ಕಲಬುರಗಿ: ಮಹಿಳಾ ಕಾನ್ಸ್ಟೇಬಲ್ CDR ಪಡೆದು ಮಾನಸಿಕ ಕಿರುಕುಳ ನೀಡಿದ್ದ ಆರೋಪಿ ವಿರುದ್ಧ FIR
ಮಹಿಳಾ ಕಾನ್ಸ್ಟೇಬಲ್ CDR ಪಡೆದು ಮಾನಸಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಲಬುರಗಿಯಲ್ಲಿ ಎಂಒಬಿ (ಅಪರಾಧ ಹಿನ್ನೆಲೆಯುಳ್ಳವರು) ಮಹೇಶ್ ಸಂಗಾವಿ ವಿರುದ್ಧ FIR ದಾಖಲಾಗಿದೆ. ಮಹಿಳಾ ಕಾನ್ಸ್ಟೇಬಲ್ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ 7 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಆಗ ಪರಿಚಯವಾದ ಮಹೇಶ್ ಸಂಗಾವಿ ಬಳಿಕ ನಂಬರ್ ಪಡೆದು ಕಾಲ್ ಮಾಡಿ ಮಾತನಾಡುತ್ತಿದ್ದ.
ಕಲಬುರಗಿ, ಡಿ.29: ಮಹಿಳಾ ಕಾನ್ಸ್ಟೇಬಲ್ CDR (Call Detail Record) ಪಡೆದು ಮಾನಸಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಲಬುರಗಿಯಲ್ಲಿ ಎಂಒಬಿ (ಅಪರಾಧ ಹಿನ್ನೆಲೆಯುಳ್ಳವರು) ಮಹೇಶ್ ಸಂಗಾವಿ ವಿರುದ್ಧ FIR ದಾಖಲಾಗಿದೆ. ಮಹಿಳಾ ಕಾನ್ಸ್ಟೇಬಲ್ (Lady Constable) ನೀಡಿದ ದೂರಿನನ್ವಯ ಕಲಬುರಗಿ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. FIRನಲ್ಲಿ ಕಾನ್ಸ್ಟೇಬಲ್ಗೆ ಮಾನಸಿಕ ಕಿರುಕುಳ ನೀಡಲಾಗಿರುವ ಅಂಶಗಳನ್ನು ಉಲ್ಲೇಖಿಸಲಾಗಿದೆ.
ಮಹಿಳಾ ಕಾನ್ಸ್ಟೇಬಲ್ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ 7 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಪರಿಚಯವಾದ ಮಹೇಶ್ ಸಂಗಾವಿ ಬಳಿಕ ನಂಬರ್ ಪಡೆದು ಕಾಲ್ ಮಾಡಿ ಮಾತನಾಡುತ್ತಿದ್ದ. ಮಹಿಳಾ ಕಾನ್ಸ್ಟೇಬಲ್ ಅಶೋಕ ನಗರ ಠಾಣೆಯಿಂದ ಆರ್.ಜಿ. ನಗರ ಠಾಣೆಗೆ ವರ್ಗಾವಣೆಯಾದರು. ಆಗ ಆರ್.ಜಿ. ನಗರ ಠಾಣೆಯಲ್ಲಿ ಎಮ್ ಓಬಿ ಫೈಲ್ನಲ್ಲಿ ಮಹೇಶ್ ಹೆಸರು ನೋಡಿ ಮಹೇಶ್ನಿಂದ ದೂರವಾಗೋದಕ್ಕೆ ಮುಂದಾಗಿದ್ರು. ಆಗ ಮಹಿಳಾ ಕಾನ್ಸ್ಟೇಬಲ್ ಭೇಟಿಯಾಗಿ ಮಹೇಶ್ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ.
ಇದನ್ನೂ ಓದಿ: ಮಹಿಳಾ ಕಾನ್ಸ್ಟೇಬಲ್ ಮೊಬೈಲ್ ಸಿಡಿಆರ್ ಕಳ್ಳನಿಗೆ ಮಾರಾಟ ಮಾಡಿ ಮದುವೆ ಮುರಿದ ಪೊಲೀಸರು: ಕಲಬುರಗಿ ಪೊಲೀಸ್ ಆಯುಕ್ತರಿಗೆ ದೂರು
ಹಣ ಕೊಡದಿದ್ರೆ ಖಾಸಗಿ ವಿಡಿಯೋ, ಫೋಟೋ ವೈರಲ್ ಮಾಡುವ ಬೆದರಿಕೆ ಹಾಕಿದ್ದ. ಇನ್ನು ವಿಡಿಯೋ ವೈರಲ್ ಮಾಡ್ತೇನೆ ಎಂದಿದ್ದಕ್ಕೆ ಮಹಿಳಾ ಕಾನ್ಸ್ಟೇಬಲ್ ಆರೋಪಿ ಮಹೇಶನಿಗೆ ಕಪಾಳ ಮೋಕ್ಷ ಮಾಡಿ ಅವನಿಂದ ದೂರವಾಗಿದ್ದರು. ಆದರೂ ಬಿಡದೆ ಮಹೇಶ ಮದುವೆ ಆಗುವಂತೆ ಮಹಿಳಾ ಕಾನ್ಸ್ಟೇಬಲ್ಗೆ ಪೀಡಿಸುತ್ತಿದ್ದ. ಮಹೇಶ್ ಮದುವೆಗೆ ನಿರಾಕರಿಸಿ ಮತ್ತೊಬ್ಬ ಕಾನ್ಸ್ಟೇಬಲ್ ಜೊತೆ ಲೇಡಿ ಪಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಲೇಡಿ ಕಾನ್ಸ್ಟೇಬಲ್ ಬಳಿ 1.5 ಲಕ್ಷ ಹಣ ವಸೂಲಿ ಮಾಡಿರೋದಾಗಿ ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ನಿಶ್ಚಿತಾರ್ಥ ಆದ ಹುಡುಗನಿಗೆ ಸಿಡಿಆರ್ ಫೋಟೋ ಕಳಿಸಿ ನಿಶ್ಚಿತಾರ್ಥ ಮುರಿದುಬೀಳುವಂತೆ ಮಾಡಲಾಗಿದೆ ಎಂದು ಮಹೇಶ್ ವಿರುದ್ಧ ಮಹಿಳಾ ಕಾನ್ಸ್ಟೇಬಲ್ ಎಫ್ಐಆರ್ ದಾಖಲಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