ಇವರೆಂತಹ ದರೋಡೆಕೋರರೆಂದು ದಾಖಲೆ ಸಮೇತ ಬಹಿರಂಗ ಮಾಡುವೆ: RSS ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಚಿತ್ತಾಪುರದಲ್ಲಿ ನಡೆದ ಪಥಸಂಚಲನ ಅಂತ್ಯವಲ್ಲ, ಆರಂಭ. ದೇವಾಲಯಗಳ ಹುಂಡಿ ಹಣವನ್ನು ಸರ್ಕಾರ ಲೆಕ್ಕ ಹಾಕುತ್ತದೆ, ಅಂಥಾದ್ದರಲ್ಲಿ ಆರ್​ಎಸ್ಎಸ್ ಹಣದ ಲೆಕ್ಕ ಕೇಳಬಾರದಾ? RSS ತೆರಿಗೆ ವಂಚನೆ ಬಗ್ಗೆ ದಾಖಲೆ ಸಮೇತ ಬಹಿರಂಗಪಡಿಸುವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರ್​​ಎಸ್ಎಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಇವರೆಂತಹ ದರೋಡೆಕೋರರೆಂದು ದಾಖಲೆ ಸಮೇತ ಬಹಿರಂಗ ಮಾಡುವೆ: RSS ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ
ಸಚಿವ ಪ್ರಿಯಾಂಕ್ ಖರ್ಗೆ
Edited By:

Updated on: Nov 16, 2025 | 4:46 PM

ಕಲಬುರಗಿ, ನವೆಂಬರ್​ 16: ಇಂದು ಜಿಲ್ಲೆಯ ಚಿತ್ತಾಪುರದಲ್ಲಿ ಆರ್​​​ಎಸ್​​ಎಸ್ (RSS) ಪಥಸಂಚಲನ ಆಯೋಜಿಸಲಾಗಿದೆ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಆರ್​​​ಎಸ್​​ಎಸ್​​ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಹಣ RSSಗೆ ಹೋಗಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡ್ತೀನಿ. ಎಷ್ಟು ಲೂಟಿ ಮಾಡಿದ್ದಾರೆನ್ನುವುದು ಗೊತ್ತಾಗುತ್ತದೆ. ಇವರೆಂತಹ ದರೋಡೆಕೋರರೆಂದು ದಾಖಲೆ ಸಮೇತ ಬಹಿರಂಗ ಮಾಡುವೆ ಎಂದು ಕಿಡಿಕಾರಿದ್ದಾರೆ.

ಆರ್​ಎಸ್ಎಸ್ ಕಥೆ ಇನ್ನೂ ಬಹಳ ಇದೆ ಮುಂದೆ ಹೇಳುತ್ತೇನೆ ಎಂದ ಪ್ರಿಯಾಂಕ್ ಖರ್ಗೆ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಚಿತ್ತಾಪುರದಲ್ಲಿ ಆರ್​​ಎಸ್ಎಸ್ ಪಥಸಂಚಲನ ಆಯ್ತೆಂದು ಮುಗಿದಿಲ್ಲ. ಚಿತ್ತಾಪುರದಲ್ಲಿ ಆರ್​ಎಸ್ಎಸ್ ಪಥಸಂಚಲನ ಮೂಲಕ ಶುರುವಾಗಿದೆ. ಆರ್​ಎಸ್ಎಸ್ ಕಥೆ ಇನ್ನೂ ಬಹಳ ಇದೆ ಮುಂದೆ ಹೇಳುತ್ತೇನೆ. ಚಿತ್ತಾಪುರಕ್ಕೆ 3 ಲಕ್ಷ ಜನ ಬರ್ತಾರೆ ಅಂದ್ರು, ಬಂದ್ರಾ? ಆರ್.ಅಶೋಕ್, ವಿಜಯೇಂದ್ರ ಚಿತ್ತಾಪುರಕ್ಕೆ ಬರ್ತೀವಿ ಅಂದ್ರು, ಬಂದ್ರಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: RSS ದೇಣಿಗೆ ಕುರಿತಾದ ಭಾಗವತ್ ಮಾತಿಗೆ ಪ್ರಿಯಾಂಕ್ ಖರ್ಗೆ ಟ್ವೀಟ್: 11 ಪ್ರಶ್ನೆ ಮುಂದಿಟ್ಟ ಸಚಿವ

ದೇವಾಲಯಗಳ ಹುಂಡಿ ಹಣವನ್ನು ಸರ್ಕಾರ ಲೆಕ್ಕ ಹಾಕುತ್ತದೆ, ಅಂಥಾದ್ದರಲ್ಲಿ ಆರ್​ಎಸ್ಎಸ್ ಹಣದ ಲೆಕ್ಕ ಕೇಳಬಾರದಾ? ಇವರು ಹೇಗೆ ಆದಾಯ ತೆರಿಗೆ ವಂಚಿಸುತ್ತಿದ್ದಾರೆಂದು ದಾಖಲೆ ಸಮೇತ ಬಹಿರಂಗಪಡಿಸುವೆ. ಇವರಿಗೆ ಯಾರೆಲ್ಲ ದೇಣಿಗೆ ಕೊಡುತ್ತಾರೆ, ಲೆಕ್ಕ ಹೇಗೆ ಕೊಡ್ತಾರೆ? ಆರ್​ಎಸ್ಎಸ್ ದೇಣಿಗೆ ಸಂಗ್ರಹದ ಬಗ್ಗೆ ಹೊರಗಡೆ ಬರಲಿದೆ ಎಂದು ಹೇಳಿದ್ದಾರೆ.

ಆರ್​ಎಸ್ಎಸ್​ನವರು ಏಕೆ ಪ್ರತಿಭಟನೆಯಲ್ಲಿ ಭಾಗಿಯಾಗಲ್ಲ?

ಆರ್​ಎಸ್ಎಸ್​ನವರು ಎಂದಾದರೂ ರೈತರ ಬಗ್ಗೆ ಮಾತಾಡಿದ್ದಾರಾ? ಗಣವೇಷ ಧರಿಸಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರಾ? ಕಬ್ಬಿಗೆ ಎಫ್ಆರ್​ಪಿ ನಿಗದಿ ಮಾಡಿ ಎಂದು ಏಕೆ ಹೋರಾಟ ಮಾಡಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: Chittapur RSS Pathsanchalan Live: ಚಿತ್ತಾಪುರದಲ್ಲಿ RSS ಪಥಸಂಚಲನ; ಲೈವ್​ ನೋಡಿ

ಇನ್ನು ಇತ್ತೀಚೆಗೆ ಸಚಿವ ಪ್ರಿಯಾಂಕ್ ಖರ್ಗೆ RSS ದೇಣಿಗೆ ವಿಚಾರವಾಗಿ ಟ್ವೀಟ್​ ಮಾಡುವ ಮೂಲಕ ಆರ್​​ಎಸ್​​ಎಸ್ ಮುಖ್ಯಸ್ಥ ಮೋಹನ್ ಭಾಗವತ್​​ಗೆ ಪ್ರಶ್ನೆ ಮಾಡಿದ್ದರು. ​

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.