ಕಲಬುರಗಿ: ಪಿಡಿಒಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೋ ಒಂದು ಕಲಬುರಗಿಯಲ್ಲಿ ವೈರಲ್ ಆಗಿದೆ. ಸೊನ್ನ ಹಾಗೂ ಹುಲ್ಲೂರು ಗ್ರಾಮ ಪಂಚಾಯಿತಿ ಪಿಡಿಒ ಬಸಯ್ಯ ಹಿರೇಮಠ ಅವರಿಗೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕು ಪಂಚಾಯತಿ ಇಒ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿದ್ದಕ್ಕೆ ನಿಂದಿಸಿರುವ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ, ನೀನು ಮೊಬೈಲ್ ಸ್ವಿಚ್ ಆಫ್ ಮಾಡಬಾರದು, ಮಾಡಿದರೆ ನಿನ್ನ ಸಂಬಳ ಕಟ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಸದ್ಯ ಈ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.
ಆಶಾ ಕಾರ್ಯಕರ್ತೆಗೆ ಅಶ್ಲೀಲ ಪದಗಳಿಂದ ನಿಂದನೆ
ತುಮಕೂರು: ಆಶಾ ಕಾರ್ಯಕರ್ತೆಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿ ವಿಡಿಯೋ ಮೂಲಕ ಟ್ರೋಲ್ ಮಾಡಿದ ಘಟನೆಯೊಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ರಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮಕ್ಕೆ ಲಾಕ್ಡೌನ್ ಸಂದರ್ಭದಲ್ಲಿ ಮೂವರು ಮಹಿಳೆಯರು ಬೆಂಗಳೂರಿನಿಂದ ಬಂದಿದ್ದರು. ಇವರನ್ನು ಕೊವಿಡ್ ಟೆಸ್ಟ್ ಮಾಡಿಸಿ ಎಂದು ಹೇಳಿದ್ದ ಆಶಾ ಕಾರ್ಯಕರ್ತೆಯನ್ನು ನಿಂದಿಸಲಾಗಿದೆ.
ಕೊವಿಡ್ ಟೆಸ್ಟ್ ಮಾಡಿಸಲ್ಲ ಎಂದು ನಗರದಿಂದ ಬಂದ ಮಹಿಳೆಯರು ಆಶಾ ಕಾರ್ಯಕರ್ತೆಯ ಮೇಲೆ ಈ ಸಂದರ್ಭದಲ್ಲಿ ಜಗಳ ಮಾಡಿದ್ದರು. ಇತ್ತಿಚೆಗೆ ಬೆಂಗಳೂರಿಗೆ ವಾಪಸ್ ಆದ ಬಳಿಕ ಆಶಾ ಕಾರ್ಯಕರ್ತೆಯ ಫೋಟೊ ಪಡೆದ ಈ ಮಹಿಳೆಯರು ಅಶ್ಲೀಲ ಪದಗಳಿಂದ ನಿಂದಿಸಿ ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ನೊಂದ ಆಶಾ ಕಾರ್ಯಕರ್ತೆ ದೂರು ನೀಡಿದ್ದಾರೆ.
ಇದನ್ನೂ ಓದಿ:
ಆಶಾ ಕಾರ್ಯಕರ್ತೆಗೆ ಅಶ್ಲೀಲ ಪದಗಳಿಂದ ನಿಂದನೆ; ಟ್ರೋಲ್ ಮಾಡಿದ ವಿಡಿಯೋ ವೈರಲ್