AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಆಟೋ ಪಲ್ಟಿಯಾಗಿ ವೃದ್ಧೆ ದುರ್ಮರಣ; ಐವರಿಗೆ ಗಂಭೀರ ಗಾಯ

ಕಲಬುರಗಿ ಜಿಲ್ಲೆಯ ಅಫಜಲಪುರ (Afzalpur)  ತಾಲೂಕಿನ ಸೊನ್ನ ಕ್ರಾಸ್ ಬಳಿ ಆಟೋ ಪಲ್ಟಿಯಾಗಿ ವೃದ್ಧೆಯೊಬ್ಬರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದ್ದು, ಸ್ಥಳಕ್ಕೆ ಅಫಜಲಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಲಬುರಗಿ: ಆಟೋ ಪಲ್ಟಿಯಾಗಿ ವೃದ್ಧೆ ದುರ್ಮರಣ; ಐವರಿಗೆ ಗಂಭೀರ ಗಾಯ
ಅಫಜಲಪುರದಲ್ಲಿ ಆಟೋ ಪಲ್ಟಿಯಾಗಿ ವೃದ್ಧೆ ದುರ್ಮರಣ
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Feb 23, 2024 | 6:12 PM

Share

ಕಲಬುರಗಿ, ಫೆ.23: ಆಟೋ ಪಲ್ಟಿಯಾಗಿ ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ (Afzalpur)  ತಾಲೂಕಿನ ಸೊನ್ನ ಕ್ರಾಸ್ ಬಳಿ ನಡೆದಿದ್ದು, ಐವರಿಗೆ ಗಂಭೀರ ಗಾಯವಾಗಿದೆ. ಆಟೋದಲ್ಲಿದ್ದ ವೃದ್ಧೆ ಕಲ್ಲವ್ವ ಪಾಣೆಗಾರ್(60) ಮೃತ ರ್ದುದೈವಿ. ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕೂಲಿ ಕೆಲಸಕ್ಕೆಂದು ಅಫಜಲಪುರ ಪಟ್ಟಣದಿಂದ ಸಿಂದಗಿ ತಾಲೂಕಿನ ಕುಮಸಿ ಗ್ರಾಮಕ್ಕೆ ಒಂದೇ ಟಂ ಟಂ ವಾಹನದಲ್ಲಿ 15 ಜನ ಪ್ರಯಾಣಿಸುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಅಫಜಲಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈಲ್ವೆ ಹಳಿ ಮಧ್ಯೆ ಯುವಕನ ಶವ ಪತ್ತೆ, ಆತ್ಮಹತ್ಯೆ ಶಂಕೆ

ರಾಮನಗರ: ಜಿಲ್ಲೆಯ ಮೆಹಬೂಬ್ ನಗರದ ರೈಲ್ವೆ ಹಳಿ ಬಳಿ ಯುವಕನ ಶವ ಪತ್ತೆಯಾಗಿದೆ. ಚಾಮರಾಜನಗರದ ಮದಲವಾಡಿ ಗ್ರಾಮದ ನವೀನ್​ ಮೃತ ವ್ಯಕ್ತಿ. ಸ್ಥಳಕ್ಕೆ ರೈಲ್ವೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಯೇ ಮಾಡಿಕೊಂಡಿದ್ದರೆ, ಅದಕ್ಕೆ ಕಾರಣವೇನು, ಆಥವಾ ಕೊಲೆ ಮಾಡಿ ಇಲ್ಲಿ ತಂದು ಹಾಕಿದರಾ?, ಹೀಗೆ ಹಲವು ಆಯಾಮಗಳಲ್ಲಿ ತನಿಖೆ ಶುರುವಾಗಿದೆ. ಇನ್ನು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಪ್ರತ್ಯೇಕ ಅಪಘಾತ; ತಂದೆಗೆ ಚಿಕಿತ್ಸೆ ಕೊಡಿಸಬೇಕಿದ್ದವ, ಹೆತ್ತ ಮಗು ನೋಡಲು ಹೋಗ್ತಿದವರು ಸೇರಿ ನಾಲ್ವರು ಸಾವು

ದೇಗುಲದಲ್ಲಿ ಪ್ರದಕ್ಷಿಣೆ ಹಾಕುವಾಗ ಹೃದಯಾಘಾತದಿಂದ ವಿದೇಶಿಗ ಸಾವು

ಉತ್ತರ ಕನ್ನಡ: ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ ದೇಗುಲದಲ್ಲಿ ಪ್ರದಕ್ಷಿಣೆ ಹಾಕುವಾಗ ಹೃದಯಾಘಾತದಿಂದ ವಿದೇಶಿಗ ಸಾವನ್ನಪ್ಪಿದ್ದಾನೆ. ರಷ್ಯಾ ಮೂಲದ ಅಲೆಗ್ಸಾಂಡರ್ ತನೆಗಾ(71) ಮೃತ ರ್ದುದೈವಿ. ಮೂವರು ಸ್ನೇಹಿತರೊಂದಿಗೆ ಗೋವಾ, ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ದುರ್ಘಟನೆ ನಡೆದಿದ್ದು, ಮುರ್ಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