ಕಲಬುರಗಿಯ ಹವಾ ಮಲ್ಲಿನಾಥ ಮುತ್ಯಾಗೆ ನ್ಯಾಯಾಂಗ ಬಂಧನ

ಕಲಬುರಗಿಯ ಹವಾ ಮಲ್ಲಿನಾಥ ಮುತ್ಯಾಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕಲಬುರಗಿ 2 ನೇ ಜಿಲ್ಲಾ ಸತ್ರ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ. ಜೈ ಭಾರತ್ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ, ಕರ್ನಾಟಕ-ಮಹಾರಾಷ್ಟ್ರದಲ್ಲಿ ಭಾರಿ ಪ್ರಭಾವ ಹೊಂದಿದ್ದಾರೆ. ಅಟ್ರಾಸಿಟಿ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಕುಮ್ಮಕ್ಕು ಆರೋಪ ಹಿನ್ನೆಲೆ ಪ್ರಕರಣ ದಾಖಲಾಗಿತ್ತು.

ಕಲಬುರಗಿಯ ಹವಾ ಮಲ್ಲಿನಾಥ ಮುತ್ಯಾಗೆ ನ್ಯಾಯಾಂಗ ಬಂಧನ
ಹವಾ ಮಲ್ಲಿನಾಥ ಮುತ್ಯಾ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Feb 19, 2024 | 5:40 PM

ಕಲಬುರಗಿ, ಫೆಬ್ರವರಿ 19: ಕಲಬುರಗಿಯ ಹವಾ ಮಲ್ಲಿನಾಥ ಮುತ್ಯಾ (Mallinath Mutya) ಗೆ 14 ದಿನ ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಿ ಕಲಬುರಗಿ 2 ನೇ ಜಿಲ್ಲಾ ಸತ್ರ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ. ಹವಾ ಮಲ್ಲಿನಾಥ ಮುತ್ಯಾ ಅವರ ಸಂಬಂಧಿ ಪ್ರಕಾಶ್ ಮೇಲೆ ಅಟ್ರಾಸಿಟಿ ಮತ್ತು ಅತ್ಯಾಚಾರ ಪ್ರಕರಣ, ಹವಾ ಮಲ್ಲಿನಾಥ ಮುತ್ಯಾ ವಿರುದ್ಧವೂ ಕುಮ್ಮಕ್ಕು ಆರೋಪ ಹಿನ್ನೆಲೆ 498/A, 506,109, 34 ಅಡಿ 2018 ರಲ್ಲಿ ಕಲಬುರಗಿಯ ಎಂ ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳಿಂದ ಹವಾ ಮಲ್ಲಿನಾಥ್ ಮುತ್ಯಾ ನ್ಯಾಯಾಲಯಕ್ಕೆ ಹಾಜರಾಗಿಲ್ಲ.

ನ್ಯಾಯಾಲಯ ಬಾಡಿ ವಾರೆಂಟ್ ಮಾಡಿದ ಕಾರಣ ಇಂದು ನ್ಯಾಯಾಲಯದ ಮುಂದೆ ಹವಾ ಮಲ್ಲಿನಾಥ್ ಮುತ್ಯಾ ಶರಣಾಗಿದ್ದರು. ಹವಾ ಮಲ್ಲಿನಾಥ ಮುತ್ಯಾ ಜೈ ಭಾರತ್ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ, ಕರ್ನಾಟಕ-ಮಹಾರಾಷ್ಟ್ರದಲ್ಲಿ ಭಾರಿ ಪ್ರಭಾವ ಹೊಂದಿದ್ದಾರೆ.

ರಾಮ ಮಂದಿರದ ಮೇಲೆ ಹಸಿರು ಬಾವುಟದ ಚಿತ್ರ: ಮುಸ್ಲಿಂ ಯುವಕ ಜೈಲಿಗೆ 

ಧಾರವಾಡ: ರಾಮ ಮಂದಿರದ ಮೇಲೆ ಹಸಿರು ಬಾವುಟದ ಚಿತ್ರವನ್ನು ಸ್ಟೇಟಸ್ ಇಟ್ಟುಕೊಂಡ ಮುಸ್ಲಿಂ ಯುವಕನನ್ನು ಜೈಲಿಗೆ ಕಳುಹಿಸಲಾಗಿತ್ತು. ಮೂರು ದಿನಗಳ ಹಿಂದೆ ಚಿತ್ರ ಹಾಕಿ ಸ್ಟೇಟಸ್ ಇಟ್ಟ ಯುವಕ ‘ಇಸ್ಲಾಮಿಕ್ ಪವರ್ ತೋರಿಸುತ್ತೇವೆ’ ಎಂದು ಬರೆಯಲಾಗಿತ್ತು. ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಸದ್ದಾಂಹುಸೇನ ಇಸ್ಮಾಯಿಲ್ ಸಾಬ್ ನದಾಫ್ ಎನ್ನುವ ಯುವಕನೇ ಈ ಕೃತ್ಯವೆಸಗಿ ಜೈಲು ಪಾಲಾಗಿದ್ದಾರೆ. ಈ ಸ್ಟೇಟಸ್ ಗಮನಕ್ಕೆ ಬರುತ್ತಿದ್ದಂತೆಯೇ ಗರಗ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಆತನನ್ನು ಬಂಧಿಸಿದ್ದರು.

ಇದನ್ನೂ ಓದಿ: ಅನುಮತಿ ಪಡೆಯದೆ ಕಬ್ಬು ಅರಿದಿರುವ ಆರೋಪ: ಶಾಸಕ ಯತ್ನಾಳ್‌ಗೆ ನೋಟಿಸ್ ಜಾರಿ

ಇದೇ ವೇಳೆ ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು, ಯುವಕನ ಮನೆಗೆ ಹೋಗಿ ಅಯೋಧ್ಯೆಗೆ ತಮ್ಮೊಂದಿಗೆ ಬರುವಂತೆ ಆಮಂತ್ರಣ ನೀಡಲು ಮುಂದಾಗಿದ್ದರು.

ಇದನ್ನೂ ಓದಿ: ಸಂಕಷ್ಟದಲ್ಲಿ ಬಸನಗೌಡ ಯತ್ನಾಳ್, ಸಕ್ಕರೆ ಕಾರ್ಖಾನೆಗೆ ನೀಡಿರುವ ನೋಟೀಸ್​ಗೆ 24 ಗಂಟೆಗಳಲ್ಲಿ ಉತ್ತರಿಸಲು ಸೂಚನೆ

ಜ. 30ರಂದು ತಡಕೋಡ ಗ್ರಾಮಕ್ಕೆ ತೆರಳಲು ಶ್ರೀರಾಮ ಸೇನೆ ನಿರ್ಧರಿಸಿರೋ ಕಾರ್ಯಕರ್ತರು, ನಾವೇ ಖರ್ಚು ಕೊಟ್ಟು ಅಯೋಧ್ಯೆಗೆ ಕರೆದುಕೊಂಡು ಹೋಗುತ್ತೇವೆ. ಅಲ್ಲಿಗೆ ಬಂದು ಹಸಿರು ಧ್ವಜ ಹಾರಿಸು ಅನ್ನೋ ಚಾಲೆಂಜ್ ಹಾಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:14 pm, Mon, 19 February 24

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!