ಶ್ರೀರಾಮಚಂದ್ರರನ್ನು ರಾಜಕೀಯಕ್ಕೆ ಎಳೆದು ತರುವ ನಿಮ್ಮ ಮನಃಸ್ಥಿತಿಯನ್ನು ಏನೆಂದು ಕರೆಯಬೇಕು? ರಾಜಣ್ಣಗೆ ಜೆಡಿಎಸ್​ ಪ್ರಶ್ನೆ

ಪಾಕಿಸ್ತಾನದ ಗಾಳಿ ಬೀಸಿದರೆ ತಪ್ಪಲ್ಲ. ಆದರೆ, ಶ್ರೀರಾಮಚಂದ್ರರ ಗಾಳಿ ಬೀಸಿದರೆ ತಪ್ಪಾ? ನಿಮ್ಮ ಅಭಿಪ್ರಾಯದ ಪ್ರಕಾರ ಶ್ರೀರಾಮಚಂದ್ರ ದೇವರ ಗಾಳಿ ಬೀಸುವುದು ಅಪರಾಧವೇ? ಇನ್ನಾವ ಗಾಳಿ ಬೀಸಬೇಕು? ದಯಮಾಡಿ ಸ್ಪಷ್ಟಪಡಿಸಿಬಿಡಿ ಎಂದು ಟ್ವೀಟ್ ಮೂಲಕ ಸಚಿವ ಕೆ.ಎನ್​.ರಾಜಣ್ಣ ವಿರುದ್ಧ ಜೆಡಿಎಸ್​ ವಾಗ್ದಾಳಿ ಮಾಡಿದೆ.

ಶ್ರೀರಾಮಚಂದ್ರರನ್ನು ರಾಜಕೀಯಕ್ಕೆ ಎಳೆದು ತರುವ ನಿಮ್ಮ ಮನಃಸ್ಥಿತಿಯನ್ನು ಏನೆಂದು ಕರೆಯಬೇಕು? ರಾಜಣ್ಣಗೆ ಜೆಡಿಎಸ್​ ಪ್ರಶ್ನೆ
ಸಚಿವ ಕೆ.ಎನ್​.ರಾಜಣ್ಣ
Updated By: ಗಂಗಾಧರ​ ಬ. ಸಾಬೋಜಿ

Updated on: May 01, 2024 | 6:49 PM

ಬೆಂಗಳೂರು, ಮೇ 1: ಸಚಿವರಾದ ಕೆ.ಎನ್​.ರಾಜಣ್ಣನವರೇ, (KN Rajanna) ಪಾಕಿಸ್ತಾನದ ಗಾಳಿ ಬೀಸಿದರೆ ತಪ್ಪಲ್ಲ ಆದರೆ ಶ್ರೀರಾಮಚಂದ್ರರ ಗಾಳಿ ಬೀಸಿದರೆ ತಪ್ಪಾ ಎಂದು ಪ್ರಶ್ನಿಸುವ ಮೂಲಕ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಟ್ವೀಟ್ ಮೂಲಕ ಜೆಡಿಎಸ್ (JDS)​ ವಾಗ್ದಾಳಿ ಮಾಡಿದೆ. ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರನ ‌ಮನೆಯಲ್ಲಿ ಬಾಡಿಗೆ ಇದ್ದವರು. ಅವರಿಗೆ ಶ್ರೀರಾಮಚಂದ್ರನ ಗಾಳಿ ಬೀಸಿದೆ. ಹೀಗಾಗಿ ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂಬ ಕೆ.ಎನ್.ರಾಜಣ್ಣ ಹೇಳಿಕೆಗೆ ಇದೀಗ ಜೆಡಿಎಸ್ ತಿರುಗೇಟು ನೀಡಿದೆ.

