Kalaburagi: ಶಾಲಾ ಮಕ್ಕಳ ಶೂ ಖರೀದಿಯಲ್ಲಿ ಕಮಿಷನ್ ಆರೋಪ: ಮೇಲಾಧಿಕಾರಿಗಳು ಮೌನಕ್ಕೆ ಶರಣು

school shoe purchase: ಇನ್ನು ಇವರಿಗೆಲ್ಲಾ ಶೂ ಗಳನ್ನು ನೀಡಿ ವರ್ಷವೂ ಆಗಿಲ್ಲ. 2022 ರ ನವೆಂಬರ್ 14 ರಂದು ಮಕ್ಕಳ ದಿನದ ಸಂದರ್ಭದಲ್ಲಿ ನೀಡಿದ್ದಾರೆ. ಶೂಗಳನ್ನು ನೀಡಿ ಕೇವಲ ಎರಡೂವರೆ ತಿಂಗಳಾಗಿದೆ. ಆದ್ರೆ ಬಹುತೇಕ ವಿದ್ಯಾರ್ಥಿಗಳಿಗೆ ನೀಡಿದ ಶೂಗಳು ಹಾಳಾಗಿ ಹೋಗಿವೆ.

Kalaburagi: ಶಾಲಾ ಮಕ್ಕಳ ಶೂ ಖರೀದಿಯಲ್ಲಿ ಕಮಿಷನ್ ಆರೋಪ: ಮೇಲಾಧಿಕಾರಿಗಳು ಮೌನಕ್ಕೆ ಶರಣು
ಶಾಲಾ ಮಕ್ಕಳ ಶೂ ಖರೀದಿಯಲ್ಲಿ ಕಮಿಷನ್ ಅವ್ಯವಹಾರ ಆರೋಪ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 27, 2023 | 1:48 PM

ಅಲ್ಲಿ ಶಾಲಾ ಮಕ್ಕಳ ಶೂ ಖರೀದಿಯಲ್ಲಿ ಅವ್ಯವಹಾರವಾಗಿತ್ತು. ಮಕ್ಕಳಿಗೆ ಆದರ್ಶದ ಪಾಠ ಹೇಳಬೇಕಿದ್ದ ಶಾಲೆಯ ಹೆಡ್ ಮಾಸ್ಟರ್ ಗಳು ಮತ್ತು ಎಸ್ ಡಿ ಎಂ ಎಸ್ ಯವರು ಸೇರಿ, ಮಕ್ಕಳ ಶೂ ಖರೀದಿಯಲ್ಲಿ (school shoe purchase) ಕೂಡಾ ಕಮಿಷನ್ ಹೊಡೆದಿದ್ದಾರೆ. ಆದ್ರೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಇದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಹರಿದಿರುವ ಶೂಗಳು, ಮತ್ತೊಂದಡೆ ತಮಗೆ ನೀಡಿರುವ ಶೂಗಳು ಯಾವ ರೀತಿಯಾಗಿ ಕಳಪೆಯಾಗಿವೆ ಅನ್ನೋದನ್ನು ತೋರಿಸುತ್ತಿರುವ ವಿದ್ಯಾರ್ಥಿಗಳು, ಒಂದಡೆ ವಿದ್ಯಾರ್ಥಿಗಳು ಹರಿದ ಶೂಗಳನ್ನೇ ಧರಿಸಿ ಬಂದಿರುವುದು, ಇನ್ನು ಕೆಲವರು ಧರಿಸಲು ಕೂಡಾ ಯೋಗ್ಯವಿಲ್ಲದೇ ಇದ್ದಿದ್ದರಿಂದ ಶೂಗಳನ್ನೇ ಧರಿಸಿಲ್ಲಾ. ಇಂತಹ ದೃಶ್ಯ ಕಂಡುಬಂದಿದ್ದು ಕಲಬುರಗಿ ನಗರದ (kalaburagi) ವಿಜಯನಗರದಲ್ಲಿರುವ ಸರ್ಕಾರಿ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ.

