭುಜ್ (Bhuj) ಭೂಕಂಪದ ಕೇಂದ್ರವಾಗಿತ್ತು. ಭೂಕಂಪದ ಅನಾಹುತಗಳನ್ನು ಜನರು ಧೈರ್ಯವಾಗಿ ಎದುರಿಸಿ ಚೇತರಿಸಿಕೊಂಡಿದ್ದನ್ನು ಸ್ಮರಿಸಲೆಂದು ನರೇಂದ್ರ ಮೋದಿ ಅವರು 2022 ಆಗಸ್ಟ್ 28 (ಭಾನುವಾರ) ರಂದು ‘ಸ್ಮೃತಿವನ’ವನ್ನು ಲೋಕಾರ್ಪಣೆ ಮಾಡಿದ್ದರು.
ಟ್ವೀಟ್ ಮೂಲಕ ಪ್ರಧಾನಿ ಮೆಚ್ಚುಗೆ
ಕಚ್‌ನಲ್ಲಿರುವ ‘ಸ್ಮೃತಿವನ್’ 2001 ರ ಭೂಕಂಪದಲ್ಲಿ ನಾವು ಕಳೆದುಕೊಂಡವರ ಗೌರವಾರ್ಥವಾಗಿ ಹಾಗೂ ಆ ಅನಾಹುತಗಳನ್ನು ಜನರು ಧೈರ್ಯವಾಗಿ ಎದುರಿಸಿ ಚೇತರಿಸಿಕೊಂಡಿದ್ದನ್ನು ನೆನಪಿಸುತ್ತದೆ. ಈ ವಸ್ತುಸಂಗ್ರಹಾಲಯವು ಪ್ರಿಕ್ಸ್ ವರ್ಸೈಲ್ಸ್ ಮ್ಯೂಸಿಯಂಸ್ 2024 ರ ವಿಶ್ವ ಆಯ್ಕೆಯಲ್ಲಿ ಸ್ಥಾನವನ್ನು ಕಂಡುಕೊಂಡಿರುವುದು ಸಂತೋಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Smritivan in Kutch is a tribute to those we lost in the tragic Earthquake of 2001. It is a reminder of human resilience and courage as well. Glad that this Museum has found a place on the World Selection for the Prix Versailles Museums 2024. https://t.co/yVLLaiMaJx
— Narendra Modi (@narendramodi) June 15, 2024
ಸ್ಮೃತಿವನ ಸ್ಮಾರಕದ ಮಾಹಿತಿ ಇಲ್ಲಿದೆ…
- 470 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಸ್ಮಾರಕದಲ್ಲಿ ಭೂಕಂಪದಲ್ಲಿ ಜೀವ ಕಳೆದುಕೊಂಡ 13,000 ಜನರ ಹೆಸರುಗಳನ್ನು ಕೆತ್ತಲಾಗಿದೆ.
- ಸ್ಮೃತಿವನ ಸ್ಮಾರಕದಲ್ಲಿ ಸ್ಮೃತಿವನ ಭೂಕಂಪ ವಸ್ತುಸಂಗ್ರಹಾಲಯವೂ ಇದೆ. ಏಳು ಹಂತಗಳಲ್ಲಿ (ಬ್ಲಾಕ್) ಹರಡಿಕೊಂಡಿರುವ ವಸ್ತುಸಂಗ್ರಹಾಲಯವು ರಿಬರ್ತ್ (ಮರುಜನ್ಮ), ಮರು ಹುಡುಕಾಟ (ರಿಡಿಸ್ಕವರ್), ರಿಸ್ಟೋರ್ (ಸರಿಪಡಿಸು), ಮತ್ತೆ ಕಟ್ಟು (ರಿಬಿಲ್ಡ್), ಮತ್ತೆ ಯೋಚಿಸು (ರಿಥಿಂಕ್), ಮತ್ತೆ ಜೀವಿಸು (ರಿಲೀವ್), ಮತ್ತೆ ಹೊಸದಾಗಿ ಬಳಸು (ರಿನ್ಯು) ಎಂಬ ಏಳು ಆಶಯಗಳನ್ನು (ಥೀಂ) ಹೊಂದಿದೆ.
