ಜನರಿಗೆ ಕೋಟಿ‌ ಕೋಟಿ ರೂ. ಪಂಗನಾಮ: ಕಾಂಗ್ರೆಸ್ ಶಾಸಕ​ ಅಜಯ್ ಸಿಂಗ್ ಮಾಜಿ ಪಿಎ ಅರೆಸ್ಟ್

ಕಲಬುರಗಿ ಜಿಲ್ಲೆಯ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರ ಮಾಜಿ ಆಪ್ತ ಸಹಾಯಕ ಎಂದು ಹೇಳಿಕೊಂಡು ಸುಮಾರು ಜನರಿಗೆ ವಂಚಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಟ್ರ್ಯಾಕ್ಟರ್​ಗಳಿಗೆ‌ ಕೆಲಸ ಕೊಡಿಸ್ತಿನಿ, ನೌಕರಿ ಕೊಡಿಸುವದ್ದಾಗಿ ಹೇಳಿ ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಜನರಿಂದ 1.50 ಕೋಟಿಗೂ ಅಧಿಕ ಹಣ ವಸೂಲಿ ಮಾಡಿ ಪರಾರಿಯಾಗಿದ್ದ.

ಜನರಿಗೆ ಕೋಟಿ‌ ಕೋಟಿ ರೂ. ಪಂಗನಾಮ: ಕಾಂಗ್ರೆಸ್ ಶಾಸಕ​ ಅಜಯ್ ಸಿಂಗ್ ಮಾಜಿ ಪಿಎ ಅರೆಸ್ಟ್
ಜನರಿಗೆ ಕೋಟಿ‌ ಕೋಟಿ ರೂ. ಪಂಗನಾಮ: ಕಾಂಗ್ರೆಸ್ ಶಾಸಕ​ ಅಜಯ್ ಸಿಂಗ್ ಮಾಜಿ ಪಿಎ ಅರೆಸ್ಟ್
Edited By:

Updated on: May 23, 2024 | 7:55 PM

ಕಲಬುರಗಿ, ಮೇ 23: ನೀವು ಏನಾದರೂ ಶಾಸಕರ ಪಿಎಗೆ (PA) ಹೇಳಿದರೆ ನಮ್ಮ ಕೆಲಸ ಆಗುತ್ತೆ, ಕಾಮಾಗಾರಿ ಬಿಲ್ ಗ್ಯಾರಂಟಿಯಾಗುತ್ತೆ, ಸರ್ಕಾರಿ ನೌಕರಿ ಸಿಗುತ್ತೆ ಅಂತಾ ನಂಬಿದ್ದರೆ ನೀವು ಈ ಸ್ಟೋರಿಯನ್ನ ಒಂದು ಸಲ‌ ಓದಲೇಬೇಕು. ಯಾಕಂದ್ರೆ ಶಾಸಕರ ಮಾಜಿ ಆಪ್ತ ಸಹಾಯಕ ಕಂಡ‌ ಕಂಡವರಿಗೆ ಮಕ್ಮಲ್ ಟೋಪಿ (Fraud) ಹಾಕಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಯಾರು ಆ ಪಿಎ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಮುಂದೆ ಓದಿ.

ಪರಶುರಾಮ ಪಾಟೀಲ್ ಎಂಬ ವ್ಯಕ್ಯಿ ಕಲಬುರಗಿ ಜಿಲ್ಲೆಯ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರ ಮಾಜಿ ಆಪ್ತ ಸಹಾಯಕ. ಕಳೆದ ಹಲವು ವರ್ಷಗಳಿಂದ ಶಾಸಕರ ಬಳಿ ಪಿಎ ಆಗಿ ಕೆಲಸ ಮಾಡ್ತಿದ್ದ. ಒಂದು ವರ್ಷದ ಹಿಂದೆ ಅವರ ಆಪ್ತ ಸಹಾಯಕನಾಗಿ ಕೆಲಸ‌ ಮಾಡುತ್ತಿದ್ದವನ್ನ ಖುದ್ದು ಶಾಸಕರ ಆತನನ್ನ ಕೆಲಸದಿಂದ ತೆಗೆದುಹಾಕಿದ್ದರು. ಇದೀಗ ಅದೇ ಕಿರಾತಕನ ಅಸಲಿ ಬಣ್ಣ ಬಯಲಾಗಿದೆ. ಶಾಸಕರಿಗೆ ಹೇಳಿ ಕಾಂಟ್ರ್ಯಾಕ್ಟರ್​ಗಳಿಗೆ‌ ಕೆಲಸ ಕೊಡಿಸ್ತಿನಿ, ಸರ್ಕಾರಿ ಕಾಮಗಾರಿ‌ ಕೊಡಿಸ್ತಿನಿ ಹಾಗೂ ಕೆಕೆಆರ್​ಡಿಬಿ‌ ಮಂಡಳಿಯಲ್ಲಿ ನೌಕರಿ ಕೊಡಿಸುವದ್ದಾಗಿ ಹೇಳಿ ಕಲಬುರಗಿ, ಬೀದರ್ ಜಿಲ್ಲೆಯ ಸುಮಾರು 40ಕ್ಕೂ ಹೆಚ್ಚು ಜನರಿಂದ 1.50 ಕೋಟಿಗೂ ಅಧಿಕ ಹಣ ವಸೂಲಿ ಮಾಡಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ರೈತರಿಗೆ ಬರೆ ಎಳೆದ ಬ್ಯಾಂಕ್‌ಗಳು, ಬರ ಪರಿಹಾರ ಹಣ ಸಾಲಕ್ಕೆ ಜಮಾ: ಜಿಲ್ಲಾಧಿಕಾರಿ ಆದೇಶಕ್ಕೂ ಡೋಂಟ್​​ ಕೇರ್​​

