AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿಗಳೇ ಗಮನಿಸಿ! ಕಲಬುರಗಿ ಜಿಲ್ಲೆಯ 16 ಖಾಸಗಿ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಮಾನ್ಯತೆ ರದ್ದು ಮಾಡಲಾಗಿದೆ

ಕಲಬುರಗಿ ಜಿಲ್ಲೆಯ 16 ಖಾಸಗಿ ಶಾಶ್ವತ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ದಾಖಲಾತಿ ಇಲ್ಲದೇ ವಿಚ್ಚಿನ್ನತೆಗೆ ಒಳ್ಳಪಟ್ಟಿರುವ ಹಿನ್ನೆಲೆಯಲ್ಲಿ ಈ ಕಾಲೇಜುಗಳ ಶೈಕ್ಷಣಿಕ ಮಾನ್ಯತೆಯನ್ನು 2021-22ನೇ ಸಾಲಿನಿಂದಲೇ ರದ್ದುಪಡಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಕೆಳಕಂಡ ಕಾಲೇಜುಗಳಲ್ಲಿ ದಾಖಲಾತಿಯನ್ನು ಪಡೆಯಬಾರದೆಂದು ಪ್ರಕಟಿಸಲಾಗಿದೆ.

ವಿದ್ಯಾರ್ಥಿಗಳೇ ಗಮನಿಸಿ! ಕಲಬುರಗಿ ಜಿಲ್ಲೆಯ 16 ಖಾಸಗಿ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ಮಾನ್ಯತೆ ರದ್ದು ಮಾಡಲಾಗಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 07, 2022 | 6:36 PM

ಕಲಬುರಗಿ: ಕಲಬುರಗಿ ಜಿಲ್ಲೆಯ 16 ಖಾಸಗಿ ಶಾಶ್ವತ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ದಾಖಲಾತಿ ಇಲ್ಲದೇ ವಿಚ್ಚಿನ್ನತೆಗೆ ಒಳ್ಳಪಟ್ಟಿರುವ ಹಿನ್ನೆಲೆಯಲ್ಲಿ ಈ ಕಾಲೇಜುಗಳ ಶೈಕ್ಷಣಿಕ ಮಾನ್ಯತೆಯನ್ನು 2021-22ನೇ ಸಾಲಿನಿಂದಲೇ ರದ್ದುಪಡಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಕೆಳಕಂಡ ಕಾಲೇಜುಗಳಲ್ಲಿ ದಾಖಲಾತಿಯನ್ನು ಪಡೆಯಬಾರದೆಂದು ಕಲಬುರಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಿವಶರಣಪ್ಪ ಮುಳೇಗಾಂವ ತಿಳಿಸಿದ್ದಾರೆ.

ಮಾನ್ಯತೆ ರದ್ದುಪಡಿಸಲಾದ ಪದವಿಪೂರ್ವ ಕಾಲೇಜುಗಳ ವಿವರ ಇಂತಿದೆ:

