AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗ ದಿನ: ಒಂದು ಭೂಮಿ ಒಂದು ಅರೋಗ್ಯಕ್ಕಾಗಿ ವಿಧಾನಸೌಧ ಮೆಟ್ಟಿಲು ಮೇಲೆ ಯೋಗ

ಜೂನ್ 21ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಕರ್ನಾಟಕ ಸರ್ಕಾರ ವಿಶೇಷ ಯೋಜನೆ ರೂಪಿಸಿದೆ. ವಿಧಾನಸೌಧದ ಮೆಟ್ಟಿಲು ಮೇಲೆ ಯೋಗ ದಿನಾಚರಣೆ ನಡೆಯಲಿದೆ. ಈ ವರ್ಷ 5 ಲಕ್ಷ ಜನರಿಗೆ ಯೋಗ ತರಬೇತಿ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಮೈಸೂರಿನಲ್ಲಿ ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಯೋಗ ದಿನ: ಒಂದು ಭೂಮಿ ಒಂದು ಅರೋಗ್ಯಕ್ಕಾಗಿ ವಿಧಾನಸೌಧ ಮೆಟ್ಟಿಲು ಮೇಲೆ ಯೋಗ
ಸಚಿವ ದಿನೇಶ್​ ಗುಂಡೂರಾವ್​
Vinay Kashappanavar
| Updated By: ವಿವೇಕ ಬಿರಾದಾರ|

Updated on:Jun 17, 2025 | 6:23 PM

Share

ಬೆಂಗಳೂರು, ಜೂನ್​ 17: ಜೂನ್​ 21 ಅಂತರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ನಿಮಿತ್ತ “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಘೋಷ ವಾಕ್ಯದೊಂದಿಗೆ ವಿಧಾನಸೌಧದ ಮೆಟ್ಟಿಲು ಮೇಲೆ ಯೋಗ ದಿನಾಚರಣೆ ಮಾಡಲಾಗುತ್ತದೆ. ಯೋಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರು ಹಾಗೂ ಗಣ್ಯರು ಭಾಗಿಯಾಗುತ್ತಾರೆ. ಐದು ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ (Dinesh Gundu Rao)​ ಹೇಳಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಈ ವರ್ಷ ಐದು ಲಕ್ಷ ಜನರಿಗೆ ಯೋಗ ಹೇಳಿಕೊಡಲಾಗುತ್ತದೆ. ರಾಜ್ಯದಲ್ಲಿ 10 ಸಾವಿರ ಯೋಗ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಮೈಸೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಎಂದರು.

ಆರೋಗ್ಯದ ದೃಷ್ಟಿಯಿಂದ ಯೋಗ ಅತ್ಯವಶ್ಯಕವಾಗಿದೆ. ದೇಹ ಹಾಗೂ ಮನಸ್ಸಿಗೆ ಯೋಗ ಒಳ್ಳೆಯದು. ಯೋಗ ನಮ್ಮ ಪ್ರಾಚೀನ ಪದ್ಧತಿಯಾಗಿದೆ. ಯೋಗ ಬೇರೆ ದೇಶದಲ್ಲೂ ಹೆಸರುವಾಸಿಯಾಗಿದೆ. ಯೋಗಕ್ಕೆ ವಿಶ್ವದ ಎಲ್ಲ ದೇಶಗಳಲ್ಲೂ ಪ್ರಾಮುಖ್ಯತೆ ಸಿಕ್ಕಿದೆ.

ಇದನ್ನೂ ಓದಿ
Image
ಯೋಗಕ್ಕೆ ಜಾಗತಿಕ ಗುರುತು ಸಿಗಲು ಬಾಬಾ ರಾಮದೇವ್, ಪತಂಜಲಿ ಪಾತ್ರ
Image
ಮೊಟ್ಟೆಯ ಮೇಲೆ 60 ಯೋಗಾಸನ ಭಂಗಿ; ಬೆರಗು ಮೂಡಿಸಿದ ಕಲಾವಿದನ ಕೈಚಳಕ
Image
ಯೋಗ ಅಭ್ಯಾಸದ ಸಮಯದಲ್ಲಿ ನೀರು ಕುಡಿಯಬಾರದು ಏಕೆ?
Image
ಯೋಗದ ಜೊತೆಗೆ ಕನ್ನಡ ಪಾಠ: ಸಿಎಂಗೆ ಕನ್ನಡರಾಮಯ್ಯ ಎಂದ ವಚನಾನಂದ ಶ್ರೀ

ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ; ಈ ವರ್ಷದ ಥೀಮ್ ಏನು?

ಶಾಲೆಗಳಲ್ಲಿ ಯೋಗ ತರಗತಿ ತೆರೆಯುವ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರದ ಬಗ್ಗೆ ಈಗಾಗಲೇ ಚರ್ಚೆಯಾಗಿದೆ. ಶಾಲೆಗಳಲ್ಲಿ ಯೋಗ ಶಿಕ್ಷಕರು, ಯೋಗ ತರಗತಿ ಬೇಕು. ಯೋಗ ಖಂಡಿತವಾಗಲೂ ಅನುಕೂಲವಾಗಲಿದೆ. ಆದರೆ, ಶಾಲೆಗಳಲ್ಲಿ ಯೋಗಕ್ಕಿಂತ ಕ್ರಿಡೆಗಳೇ ಮುಖ್ಯ. ಆಟವಾಡುವ ವಯಸ್ಸಿನಲ್ಲಿ ಮಕ್ಕಳು ಕ್ರೀಡೆಗೆ ಆದ್ಯತೆ ನೀಡಬೇಕು. ಬೇರೆ ಬೇರೆ ಕ್ರೀಡೆಗಳಿಗೆ ಅವಕಾಶ ನೀಡಬೇಕು. ಮಕ್ಕಳು ವಯಸ್ಸಿಗೆ ಬಂದ ನಂತರ ಯೋಗ ಹೇಳಿಕೊಟ್ಟರೇ ಅದರ ಪ್ರತಿಫಲ ಹೆಚ್ಚಾಗಿರುತ್ತದೆ. ಯೋಗ ಶಿಕ್ಷಕರ ಬದಲಿಗೆ ಸ್ಪೋರ್ಟ್ಸ್​ ಶಿಕ್ಷಕರ ಆದ್ಯತೆ ಹೆಚ್ಚಾಗಿರುತ್ತದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Tue, 17 June 25