AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ-ಬೆಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್‌ ರೈಲು: ಇಲ್ಲಿದೆ ವೇಳಾಪಟ್ಟಿ

Kalaburagi To Bangalore New Train: ಪಿಟ್‌ ಲೈನ್‌ (ರೇಲ್ವೆ ನಿರ್ವಹಣೆ ಸೌಲಭ್ಯ) ಸವಲತ್ತಿರೋ ಕಲಬುರಗಿಯಿಂದಲೇ ಹೊಸ ರೈಲು ಓಡಿಸಲು ಇಲಾಖೆಗೇನು ಅಡ್ಡಿ? ಸೊಲ್ಲಾಪುರ- ಹಾಸನ ಸೂಪರ್‌ ಫಾಸ್ಟ್‌ ರೈಲನ್ನ ಅದ್ಯಾಕೆ ಸೊಲ್ಲಾಪುರದಿಂದ ಓಡಿಸಬೇಕು? ಅದನ್ನೇ ಕಲಬುರಗಿಯಿಂದ ಯಾಕೆ ಓಡಿಸಬಾರದು? ಕಲಬುರಗಿಯಿಂದಲೇ ರೈಲುಗಳ ಓಡಾಟ ಶುರುವಾಗಬೇಕು ತಾನೆ? ಕಲಬುರಗಿಯೇ ರೈಲು ಉಗಮದ ಕೇಂದ್ರವಾಗಬೇಕು. ಇಲ್ಲಿಂದಲೇ ರಾಜಧಾನಿ ಬೆಂಗಳೂರಿಗೆ ಹೊಸ ರೈಲೊಂದು ಓಡಬೇಕೆಂಬ ದಶಕಗಳ ಬೇಡಿಕೆ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ.

ಕಲಬುರಗಿ-ಬೆಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್‌ ರೈಲು: ಇಲ್ಲಿದೆ ವೇಳಾಪಟ್ಟಿ
Follow us
ರಮೇಶ್ ಬಿ. ಜವಳಗೇರಾ
|

Updated on:Mar 04, 2024 | 10:02 PM

ಕಲಬುರಗಿ/ಬೆಂಗಳೂರು, (ಮಾರ್ಚ್ 04): ಇದೇ ಮಾ 9 ರಂದು ಕಲಬುರಗಿ- ಬೆಂಗಳೂರು ಬಯ್ಯಪ್ಪನಹಳ್ಳಿ 9Kalaburagi To Bangalore New Train) ನಡುವೆ ನೂತನ ರೈಲು ಸಂಚಾರಕ್ಕೆ ಮುಹೂರ್ತ ನಿಗದಿಯಾಗಿದೆ. ಮಾರ್ಚ್ 9ರಿಂದ ವಾರಕ್ಕೊಮ್ಮೆ (ಶುಕ್ರವಾರ, ಶನಿವಾರ) ಸಂಚರಿಸುವ ಈ ರೈಲು ಏಪ್ರಿಲ್ 5 ರಿಂದ ವಾರದಲ್ಲಿ 3 ದಿನ ಸಂಚರಿಸಲಿದೆ ಎಂದು ಕಲಬುರಗಿ ಸಂಸದ ಡಾ. ಉಮೇಶ ಜಾದವ್ (Umesh Jadhav) ಮಾಹಿತಿ ನೀಡಿದ್ದಾರೆ. ಮಾರ್ಚ್ 9ರಂದು ಸಾಯಂಕಾಲ 5 ಗಂಟೆಗೆ ಕಲಬುರ್ಗಿಯಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದು,ಕಲಬುರಗಿ (Kalaburagi) ವಿಭಾಗದ ಜನರು ಈ ಶುಭಾರಂಭ ಕಾರ್ಯಕ್ರಮವನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದು ಜಾಧವ್ ಕರೆ ನೀಡಿದ್ದಾರೆ.

ಕಲಬುರಗಿ- ಬೈಯ್ಯಪ್ಪನಹಳ್ಳಿ ಮಧ್ಯೆ ಓಡಾಟ

ನೂತನ ಕಲಬುರಗಿ – ಬೆಂಗಳೂರು ರೈಲು ವಾರದಲ್ಲಿ ಮೂರು ದಿನ ಕಲಬುರ್ಗಿಯಿಂದ ಸಾಯಂಕಾಲ 5 ಗಂಟೆಗೆ ಹೊರಟು ಮರುದಿನ ಮುಂಜಾನೆ 4:15 ಗಂಟೆಗೆ ಬೆಂಗಳೂರು ಸಮೀಪದ ಬೈಯ್ಯಪ್ಪನಹಳ್ಳಿ ಅತ್ಯಾಧುನಿಕ ಮತ್ತು ಸುಸಜ್ಜಿತವಾಗಿ ನಿರ್ಮಾಣಗೊಂದಿರುವ ಸರ್.ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ತಲುಪಲಿದೆ.

ಏ.5ರಿಂದ ವಾರಕ್ಕೆ ಮೂರು ದಿನ ಸಂಚಾರ

ಈ ನೂತನ ರೈಲು ಏಪ್ರಿಲ್‌ 5ರಿಂದ ವಾರದಲ್ಲಿ ಮೂರು ದಿನ ಸಂಚರಿಸಲಿದೆ. ಈ ಕುರಿತು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಇಂದು (ಮಾರ್ಚ್ 4) ನವದೆಹಲಿಯಲ್ಲಿ ಮನವಿ ಸಲ್ಲಿಸಿದ್ದು, ಈ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಏಪ್ರಿಲ್‌ 5ರಿಂದ ವಾರದಲ್ಲಿ ಮೂರು ದಿನ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಉಮೇಶ್ ಜಾಧವ್ ಅವರು ಸಂಸದರಾದಾಗಿನಿಂದ ಇಲ್ಲಿಯವರೆಗೂ ಮಾಧ್ಯಮಗೋಷ್ಠಿ ಕರೆದಾಗೆಲ್ಲಾ ಹೊಸ ರೈಲು ಸಂಚಾರ, ರೈಲ್ವೆ ಡಿವಿಜನ್‌ ಹೆಡ್‌ ಕ್ವಾರ್ಟರ್‌ ಪ್ರಶ್ನೆಗಳು ಮೋಸ್ಟ್‌ ಲೈಕ್ಲಿ ಪ್ರಶ್ನೆಗಳಾಗಿಯೇ ಎದುರಾಗುತ್ತಿದ್ದವು. ಹಾಗೆಯೇ ಮೋಸ್ಟ್‌ ಲೈಕ್ಲಿ ಆನ್ಸರ್‌ನಲ್ಲೇ ಕೊನೆಗೊಳ್ಳುತ್ತಿದ್ದವು. ಈಗ ಹೊಸ ರೈಲು ಯಾವಾಗ ಎಂಬ ಪ್ರಶ್ನೆಗೆ ಅರೆಬರೆಯಾದರೂ ಉತ್ತರ ಸಿಕ್ಕಿದೆ.

ಈ ಭಾಗದ ಜನ ಹಣ ಕೊಟ್ಟ ಟಾಯ್ಲೇಟ್‌, ಬಾತ್‌ರೂಮ್‌, ರೇಲ್ವೆ ಬೋಗಿಗಳ ನೆಲಹಾಸಿನ ಮೇಲೆ ಕುಳಿತೋ, ನಿಂತೋ, ಮುಡಿಯಾಗಿ ಮಲಗಿಯೋ ಬೆಂಗಳೂರಿಗೆ ಬಂದು ಹೋಗುವುದು ತಪ್ಪಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:56 pm, Mon, 4 March 24