ಪಾಕಿಸ್ತಾನದ ಗಾಳಿ ಬೀಸಿದರೆ ತಪ್ಪಲ್ಲ. ಆದರೆ, ಶ್ರೀರಾಮಚಂದ್ರರ ಗಾಳಿ ಬೀಸಿದರೆ ತಪ್ಪಾ? ನಿಮ್ಮ ಅಭಿಪ್ರಾಯದ ಪ್ರಕಾರ ಶ್ರೀರಾಮಚಂದ್ರ ದೇವರ ಗಾಳಿ ಬೀಸುವುದು ಅಪರಾಧವೇ? ಇನ್ನಾವ ಗಾಳಿ ಬೀಸಬೇಕು? ದಯಮಾಡಿ ಸ್ಪಷ್ಟಪಡಿಸಿಬಿಡಿ.

ಜೆಡಿಎಸ್ ಟ್ವೀಟ್​ 


ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರ ಮನೆಯಲ್ಲಿ ಬಾಡಿಗೆಗೆ ಇದ್ದವರು. ಇವರ ಮೇಲೆ ಶ್ರೀರಾಮಚಂದ್ರರ ಗಾಳಿ ಬೀಸಿದೆ ಎಂದರೇನು ಸಚಿವರೇ? ಸತ್ಯ ಹರಿಶ್ಚಂದ್ರ ಹಾಗೂ ಶ್ರೀರಾಮ ದೇವರನ್ನು ರಾಜಕೀಯಕ್ಕೆ ಎಳೆದು ತರುವ ನಿಮ್ಮ ಮನಃಸ್ಥಿತಿಯನ್ನು ತೋರಿಸುತ್ತದೆ ಏನೆಂದು ಕರೆಯಬೇಕು? ಸತ್ಯ ದ್ರೋಹವಾ? ರಾಮ ದ್ರೋಹವಾ? #ಸತ್ಯದ್ವೇಷಿ, ರಾಮದ್ರೋಹಿ, ಕಾಂಗ್ರೆಸ್ ಎಂದು ಟ್ವೀಟ್ ಮಾಡಲಾಗಿದೆ.

ಪ್ರಜ್ವಲ್ ಸ್ಟೇ ತೆಗೆದುಕೊಂಡಾಗ ನನಗೆ ಅನುಮಾನ ಇತ್ತು: ಕೆ.ಎನ್.ರಾಜಣ್ಣ

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ವಿಚಾರವಾಗಿ ಬಾಗಲಕೋಟೆಯಲ್ಲಿ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿದ್ದು, ಈ ಘಟನೆ ನಿನ್ನೆ ಮೊನ್ನೆಯದ್ದಲ್ಲ. ಆರು ತಿಂಗಳ ಮುಂಚೆಯೇ ಪ್ರಜ್ವಲ್ ಸ್ಟೇ ತೆಗೆದುಕೊಂಡಿದ್ದಾರೆ. ಪ್ರಜ್ವಲ್ ಸ್ಟೇ ತೆಗೆದುಕೊಂಡಾಗ ನನಗೆ ಅನುಮಾನ ಇತ್ತು. ಸುಮ್ಮನೆ ಯಾರು ಸ್ಟೇ ತೆಗೆದುಕೊಳ್ಳಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಸ್‌ಐಟಿ ನೋಟಿಸ್​: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್‌, ಎಷ್ಟು ದಿನ?

ಅಸಹಾಯಕ ಮಹಿಳೆಯರ ದುರ್ಬಳಕೆ ಖಂಡನೀಯ. ಮನೆ‌ಗೆಲಸದ ಮಹಿಳೆಯನ್ನೂ ಇವರು ಬಳಸಿಕೊಂಡಿದ್ದಾರೆ. ವಿಡಿಯೋ ಮಾಡಿಕೊಂಡಿದ್ದು ಒಂದು ಭಯಾನಕ ದುಷ್ಕೃತ್ಯ. ಆದರೆ, ಅದನ್ನು ಹೊರ ಹಾಕಿದ್ದು ಕೂಡ ಅಷ್ಟೇ ಭಯಾನಕ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.