ಮೊಯ್ಲಿ ಹಿರಿಯ ನಾಯಕರು ಮತ್ತು ಸಿಡಬ್ಲ್ಯೂಸಿ ಸದಸ್ಯ, ಅವರ ಹೇಳಿಕೆಗೆ ಪ್ರತಿಕ್ರಿಯಿಸುವಷ್ಟು ದೊಡ್ಡವನಲ್ಲ: ಪಾಟೀಲ್
ಸಿದ್ದರಾಮಯ್ಯ ಪರ ಇರುವವರು ಮತ್ತು ಡಿಕೆ ಶಿವಕುಮಾರ್ ಜೊತೆಗಿರುವವರು ಹೇಳಿಕೆಗಳನ್ನು ಯಾಕೆ ನೀಡುತ್ತಿದ್ದಾರೆ ಎಂದು ಕನ್ನಡಿಗರಿಗೆ ಅರ್ಥವಾಗುತ್ತಿದೆ. ಹೇಳಿಕೆಗಳನ್ನು ಅವರೇ ಖುದ್ದಾಗಿ ನೀಡುತ್ತಿದ್ದಾರೆಯೋ ಅಥವಾ ಹೇಳಿಸಲಾಗುತ್ತಿದೆಯೋ ಅನ್ನೋದು ಚರ್ಚೆಯ ವಿಷಯ. ಆದರೆ ಪಕ್ಷದ ಹೈಕಮಾಂಡ್ ಹೊರಡಿಸಿರುವ ಡಿಕ್ಟ್ಯಾಟ್ ಅನ್ನು ಪದೇಪದೆ ಮೀರಿ ಹೇಳಿಕೆಗಳನ್ನು ನೀಡುತ್ತಿರೋದು ಆಶ್ಚರ್ಯ ಹುಟ್ಟಿಸುತ್ತದೆ.
ಬೆಂಗಳೂರು, ಮಾರ್ಚ್ 3: ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರು, ಡಿಕೆ ಶಿವಕುಮಾರ್ (DK Shivakumar) ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗದಂತೆ ಯಾರೂ ತಡೆಯಲಾರರು ಅಂತ ಹೇಳಿರುವುದಕ್ಕೆ ವಿಧಾನ ಸೌಧದ ಆವರಣದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಎಂಬಿ ಪಾಟೀಲ್, ಮೊದಲಿಗೆ ಮೊಯ್ಲಿ ಹೇಳಿದ್ದು ಸರಿಯಲ್ಲ ಅಂತ ಹೇಳಿದರೂ ನಂತರ ತಮ್ಮ ಹೇಳಿಕೆ ಬದಲಾಯಿಸಿ, ಮೊಯ್ಲಿ ಅವರು ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಸದಸ್ಯರೂ ಅಗಿರುವುದರಿಂದ ಅವರ ಬಗ್ಗೆ ಮಾತಾಡುವಷ್ಟು ದೊಡ್ಡವನು ತಾನಲ್ಲ ಎನ್ನುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಿಕೆಶಿಗೆ ಮೊದಲು ಎಂಎಲ್ಎ ಟಿಕೆಟ್ ಕೊಡಿಸಿದ್ದೇ ನಾನು; ವೀರಪ್ಪ ಮೊಯ್ಲಿ