1. ಕಲಬುರಗಿ (ಕೆಕೆ-127) ಹುಮನಾಬಾದ ರಸ್ತೆಯ ಸರ್ಕಾರಿ ಮಿಲ್ಕ ಡೈರಿ ಎದುರುಗಡೆಯಿರುವ ಟಿಪ್ಪು ಸುಲ್ತಾನ್ ಶಾಹಿದ್ ಎಜುಕೇಷನಲ್ ಟ್ರಸ್ಟ(ರಿ) ಕಾಲೇಜು 2. ಕಲಬುರಗಿಯ (ಕೆಕೆ-0180) ಸೇಡಂ ರಸ್ತೆಯ ಎಜಿಓ ಕಾಲೋನಿಯ ಓಕಳಿ ಕ್ಯಾಂಪ್ ಹತ್ತಿರದ ಚೇತನ್ ಯುಥ್ ಫೋರಂ ಸಂಯುಕ್ತ ಪದವಿ ಪೂರ್ವ ಕಾಲೇಜು 3. ಕಲಬುರಗಿಯ (ಕೆಕೆ-0331) ಮಹಮ್ಮದಿ ಸಂಯುಕ್ತ ಪದವಿ ಪೂರ್ವ ಕಾಲೇಜು 4. ಕಲಬುರಗಿಯ (ಕೆಕೆ-0300) ಪ್ರತಿಭಾ ಸ್ವತಂತ್ರ ಪದವಿ ಪೂರ್ವ ಕಾಲೇಜು 5. ಕಲಬುರಗಿ ಜಿಲ್ಲೆಯ (ಕೆಕೆ-0200) ಸೇಡಂ ತಾಲ್ಲೂಕಿನ ಮುಧೋಳದ ಕೇರ್/ಅಫ್ ಶ್ರೀ ಶ್ರೀನಿವಾಸ ನರ್ಸಿಂಗ್ ಹೋಂ 6. ಕೆ.ಜಿ.ಬಿ. ಎದುರುಗಡೆಯಿರುವ ಶ್ರೀ ಶ್ರೀನಿವಾಸ ಸ್ವತಂತ್ರ ಪದವಿ ಪೂರ್ವ ಕಾಲೇಜು 7. ಕಲಬುರಗಿ (ಕೆಕೆ-0277) ನಾಗನಹಳ್ಳಿ ರಸ್ತೆಯ ಕೋರಂಟೆ ಹನುಮಾನ ಗುಡಿ ಹತ್ತಿರದ ಪ್ಲಾಟ್ ಸಂ.04, ಸರ್ವೆ ನಂ.39/3ದಲ್ಲಿನ ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜು 8. ಕಲಬುರಗಿ (ಕೆಕೆ-0167) ಪ್ರಶಾಂತನಗರದಲ್ಲಿನ ಕೀರ್ತಿ ಸ್ವತಂತ್ರ ಪದವಿ ಪೂರ್ವ ಕಾಲೇಜು 9. ಕಲಬುರಗಿ (ಕೆಕೆ-0362) ಅಫಜಲಪೂರ ರಸ್ತೆಯ ಶರಣಸಿರಸಿಗಿಯಲ್ಲಿನ ಅಭಿಷೇಕ್ ಎ ಹತಗುಂದಿ ಪದವಿ ಪೂರ್ವ ಕಾಲೇಜು 10. ಕಲಬುರಗಿ (ಕೆಕೆ0140) ಖ್ವಾಜಾ ಕಾಲೋನಿಯಲ್ಲಿನ ಟೈನಿಪರ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜು 11. ಕಲಬುರಗಿ (ಕೆಕೆ-0275) ಎಸ್.ಟಿ.ಬಿ.ಟಿ. ರಸ್ತೆಯ ಹೊಸ ಬಸ್ ನಿಲ್ದಾಣದ ಹತ್ತಿರದ ಎಸ್.ವಿ. ಪಟೇಲ್ ಚಂದನ ಪ್ರಿಂಟರ್ ಕಟ್ಟಡದಲ್ಲಿನ ಶ್ರೀ ಸಾಯಿ ಪದವಿ ಪೂರ್ವ ಕಾಲೇಜು 12. ಕಲಬುರಗಿ (ಕೆಕೆ-0186) ಸ್ಟೇಷನ್ ರಸ್ತೆಯಲ್ಲಿರುವ 1-174 ಆನಗರಕ್ ಬಿಲ್ಡಿಂಗ್‍ದಲ್ಲಿರುವ ಶ್ರೀ ಪದ್ಮಾವತಿ ಸ್ವತಂತ್ರ ಪದವಿ ಪೂರ್ವ ಕಾಲೇಜು 13. ಕಲಬುರಗಿ ಜಿಲ್ಲೆಯ (ಕೆಕೆ-0289) ಚಿಂಚೋಳಿ ತಾಲೂಕಿನ ವಿದ್ಯಾನಿಧಿ ಪರಿಸರ (ದೇವಡಿ) ಶ್ರೀ ವೆಂಕಟೇಶ್ವರ ರಸ್ತೆಯ ಶ್ರೀಮತಿ ಕಾವೇರಿಬಾಯಿ ಬಿ ಜೋಷಿ ಸರಣಾಂತ ವಿದ್ಯಾನಿಧಿ ಜ್ಞಾನಮಂದಿರ ಸ್ವತಂತ್ರ ಪದವಿ ಪೂರ್ವ ಕಾಲೇಜು 13. ಕಲಬುರಗಿ (ಕೆಕೆ-0228) ಸ್ಟೇಷನ್ ರಸ್ತೆಯ ಸಿದ್ದಿಖ್ ಅಹಮ್ಮದ್ ಮುಜದ್ದದಿ (ಎಸ್.ಎ.ಎಂ) ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜು 15. ಕಲಬುರಗಿಯ (ಕೆಕೆ-0203) ವಿಶ್ವವಿದ್ಯಾನಿಲಯ ರಸ್ತೆಯ ವಿರೇಂದ್ರ ಪಾಟೀಲ್ ಎಕ್ಸಟೆನ್ಷನ್ ಜಿ.ಡಿ.ಎ ಕಾಲೋನಿಯಲ್ಲಿನ ಆಶಾಜ್ಯೋತಿ ಸಂಯುಕ್ತ ವಿಜ್ಞಾನ ಪದವಿ ಪೂರ್ವ ಕಾಲೇಜು 15. ಕಲಬುರಗಿಯ (ಕೆಕೆ-0241) ಶಹಾಬಜಾರ ಆಳಂದ ರಸ್ತೆಯ ಶೆಟ್ಟಿ ಎನ್‍ಕ್ಲೇವ್ ಶ್ರೀ ಶಟ್ಟಿ ಸಂಗಪ್ಪ ಮೆಮೋರಿಯಲ್ ಪದವಿ ಪೂರ್ವ ಕಾಲೇಜು 16. ಕಲಬುರಗಿ(ಕೆಕೆ-0156) ಪ್ರಶಾಂತನಗರದ ಸರಸ್ವತಿ ವಿದ್ಯಾಮಂದಿರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಸ್ವತಂತ್ರ ಪದವಿ ಪೂರ್ವ ಕಾಲೇಜು.