ಇನ್ನು ಇವರಿಗೆಲ್ಲಾ ಶೂ ಗಳನ್ನು ನೀಡಿ ವರ್ಷವೂ ಆಗಿಲ್ಲ. 2022 ರ ನವೆಂಬರ್ 14 ರಂದು ಮಕ್ಕಳ ದಿನದ ಸಂದರ್ಭದಲ್ಲಿ ನೀಡಿದ್ದಾರೆ. ಶೂಗಳನ್ನು ನೀಡಿ ಕೇವಲ ಎರಡೂವರೆ ತಿಂಗಳಾಗಿದೆ. ಆದ್ರೆ ಬಹುತೇಕ ವಿದ್ಯಾರ್ಥಿಗಳಿಗೆ ನೀಡಿದ ಶೂಗಳು ಹಾಳಾಗಿ ಹೋಗಿವೆ. ಇದಕ್ಕೆ ಕಾರಣ, ವಿದ್ಯಾರ್ಥಿಗಳಿಗೆ ನೀಡಿದ ಶೂಗಳು ಕಳಪೆ ಗುಣಮಟ್ಟದಿಂದ ಕೂಡಿರುವುದು. ರಾಜ್ಯ ಸರ್ಕಾರ ಕಳೆದ ಜುಲೈ ತಿಂಗಳಲ್ಲಿ ರಾಜ್ಯದಲ್ಲಿರುವ 46.37 ಲಕ್ಷ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ನೀಡಲು 132 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಶಾಲಾ ಮುಖ್ಯೋಪಾಧ್ಯಾಯರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಸೇರಿಕೊಂಡು, ಬ್ರ್ಯಾಂಡಡ್ ಶೂ ಗಳನ್ನು ವಿತರಿಸುವಂತೆ ಹೇಳಲಾಗಿದೆ. ಅದರಂತೆ ಒಂದರಿಂದ ಐದನೇ ತರಗತಿ ಮಕ್ಕಳಿಗೆ 265 ರೂಪಾಯಿ, 6 ರಿಂದ 8 ನೇ ತರಗತಿ ಮಕ್ಕಳಿಗೆ 295 ರೂಪಾಯಿ, 9 ರಿಂದ 10 ನೇ ತರಗತಿ ಮಕ್ಕಳಿಗೆ 325 ರೂಪಾಯಿಗಳನ್ನು ಸರ್ಕಾರ ನೀಡಿದೆ. ಆದ್ರೆ ಕಲಬುರಗಿ ಜಿಲ್ಲೆಯ ಬಹುತೇಕ ಕಡೆ ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಶೂಗಳನ್ನು ನೀಡಲಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಸರಿಸುಮಾರು ಒಂದುವರೆ ಲಕ್ಷ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿವೆ. ಅವರಿಗೆಲ್ಲಾ ಶೂ ಗಳನ್ನು ಕಳೆದ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ನೀಡಲಾಗಿದೆ. ಆದ್ರೆ ಸರ್ಕಾರ ನೀಡಿದ ಬೆಲೆಯಂತೆ ಬಿಲ್ ಗಳನ್ನು ಪಡೆದಿರುವ ಹೆಡಮಾಸ್ಟರ್ ಮತ್ತು ಎಸ್ ಡಿ ಎಂ ಸಿ ಯವರು, ಅಂಗಡಿಯವರ ಜೊತೆ ಶಾಮೀಲಾಗಿ, ಕಮಿಷನ್ ಹೊಡೆದಿರೋದು ಬೆಳಕಿಗೆ ಬಂದಿದೆ ಎಂದು ಆರೋಪಿಸಲಾಗಿದೆ.

ಹೌದು ಕಲಬುರಗಿ ನಗರದ ಸಾಗರ್ ಎಂಟರಪ್ರೈಸಸ್ ಅನ್ನೋ ಅಂಗಡಿಯವರು, ಕಲಬುರಗಿ ನಗರದ ಸರ್ಕಾರಿ ಶಾಲೆಯೊಂದಕ್ಕೆ 6 ರಿಂದ 8 ನೇ ತರಗತಿ ಮಕ್ಕಳಿಗೆ ಪ್ರತಿ ಶೂ ಗೆ 263 ರೂಪಾಯಿ ಬಿಲ್ ಹಚ್ಚಿ, ಶೂ ಗಳನ್ನು ನೀಡಿದ್ದಾರೆ. ಆದ್ರೆ ಬೇರೊಬ್ಬರು ಹೋಗಿ ಕೇಳಿದಾಗ, ಅದೇ ಶೂಗಳನ್ನು ಇನ್ನೂರು ರೂಪಾಯಿಗೆ ನೀಡಲು ಕೋಟೆಷನ್ ನೀಡಿದ್ದಾರೆ. ಅಂದ್ರೆ ಇಲ್ಲಿ ಪ್ರತಿ ಶೂ ಗೆ 63 ರೂಪಾಯಿ ಕಮಿಷನ್ ಅನ್ನು ಹೆಡಮಾಸ್ಟರ್ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರಿಗೆ ಕಮಿಷನ್ ನೀಡಿರುವುದು ದಾಖಲಾತಿಯಿಂದಲೇ ಗೊತ್ತಾಗುತ್ತಿದೆ.

ಹೌದು ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ಜೊತೆ ಶೂ ಗೆ ಐವತ್ತರಿಂದ ನೂರು ರೂಪಾಯಿವರೆಗೆ ಕೆಲವರು ಕಮಿಷನ್ ಹೊಡೆದಿದ್ದಾರೆ. ಕೆಲವು ಶಾಲೆಯಲ್ಲಿ ಬ್ರ್ಯಾಂಡೆಡ್ ಶೂಗಳನ್ನು ನೀಡಿದ್ದರೆ, ಬಹುತೇಕ ಶಾಲೆಗಳಲ್ಲಿ ಬ್ರ್ಯಾಂಡೆಡ್ ಇಲ್ಲದೇ ಇರೋ ಕಂಪನಿಯ ಶೂಗಳನ್ನು ