PSI Recruitment scam: ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಕಿಂಗ್​ಪಿನ್​​ ರುದ್ರಗೌಡ ಪಾಟೀಲ್ ಸೇರಿ ಐವರ ಮನೆ ಮೇಲೆ ಇಡಿ ದಾಳಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 20, 2023 | 7:12 AM

ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್​ಪಿನ್​​ಗಳು ಮತ್ತು ಮಧ್ಯವರ್ತಿಗಳ ಮನೆಗಳಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

PSI Recruitment scam: ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: ಕಿಂಗ್​ಪಿನ್​​ ರುದ್ರಗೌಡ ಪಾಟೀಲ್ ಸೇರಿ ಐವರ ಮನೆ ಮೇಲೆ ಇಡಿ ದಾಳಿ
ಪ್ರಾತಿನಿಧಿಕ ಚಿತ್ರ
Image Credit source: udayavani.com
Follow us on

ಕಲಬುರಗಿ: ಪಿಎಸ್​ಐ ನೇಮಕಾತಿ ಪರೀಕ್ಷೆ (PSI recruitment exam scam) ಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್​ಪಿನ್​​ಗಳು ಮತ್ತು ಮಧ್ಯವರ್ತಿಗಳ ಮನೆಗಳಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದವರಿಗೆ ಸದ್ಯ ಇಡಿ ಶಾಕ್ ನೀಡಿದೆ. ರುದ್ರಗೌಡ ಪಾಟೀಲ್ ಮತ್ತು ಅವರ ಸಹೋದರ ಮಹಾಂತೇಶ್ ಪಾಟೀಲ್, ಕಾಶಿನಾಥ್ ಚಿಲ್, ಮಂಜುನಾಥ ಮೇಳಕುಂದಿ, ಸೇರಿ ಐವರ ಮನೆ ಮೇಲೆ ನಿನ್ನೆ (ಜ. 19) ದಾಳಿ ಮಾಡಿದ್ದು, ತಡರಾತ್ರಿವರೆಗೆ ಶೋಧ ಇಡಿ ಅಧಿಕಾರಿಗಳ ತಂಡ ಶೋಧ ನಡೆಸಿದ್ದಾರೆ. ಬೆಂಗಳೂರು ಮತ್ತು ಹೈದ್ರಾಬಾದ್​ನಿಂದ ಬಂದಿದ್ದ 25 ಇಡಿ ಅಧಿಕಾರಿಗಳ ತಂಡ  ಹಣದ ಮೂಲದ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಕೋಟ್ಯಂತರ ರೂ. ಅವ್ಯವಹಾರದ ಬಗ್ಗೆ ಸಿಐಡಿ ಇಡಿ ಗಮನಕ್ಕೆ ತಂದಿತ್ತು. ಆ ಬೆನ್ನಲೆ ಆರೋಪಿಗಳಿಗೆ ಜಾಮೀನು ಸಿಗುವವರೆಗೂ ಕಾದಿದ್ದ ಇಡಿ ಅಧಿಕಾರಿಗಳ ನಿನ್ನೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: PSI Recruitment Scam: ಜೈಲಿನಿಂದ ಹೊರಬಂದ ಬೆನ್ನಲ್ಲೇ ಜಾಮೀನು ಷರತ್ತು ಉಲ್ಲಂಘನೆ: ಕಿಂಗ್​ಪಿನ್​ ರುದ್ರಗೌಡ ಪಾಟೀಲ್​ ಮನೆಗೆ ಸಿಐಡಿ ಭೇಟಿ

