AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI Recruitment Scam: ಡಿವೈಎಸ್​ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ್​ ಸಿಐಡಿ ವಶ

ಪರೀಕ್ಷೆ ಮುಗಿದ ನಂತರ ತಗೆಸಿದ್ದ ಗ್ರೂಪ್ ಪೋಟೋ ಎಲ್ಲಡೆ ವೈರಲ್​ ಆಗಿದ್ದು, ಕಲಬುರಗಿ ನಗರದ ಜ್ಞಾನಜೋತಿ ಇಂಗ್ಲಿಷ್ ಶಾಲೆಯಲ್ಲಿ ಪರೀಕ್ಷೆ ನಡೆದಿತ್ತು. ಪೋಟೋದಲ್ಲಿ ಶಾಲೆ ಸಿಬ್ಬಂದಿ, ಪೊಲೀಸ ‌ಅಧಿಕಾರಿಗಳು, ಶಾಲೆ ಒಡತಿ ದಿವ್ಯಾ ಹಾಗರಗಿ ಫೋಟೋಗೆ ಪೋಸು ನೀಡಿದ್ದಾರೆ.

PSI Recruitment Scam: ಡಿವೈಎಸ್​ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ್​ ಸಿಐಡಿ ವಶ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 05, 2022 | 6:19 PM

Share

ಕಲಬುರಗಿ: 545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ DySP ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ್​ರನ್ನ  ಸಿಐಡಿ ಬಂಧಿಸಿದ್ದು, ಕಲಬುರಗಿಯ ಸಿಐಡಿ ಕಚೇರಿಯಲ್ಲಿ ಬೆಳಗ್ಗೆಯಿಂದ ಸಿಐಡಿ ಅಧಿಕಾರಿಗಳು ಇಬ್ಬರ ವಿಚಾರಣೆ ನಡೆಸಿದ್ದಾರೆ. ಬೆಳಗ್ಗೆ 10ಗಂಟೆಯಿಂದ ವಿಚಾರಣೆ ನಡೆಸಿದ್ದ ಅಧಿಕಾರಿಗಳು, ಬೆರಳಚ್ಚು ವಿಭಾಗದ ಪೊಲೀಸ್​ ಇನ್ಸ್​ಪೆಕ್ಟರ್​​​ ಆಗಿದ್ದ ಆನಂದ್, ಮಲ್ಲಿಕಾರ್ಜುನ ಸಾಲಿ ರಾಯಚೂರು ಜಿಲ್ಲೆಯಲ್ಲಿ ಡಿವೈಎಸ್​ಪಿ ಆಗಿದ್ದಾರೆ. ಅಭ್ಯರ್ಥಿ, ಕಿಂಗ್​ಪಿನ್​​ಗೆ ಡೀಲ್​ ಮಾಡುವುದಕ್ಕೆ ಮಲ್ಲಿಕಾರ್ಜುನ ಸಹಾಯ ಮಾಡುತ್ತಿದ್ದ. ಮಲ್ಲಿಕಾರ್ಜುನ ಸಾಲಿ, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಿವಾಸಿ. 2008 ರಲ್ಲಿ ಪೊಲೀಸ ಕಾನಸ್ಟೇಬಲ್ ಆಗಿದ್ದ ಮಲ್ಲಿಕಾರ್ಜುನ ಸಾಲಿ, 2010 ರಲ್ಲಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕನಾಗಿ ಆಯ್ಕೆಯಾಗಿದ್ದ. ಕಾನಸ್ಟೇಬಲ್ ಹುದ್ದೆಗೆ ರಾಜೀನಾಮೆ ನೀಡಿ ಪ್ರೌಢ ಶಾಲೆ ಶಿಕ್ಷಕ ಕೆಲಸ ಪ್ರಾರಂಭಿಸಿದ್ದ ಸಾಲಿ, 2018 ರಲ್ಲಿ ಡಿವೈಎಸ್ಪಿ ಆಗಿ ಆಯ್ಕೆಯಾಗಿದ್ದ. ಎರಡು ವರ್ಷ ಕಾಲ ಆಳಂದ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದ. ಕೆಲ ದಿನಗಳ ಹಿಂದಷ್ಟೇ ಲಿಂಗಸುಗೂರು ಡಿವೈಎಸ್ಪಿ ಆಗಿ ನೇಮಕಗೊಂಡಿದ್ದ. ಕಿಂಗ್​ಪಿನ್ ರುದ್ರಗೌಡ ಪಾಟೀಲ್ ಸಂಪರ್ಕಕ್ಕೆ ಸಿಲುಕಿ ಸಂಕಷ್ಟಗೀಡಾಗಿದ್ದು, ಅಭ್ಯರ್ಥಿಗಳು ಮತ್ತು ಕಿಂಗ್​ಪಿನ್ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ.

