ಆಶಾ ಕಾರ್ಯಕರ್ತೆಗೆ ಅಶ್ಲೀಲ ಪದಗಳಿಂದ ನಿಂದನೆ; ಟ್ರೋಲ್ ಮಾಡಿದ ವಿಡಿಯೋ ವೈರಲ್
ಕೊವಿಡ್ ಟೆಸ್ಟ್ ಮಾಡಿಸಲ್ಲ ಎಂದು ನಗರದಿಂದ ಬಂದ ಮಹಿಳೆಯರು ಆಶಾ ಕಾರ್ಯಕರ್ತೆಯ ಮೇಲೆ ಈ ಸಂದರ್ಭದಲ್ಲಿ ಜಗಳ ಮಾಡಿದ್ದರು. ಇತ್ತಿಚೆಗೆ ಬೆಂಗಳೂರಿಗೆ ವಾಪಸ್ ಆದ ಬಳಿಕ ಆಶಾ ಕಾರ್ಯಕರ್ತೆಯ ಫೋಟೊ ಪಡೆದ ಈ ಮಹಿಳೆಯರು ಅಶ್ಲೀಲ ಪದಗಳಿಂದ ನಿಂದಿಸಿ ವಿಡಿಯೋ ಮಾಡಿದ್ದಾರೆ.
ತುಮಕೂರು: ಆಶಾ ಕಾರ್ಯಕರ್ತೆಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿ ವಿಡಿಯೋ ಮೂಲಕ ಟ್ರೋಲ್ ಮಾಡಿದ ಘಟನೆಯೊಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ರಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮಕ್ಕೆ ಲಾಕ್ಡೌನ್ ಸಂದರ್ಭದಲ್ಲಿ ಮೂವರು ಮಹಿಳೆಯರು ಬೆಂಗಳೂರಿನಿಂದ ಬಂದಿದ್ದರು. ಇವರನ್ನು ಕೊವಿಡ್ ಟೆಸ್ಟ್ ಮಾಡಿಸಿ ಎಂದು ಹೇಳಿದ್ದ ಆಶಾ ಕಾರ್ಯಕರ್ತೆಯನ್ನು ನಿಂದಿಸಲಾಗಿದೆ.
ಕೊವಿಡ್ ಟೆಸ್ಟ್ ಮಾಡಿಸಲ್ಲ ಎಂದು ನಗರದಿಂದ ಬಂದ ಮಹಿಳೆಯರು ಆಶಾ ಕಾರ್ಯಕರ್ತೆಯ ಮೇಲೆ ಈ ಸಂದರ್ಭದಲ್ಲಿ ಜಗಳ ಮಾಡಿದ್ದರು. ಇತ್ತಿಚೆಗೆ ಬೆಂಗಳೂರಿಗೆ ವಾಪಸ್ ಆದ ಬಳಿಕ ಆಶಾ ಕಾರ್ಯಕರ್ತೆಯ ಫೋಟೊ ಪಡೆದ ಈ ಮಹಿಳೆಯರು ಅಶ್ಲೀಲ ಪದಗಳಿಂದ ನಿಂದಿಸಿ ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ನೊಂದ ಆಶಾ ಕಾರ್ಯಕರ್ತೆ ದೂರು ನೀಡಿದ್ದಾರೆ.
ಆಶಾ ಕಾರ್ಯಕರ್ತೆ ಮೇಲೆ ಮದ್ಯದ ನಶೆಯಲ್ಲಿದ್ದ ಯುವಕರಿಂದ ಹಲ್ಲೆ ಮದ್ಯದ ನಶೆಯಲ್ಲಿ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದ ಸೀಲ್‌ಡೌನ್ ಪ್ರದೇಶದಲ್ಲಿ ನಡೆದಿದೆ.ಕೊರೊನಾ ಸೋಂಕಿತರ ಯೋಗಕ್ಷೇಮ ವಿಚಾರಿಸಲು ಆಶಾ ಕಾರ್ಯಕರ್ತೆ ಬಿಂದು ಮತ್ತು ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಸೀಲ್‌ಡೌನ್ ಪ್ರದೇಶಕ್ಕೆ ಭೇಟಿ ನೀಡಿದ್ರು. ಈ ವೇಳೆ ಪುಂಡ ಯುವಕರು ದಾಂಧಲೆ ನಡೆಸಿದ್ದಾರೆ. ತಮ್ಮ ಏರಿಯಾಗೆ ಬರದಂತೆ ಗಲಾಟೆ ಮಾಡಿದ್ದಾರೆ. ಮದ್ಯ ಸೇವಿಸಿದ್ದ ಯುವಕರು ಗಲಾಟೆ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂಬಂಧ ಪಿಡಿಒ ಆಸ್ಮಾರಿಂದ ಸೋಮವಾರಪೇಟೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ರಂಜಿತ್, ಸುಭಾಶ್, ವಿಜಯ್, ಮಧು, ದರ್ಶನ್, ರಘು ಪ್ರಮೋದ್ ಎಂಬುವವರ ವಿರುದ್ಧ ಮೌಖಿಕ ದೂರು ದಾಖಲಾಗಿದೆ.
ಇನ್ನು ಕಳೆದ ಮೂರು ದಿನಗಳ ಹಿಂದೆ ಇದೇ ರೀತಿಯ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿತ್ತು. ಕೊರೊನಾ ಲಾಕ್ಡೌನ್ ವೇಳೆ ಅಂಗಡಿ ತೆರೆದು ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದ್ದರು.
ಚಿಕ್ಕಬಳ್ಳಾಪುರದಲ್ಲಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತಿಪ್ಪಗಾನಹಳ್ಳಿಯಲ್ಲಿ ಲಾಕ್ಡೌನ್ ಮೀರಿ ರಾಮಲಿಂಗ ಎಂಬುವವರು ವ್ಯಾಪಾರ ಮಾಡುತ್ತಿದ್ದ. ಈ ವೇಳೆ ಆಶಾ ಕಾರ್ಯಕರ್ತೆ ಸುಮತಿ ಲಾಕ್ಡೌನ್ ಸಮಯದಲ್ಲಿ ಅಂಗಡಿ ತೆರೆದಿದ್ದೇಕೆ? ನೀವು ಮಾಸ್ಕ್ ಕೂಡ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಅಂಗಡಿ ಮಾಲೀಕ ರಾಮಲಿಂಗ ಮತ್ತು ಆನಂದ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಹಾಗೂ ಆಶಾ ಕಾರ್ಯಕರ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ:
ಸೋಂಕಿತರ ಯೋಗಕ್ಷೇಮ ವಿಚಾರಿಸಲು ಬಂದ ಆಶಾ ಕಾರ್ಯಕರ್ತೆ ಮೇಲೆ ಮದ್ಯದ ನಶೆಯಲ್ಲಿದ್ದ ಯುವಕರಿಂದ ಹಲ್ಲೆಗೆ ಯತ್ನ
ಮೂರು ತಿಂಗಳಿನಿಂದ ವೇತನ ಬಂದಿಲ್ಲ; ಜೀವನ ಸಂಕಷ್ಟದಲ್ಲಿದೆ ಎಂದು ಸದಾನಂದಗೌಡ ಭೇಟಿಯಾಗಿ ಆಶಾ ಕಾರ್ಯಕರ್ತೆ ಅಳಲು
Published On - 9:57 am, Fri, 18 June 21