ಕಲಬುರಗಿ: ಮಹಿಳಾ ಕಾನ್ಸ್​ಟೇಬಲ್​ CDR​ ಪಡೆದು ಮಾನಸಿಕ ಕಿರುಕುಳ ನೀಡಿದ್ದ ಆರೋಪಿ ವಿರುದ್ಧ FIR

ಮಹಿಳಾ ಕಾನ್ಸ್​ಟೇಬಲ್​ CDR​ ಪಡೆದು ಮಾನಸಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಲಬುರಗಿಯಲ್ಲಿ ಎಂಒಬಿ (ಅಪರಾಧ ಹಿನ್ನೆಲೆಯುಳ್ಳವರು) ಮಹೇಶ್ ಸಂಗಾವಿ ವಿರುದ್ಧ FIR ದಾಖಲಾಗಿದೆ. ಮಹಿಳಾ ಕಾನ್ಸ್​ಟೇಬಲ್ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ 7 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಆಗ ಪರಿಚಯವಾದ ಮಹೇಶ್ ಸಂಗಾವಿ ಬಳಿಕ ನಂಬರ್ ಪಡೆದು ಕಾಲ್ ಮಾಡಿ ಮಾತನಾಡುತ್ತಿದ್ದ.

ಕಲಬುರಗಿ: ಮಹಿಳಾ ಕಾನ್ಸ್​ಟೇಬಲ್​ CDR​ ಪಡೆದು ಮಾನಸಿಕ ಕಿರುಕುಳ ನೀಡಿದ್ದ ಆರೋಪಿ ವಿರುದ್ಧ FIR
ಸಾಂದರ್ಭಿಕ ಚಿತ್ರ
Edited By: ಆಯೇಷಾ ಬಾನು

Updated on: Dec 29, 2023 | 9:00 AM

ಕಲಬುರಗಿ, ಡಿ.29: ಮಹಿಳಾ ಕಾನ್ಸ್​ಟೇಬಲ್​ CDR​ (Call Detail Record) ಪಡೆದು ಮಾನಸಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಲಬುರಗಿಯಲ್ಲಿ ಎಂಒಬಿ (ಅಪರಾಧ ಹಿನ್ನೆಲೆಯುಳ್ಳವರು) ಮಹೇಶ್ ಸಂಗಾವಿ ವಿರುದ್ಧ FIR ದಾಖಲಾಗಿದೆ. ಮಹಿಳಾ ಕಾನ್ಸ್​ಟೇಬಲ್ (Lady Constable) ನೀಡಿದ ದೂರಿನನ್ವಯ ಕಲಬುರಗಿ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. FIRನಲ್ಲಿ ಕಾನ್ಸ್​ಟೇಬಲ್​ಗೆ ಮಾನಸಿಕ ಕಿರುಕುಳ ನೀಡಲಾಗಿರುವ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಮಹಿಳಾ ಕಾನ್ಸ್​ಟೇಬಲ್ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ 7 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಪರಿಚಯವಾದ ಮಹೇಶ್ ಸಂಗಾವಿ ಬಳಿಕ ನಂಬರ್ ಪಡೆದು ಕಾಲ್ ಮಾಡಿ ಮಾತನಾಡುತ್ತಿದ್ದ. ಮಹಿಳಾ ಕಾನ್ಸ್​ಟೇಬಲ್ ಅಶೋಕ ನಗರ ಠಾಣೆಯಿಂದ ಆರ್.ಜಿ. ನಗರ ಠಾಣೆಗೆ ವರ್ಗಾವಣೆಯಾದರು. ಆಗ ಆರ್.ಜಿ. ನಗರ ಠಾಣೆಯಲ್ಲಿ ಎಮ್ ಓಬಿ ಫೈಲ್​ನಲ್ಲಿ ಮಹೇಶ್ ಹೆಸರು ನೋಡಿ ಮಹೇಶ್​ನಿಂದ ದೂರವಾಗೋದಕ್ಕೆ ಮುಂದಾಗಿದ್ರು. ಆಗ ಮಹಿಳಾ ಕಾನ್ಸ್​ಟೇಬಲ್ ಭೇಟಿಯಾಗಿ ಮಹೇಶ್ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ.

ಇದನ್ನೂ ಓದಿ: ಮಹಿಳಾ ಕಾನ್ಸ್​​​ಟೇಬಲ್ ಮೊಬೈಲ್ ಸಿಡಿಆರ್ ಕಳ್ಳನಿಗೆ ಮಾರಾಟ ಮಾಡಿ ಮದುವೆ ಮುರಿದ ಪೊಲೀಸರು: ಕಲಬುರಗಿ ಪೊಲೀಸ್ ಆಯುಕ್ತರಿಗೆ ದೂರು

ಹಣ ಕೊಡದಿದ್ರೆ ಖಾಸಗಿ ವಿಡಿಯೋ, ಫೋಟೋ ವೈರಲ್ ಮಾಡುವ ಬೆದರಿಕೆ ಹಾಕಿದ್ದ. ಇನ್ನು ವಿಡಿಯೋ ವೈರಲ್ ಮಾಡ್ತೇನೆ ಎಂದಿದ್ದಕ್ಕೆ ಮಹಿಳಾ ಕಾನ್ಸ್​ಟೇಬಲ್​ ಆರೋಪಿ ಮಹೇಶನಿಗೆ ಕಪಾಳ ಮೋಕ್ಷ ಮಾಡಿ ಅವನಿಂದ ದೂರವಾಗಿದ್ದರು. ಆದರೂ ಬಿಡದೆ ಮಹೇಶ ಮದುವೆ ಆಗುವಂತೆ ಮಹಿಳಾ ಕಾನ್ಸ್​ಟೇಬಲ್​ಗೆ ಪೀಡಿಸುತ್ತಿದ್ದ. ಮಹೇಶ್ ಮದುವೆಗೆ ನಿರಾಕರಿಸಿ ಮತ್ತೊಬ್ಬ ಕಾನ್ಸ್​ಟೇಬಲ್ ಜೊತೆ ಲೇಡಿ ಪಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಲೇಡಿ ಕಾನ್ಸ್​ಟೇಬಲ್ ಬಳಿ 1.5 ಲಕ್ಷ ಹಣ ವಸೂಲಿ ಮಾಡಿರೋದಾಗಿ ಎಫ್​ಐಆರ್​​ನಲ್ಲಿ ದಾಖಲಿಸಲಾಗಿದೆ. ನಿಶ್ಚಿತಾರ್ಥ ಆದ ಹುಡುಗನಿಗೆ ಸಿಡಿಆರ್​ ಫೋಟೋ ಕಳಿಸಿ ನಿಶ್ಚಿತಾರ್ಥ ಮುರಿದುಬೀಳುವಂತೆ ಮಾಡಲಾಗಿದೆ ಎಂದು ಮಹೇಶ್ ವಿರುದ್ಧ ಮಹಿಳಾ ಕಾನ್ಸ್​ಟೇಬಲ್ ಎಫ್​ಐಆರ್ ದಾಖಲಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us