ಷರತ್ತುಬದ್ಧ ಜಾಮೀನು ಉಲ್ಲಂಘನೆ  

ಇತ್ತೀಚೆಗೆ ಕಿಂಗ್​ಪಿನ್​ ರುದ್ರಗೌಡ ಪಾಟೀಲ್​ ಮನೆಗೆ ಸಿಐಡಿ ಅಧಿಕಾರಿಗಳು ಭೇಟಿ ನೀಡಿದ್ದರು. ಕೆಲ ದಿನಗಳ ಹಿಂದೆ ಷರತ್ತುಬದ್ಧ ಜಾಮೀನಿನ ಮೇಲೆ ರುದ್ರಗೌಡ ಪಾಟೀಲ್ ಹೊರಬಂದಿದ್ದರು. ಜೈಲಿನಿಂದ ಹೊರಬಂದ ಬೆನ್ನಲ್ಲೇ ಜಾಮೀನು ಷರತ್ತು ಉಲ್ಲಂಘನೆ ಮಾಡಿದ್ದರು. ಹಾಗಾಗಿ ರುದ್ರಗೌಡ ಪಾಟೀಲ್​ ಮನೆಗೆ ಸಿಐಡಿ ಪೊಲೀಸರು ಭೇಟಿ ನೀಡಿದ್ದರು. ಜೊತೆಗೆ ರುದ್ರಗೌಡ ಪಾಟೀಲ್​ ಕುಟುಂಬಸ್ಥರಿಗೆ ನೋಟಿಸ್ ಜಾರಿಮಾಡಿದ್ದರು.

ಕೋರ್ಟ್ ನಿಗದಿತ ವಿಳಾಸದ ಮನೆಯಲ್ಲಿರಬೇಕೆಂದು ಷರತ್ತು ವಿಧಿಸಿತ್ತು. ಕೋರ್ಟ್, ತನಿಖಾಧಿಕಾರಿಗೆ ನೀಡಿರುವ ಮೊಬೈಲ್​ ನಂಬರ್​ನಲ್ಲಿ ಲಭ್ಯವಾಗಿತ್ತು. ಜಾಮೀನಿನ ಮೇಲೆ ಹೊರಬಂದ ನಂತರ ಸಾಕ್ಷ್ಯನಾಶ ಮಾಡಬಾರದು. ಮೊಬೈಲ್ ನಂಬರ್, ವಿಳಾಸ ಬದಲಿಸಿದರೆ ಗಮನಕ್ಕೆ ತರಬೇಕು ಎಂದು ಕಲಬುರಗಿ ಹೈಕೋರ್ಟ್ ರುದ್ರಗೌಡ ಪಾಟೀಲ್​ಗೆ ಷರತ್ತು ವಿಧಿಸಿತ್ತು.

ಇದನ್ನೂ ಓದಿ: PSI Scam Case: ಜಾಮೀನು ಪಡೆದು ಜೈಲಿನಿಂದ ಬಂದ ಮಹಾಂತೇಶ್ ಪಾಟೀಲ್​ಗೆ ಕಾಂಗ್ರೆಸ್ ನಾಯಕರಿಂದ ಸತ್ಕಾರ

ದಿವ್ಯಾ ಹಾಗರಗಿಗೆ ಜಾಮಿನು: ಪಟಾಕಿ ಹೊಡೆದು ಸಂಭ್ರಮಿಸಿದ ಅಭಿಮಾನಿಗಳು

545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ನಡೆದ ಅಕ್ರಮದಲ್ಲಿ ದಿವ್ಯಾ ಹಾಗರಗಿ ಕೂಡ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದರು. ದಿವ್ಯಾ ಸೇರಿದಂತೆ ಪ್ರಕರಣದ 26 ಆರೋಪಿಗಳಿಗೆ ಜನವರಿ 5ರಂದು ಜಾಮೀನು ಸಿಕ್ಕಿದೆ. ಹಾಗಾಗಿ ಮೇಡಂ ಅಭಿಮಾನಿಗಳಿಗೆ ಅವರು ಯುದ್ಧ ಗೆದ್ದುಬಂದಷ್ಟು ಸಂತೋಷವಾಗಿದ್ದು, ದಿವ್ಯಾ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:11 am, Fri, 20 January 23