- ಮೊದಲ ಹಂತವು ಭೂಮಿಯ ವಿಕಸನ ಮತ್ತು ಪ್ರತಿ ಸವಾಲನ್ನೂ ಅದು ಗೆದ್ದ ಬಗೆಯನ್ನು ವಿವರಿಸಿದೆ.
- ಎರಡನೇ ಹಂತವು ‘ಮರು ಹುಡುಕಾಟ’ದ ಆಶಯ ಹೊಂದಿದೆ. ಗುಜರಾತ್‌ನ ಭೌಗೋಳಿಕ ಮೇಲ್ಮೈ ಮತ್ತು ರಾಜ್ಯಕ್ಕಿರುವ ನೈಸರ್ಗಿಕ ಸವಾಲುಗಳನ್ನು ವಿವರಿಸುತ್ತದೆ.
- 3ನೇ ಹಂತವು ಭೂಕಂಪದ ನಂತರ ತಕ್ಷಣಕ್ಕೆ ಏನಾಯಿತು ಎನ್ನುವುದನ್ನು ಕಟ್ಟಿಕೊಡುತ್ತದೆ. ನೂರಾರು ವ್ಯಕ್ತಿಗಳು, ಸಂಘ ಸಂಸ್ಥೆಗಳಿಂದ ಸಂಗ್ರಹಿಸಿರುವ ಛಾಯಾಚಿತ್ರಗಳನ್ನು ಒಪ್ಪಗೊಳಿಸಿ ಪ್ರದರ್ಶಿಸಲಾಗಿದೆ.
- 4ನೇ ಹಂತವು 2001ರ ಭೂಕಂಪದ ನಂತರ ನಡೆದ ಗುಜರಾತ್‌ನ ಮರುನಿರ್ಮಾಣ ಪ್ರಕ್ರಿಯೆಯನ್ನು ವಿವರಿಸುತ್ತದೆ.
- 5ನೇ ಹಂತವು ಮರು ನಿರ್ಮಾಣ ಚಟುವಟಿಕೆಗಳ ಬಗ್ಗೆ ಗಮನ ಸೆಳೆಯುತ್ತದೆ. ವಿವಿಧ ರೀತಿಯ ನೈಸರ್ಗಿಕ ದುರಂತಗಳು ಮತ್ತು ಭವಿಷ್ಯಕ್ಕಾಗಿ ಮಾಡಿಕೊಳ್ಳಬೇಕಾದ ಸಿದ್ಧತೆಯ ಬಗ್ಗೆ ಗಮನ ಸೆಳೆಯುತ್ತದೆ.
- ನೈಸರ್ಗಿಕ ದುರಂತಗಳಿಂದ ಆಗುವ ಅನಾಹುತಗಳನ್ನು ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಜೀವಹಾನಿ ತಪ್ಪಿಸಲು ಏನೆಲ್ಲಾ ಮಾಡಬಹುದು ಎನ್ನುವ ಬಗ್ಗೆ ಈ ಬ್ಲಾಕ್ನಲ್ಲಿ ಮಾಹಿತಿಯಿದೆ.
- 6ನೇ ಬ್ಲಾಕ್ನಲ್ಲಿ 5ಡಿ ಸಿಮ್ಯುಲೇಟರ್ ಇದ್ದು, ಇಲ್ಲಿಗೆ ಭೇಟಿ ಕೊಡುವವರು ಭೂಕಂಪದ ಆಘಾತ ಮತ್ತು ಅನಾಹುಗಳ ತೀವ್ರತೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.
- 7ನೇ ಬ್ಲಾಕ್ನಲ್ಲಿ ಜನರು ಭೂಕಂಪದಲ್ಲಿ ಮೃತಪಟ್ಟವರನ್ನು ಮತ್ತೆ ನೆನಪಿಸಿಕೊಂಡು, ಶ್ರದ್ಧಾಂಜಲಿ ಸಲ್ಲಿಸಲು ಅವಕಾಶವಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:12 pm, Sat, 15 June 24