ಇನ್ನು ಪರಶುರಾಮಗೆ ಹಣ ನೀಡಿದ ಬೀದರ್ ಮೂಲದ ಕಿರಣ ಮೇ 13 ರಂದು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಜೇವರ್ಗಿ ಪೊಲೀಸರು ಇದೀಗ ವಂಚಕ ಪರಶುರಾಮನನ್ನು ಬಂಧಿಸಿದ್ದಾರೆ.

ಪರಶುರಾಮ ಜನರಿಗೆ ವಂಚಿಸುವ ಬಗ್ಗೆ‌ ಒಂದು ವರ್ಷದ ಹಿಂದೆಯೇ ಮಾಹಿತಿ ಪಡೆದಿದ್ದ ಶಾಸಕ ಅಜಯ್ ಸಿಂಗ್ ಆತನನ್ನು‌ ಕೆಲಸದಿಂದ ತೆಗೆದು ಹಾಕಿ ಜನರಿಗೆ ವಂಚನೆಗೆ ಒಳಗಾಗದಂತೆ ತಿಳಿಸಿದ್ದರು. ಇನ್ನು ಅವರ ಬಳಿಯಿಂದ ತೆಗೆದು ಹಾಕುವಷ್ಟರಲ್ಲಿ ಈ ಪರಶುರಾಮ ಹಲವರಿಗೆ ಮಕ್ಮಲ್ ಟೋಪಿ ಹಾಕಿದ್ದ. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ವಂಚೆನೆಗೆ ಒಳಗಾದವರು ಹಣ ಕೇಳಲು ಆರಂಭಿಸಿದ್ದಾರೆ.

ಇದನ್ನೂ ಓದಿ: ನಿದ್ದೆಗೆ ಜಾರಿದ್ದ ಕಾನ್​ಸ್ಟೇಬಲ್​ ಕಿಸೆಯಿಂದ ಕೀ ತೆಗೆದುಕೊಂಡು ಪೊಲೀಸ್​ ಬಸ್​ ಕಳವಿಗೆ ಯತ್ನಸಿದ ಸೋನು

ಆಗ ಮೊಬೈಲ್ ಸ್ವೀಚ್ ಆಫ್ ಮಾಡಿ ಕಲಬುರಗಿಯಿಂದ‌‌ ಕಾಲ್ಕಿತ್ ಆಸಾಮಿ ಯಾರಿಗೂ ಗುರುತು ಸಿಗಬಾರದು ಅಂತಾ ಸಂಪೂರ್ಣ ತಲೆ ಕೂದಲು ಬೋಳಿಸಿಕೊಂಡು ಬೆಂಗಳೂರಿನ‌ ಲಾಡ್ಜ್ ಗಳಲ್ಲಿ ನೆಲೆಸಿದ್ದ. ಇದರ‌ ಖಚಿತ ಮಾಹಿತಿ ಪಡೆದ ಜೇವರ್ಗಿ ಪೊಲೀಸರು ಬುಧುವಾರ ರಾತ್ರಿ ಬಂಧಿಸಿದ್ದಾರೆ.‌ ಇನ್ನು ಪರಶುರಾಮ ಬಂಧನದ ಸುದ್ದಿ ತಿಳಿದು ಅವನಿಂದ‌ ಮೋಸ ಹೋದ ಇತರರು ಸಹ ಠಾಣೆಗೆ ಬಂದು ದೂರು‌ ಕೊಡುತ್ತಿದ್ದಾರೆ.

ಎಲ್ಲಿವರೆಗೆ‌ ಮೋಸ ಹೋಗುವ ಜನರು ಇರ್ತಾರೆ ಅಲ್ಲಿವರೆಗೆ ಮಕ್ಮಲ್ ಟೋಪಿ ಹಾಕುವವರು ಇರ್ತಾರೆ‌ ಅನ್ನುವದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಹೀಗಾಗಿ ಶಾಸಕ ಸಚಿವರ ಪಿಎ‌ ನಂಬಿ ಹಣ ನೀಡಿ‌ ಕೈ ಸುಟ್ಟುಕೊಳ್ಳುವ ಮುನ್ನ ಜನ‌ ಎಚ್ಚರದಿಂದ ಇರಬೇಕಾಗಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದತ್ತಾತ್ರೇಯ ಪಾಟೀಲ, ಕಲಬುರಗಿ

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us