IPS Transferred: ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಸರ್ಕಾರ ಆದೇಶ
ರಾಜ್ಯದ ವಿವಿಧೆಡೆ 33 ಡಿವೈಎಸ್ಪಿಗಳು ಹಾಗೂ 132 ಇನ್‌ಸ್ಪೆಕ್ಟರ್‌ಗಳನ್ನು ಇತ್ತೀಗೆಚೆ ವರ್ಗಾವಣೆ ಮಾಡಲಾಗಿತ್ತು. ಇದೀಗ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು, ಫೆಬ್ರುವರಿ 1: ನಾಲ್ವರು ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಅಮಿತ್ ಸಿಂಗ್, ಡಿಐಜಿಪಿ, ದಕ್ಷಿಣ ವಲಯ (ಮೈಸೂರು), ಡಾ.ಎಂ.ಬಿ.ಬೋರಲಿಂಗಯ್ಯ, ಡಿಐಜಿಪಿ, ಪಶ್ಚಿಮ ವಲಯ (ಮಂಗಳೂರು), ಶಿವಪ್ರಕಾಶ್ ದೇವರಾಜು, ಪೊಲೀಸ್ ವರಿಷ್ಠಾಧಿಕಾರಿ, (ಕಲಬುರಗಿ) ಮತ್ತು ಎ.ಶ್ರೀನಿವಾಸುಲು, ಡಿಸಿಪಿ, ಬೆಂಗಳೂರು ದಕ್ಷಿಣ ಸಂಚಾರ ವಿಭಾಗಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಲಾಗಿದೆ.
4 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಅಮಿತ್ ಸಿಂಗ್: ಡಿಐಜಿ, ದಕ್ಷಿಣ ವಲಯ
- ಡಾ. ಎಂ.ಬಿ. ಬೋರಲಿಂಗಯ್ಯ: ಡಿಐಜಿ, ಪಶ್ಚಿಮ ವಲಯ
- ಎಸ್.ಪಿ. ದೇವರಾಜು: ಎಸ್ಪಿ, ಕಲಬುರಗಿ
- ಎ. ಶ್ರೀನಿವಾಸುಲು: ಡಿಸಿಪಿ ಸಂಚಾರ, ದಕ್ಷಿಣ ವಿಭಾಗ, ಬೆಂಗಳೂರು ನಗರ
42 ಕೆಎಎಸ್ ಅಧಿಕಾರಿಗಳ ವರ್ಗಾವಣೆ
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವರ್ಗಾವಣೆ 42 ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗಳಲ್ಲೇ ಕಾರ್ಯ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
218 ಪಿಎಸ್‌ಐಗಳ ವರ್ಗಾವಣೆ
ರಾಜ್ಯದ ವಿವಿಧೆಡೆ 33 ಡಿವೈಎಸ್ಪಿಗಳು ಹಾಗೂ 132 ಇನ್‌ಸ್ಪೆಕ್ಟರ್‌ಗಳನ್ನು ಇತ್ತೀಗೆಚೆ ವರ್ಗಾವಣೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಮೇಜರ್ ಸರ್ಜರಿ ಮಾಡಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ 218 ಪಿಎಸ್‌ಐಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ಸಬ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ: ಹೊಸ ವರ್ಷಕ್ಕೆ ಮುನ್ನವೇ 37 ಐಪಿಎಸ್ಗಳ ವರ್ಗಾವಣೆ, 46 IAS ಅಧಿಕಾರಿಗಳಿಗೆ ಬಡ್ತಿ: ಸರ್ಕಾರ ಆದೇಶ
ಶಿವಪ್ಪ ಎಂ.ನಾಯ್ಕರ್-ರಾಮಮೂರ್ತಿನಗರ ಠಾಣೆ, ಶಿವಪ್ಪ -ವೈಟ್‌ಫೀಲ್ಡ್ ಠಾಣೆ, ರಮಾದೇವಿ ಬಿ.ಎಸ್.ಮಹದೇವಪುರ ಠಾಣೆ, ಮೂರ್ತಿ- ಮಲ್ಲೇಶ್ವರಂ ಠಾಣೆ, ಪ್ರಭುಗೌಡ ಎಸ್. ಪಾಟೀಲ್-ಆಡುಗೋಡಿ ಸಂಚಾರ ಠಾಣೆ, ವಿನೂತ್ ಎಚ್.ಎಂ.-ಬಸವನಗುಡಿ ಠಾಣೆ, ಶ್ರೀನಿವಾಸ್ ಪ್ರಸಾದ್- ಹುಳಿಮಾವು ಠಾಣೆಗೆ ಸೇರಿ 218 ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವಧಿ ಮತ್ತೆ ವಿಸ್ತರಣೆ
ರಾಜ್ಯ ಸರ್ಕಾರ ಇತ್ತೀಚೆಗೆ ರಾತ್ರೋರಾತ್ರಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿತ್ತು. ಕೆಲ ಹಿಂದಷ್ಟೇ 2018, 2019 ಮತ್ತು 2020ರ ಬ್ಯಾಚ್‌ನ ಹತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:01 pm, Thu, 1 February 24