ಪರೀಕ್ಷೆ ಮುಗಿದ ನಂತರ ತಗೆಸಿದ್ದ ಗ್ರೂಪ್ ಪೋಟೋ ಎಲ್ಲಡೆ ವೈರಲ್​ ಆಗಿದ್ದು, ಕಲಬುರಗಿ ನಗರದ ಜ್ಞಾನಜೋತಿ ಇಂಗ್ಲಿಷ್ ಶಾಲೆಯಲ್ಲಿ ಪರೀಕ್ಷೆ ನಡೆದಿತ್ತು. ಪೋಟೋದಲ್ಲಿ ಶಾಲೆ ಸಿಬ್ಬಂದಿ, ಪೊಲೀಸ ‌ಅಧಿಕಾರಿಗಳು, ಶಾಲೆ ಒಡತಿ ದಿವ್ಯಾ ಹಾಗರಗಿ ಫೋಟೋಗೆ ಪೋಸು ನೀಡಿದ್ದಾರೆ. ಪೋಟೋದಲ್ಲಿದ್ದ ಆನಂದ್ ಮೇತ್ರೆಯನ್ನು ಇಂದು ಸಿಐಡಿ ಬಂಧಿಸಿದ್ದಾರೆ. ದಿವ್ಯಾ ಹಾಗರಗಿ, ಹೆಡ್ ಮಾಸ್ಟರ್ ಕಾಶಿನಾಥ್, ಕೊಠಡಿ ಮೇಲ್ವಿಚಾರಕಿಯರಾದ ಅರ್ಚನಾ, ಸುಮಾ, ಸಿದ್ದಮ್ಮ ಕೂಡಾ ಬಂಧನ ಮಾಡಲಾಗಿದೆ. ಇನ್ನು ಪರೀಕ್ಷಾ ‌ಕೇಂದ್ರದ ಉಸ್ತುವಾರಿ ವಹಿಸಿಕೊಂಡಿದ್ದ ಬೆರಳಚ್ಚು ವಿಭಾಗದ ಡಿವೈಎಸ್ಪಿ ಆರ್​ಆರ್ ಹೊಸಮನಿ, ಮಹಿಳಾ ಠಾಣೆ ಸಿಪಿಐ ದಿಲೀಪ್ ಸಾಗರ್ ಅಮಾನತ್ತು ಮಾಡಲಾಗಿದೆ.

ಅಕ್ರಮ ತಡೆಯುವಲ್ಲಿ ವಿಫಲರಾದ ಅಧಿಕಾರಿಗಳಿಬ್ಬರ ಅಮಾನತು, ಇಂದು ವಿಚಾರಣೆ ಸಾಧ್ಯತೆ

ಪೊಲೀಸ್ ಇಲಾಖೆಯಲ್ಲಿನ ಕುಳಗಳೇ ಬಲೆಗೆ ಬೀಳ್ತಿವೆ. ಇನ್‌ ಸರ್ವೀಸ್‌ ಕೋಟಾದಲ್ಲಿ ಪರೀಕ್ಷೆ ಬರೆದು ಅಕ್ರಮ ಎಸಗಿದ್ದ ಶಾಸಕರೊಬ್ಬರ ಗನ್‌ಮ್ಯಾನ್‌ ಈಗಾಗಲೇ ಅರೆಸ್ಟ್‌ ಆಗಿದ್ದು, ಇವತ್ತು ವಿವಿಐಪಿ ಭದ್ರತಾ ವಿಭಾಗದ ಕಾನ್ಸ್‌ಟೇಬಲ್ ಯಶವಂತ್ ದೀಪ್ ಅರೆಸ್ಟ್‌ ಆಗಿದ್ದಾರೆ. ಬೆಂಗಳೂರಿನ ಹೈಗ್ರೌಂಡ್‌ ಠಾಣೆಯ ಮಮತೇಶ್ ಗೌಡ, ಯಶವಂತ್ ದೀಪ್, ಗಜೇಂದ್ರ ಸೇರಿದಂತೆ ಮೂವರು ಪೇದೆಗಳ ವಿರುದ್ಧ FIR ದಾಖಲಾಗಿದೆ. ಇನ್ನು 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ತಡೆಯುವಲ್ಲಿ ವಿಫಲರಾದ ಅಧಿಕಾರಿಗಳಿಬ್ಬರ ಅಮಾನತು ಮಾಡಲಾಗಿದೆ. ಕಲಬುರಗಿ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ದಿಲೀಪ್ ಸಾಗರ್ ಮತ್ತು ಬೆರಳಚ್ಚು ವಿಭಾಗದ ಡಿವೈಎಸ್ಪಿ R.R.ಹೊಸಮನಿ ಅಮಾನತು ಮಾಡಲಾಗಿದ್ದು ಇಂದು ವಿಚಾರಣೆ ನಡೆಯಲಿದೆ. ಇವರು ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಉಸ್ತುವಾರಿಯಾಗಿದ್ದರು. ಉತ್ತರ ಪತ್ರಿಕೆ ಅರ್ಧಗಂಟೆ ತಡವಾಗಿ ತಲುಪಿಸಿದ್ದರು ಜೊತೆಗೆ ಅಕ್ರಮ ತಡೆಯುವಲ್ಲಿ ವಿಫಲ ಹಿನ್ನೆಲೆ ವಿಚಾರಣೆ ಸಾಧ್ಯತೆ.

ಇನ್ನಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.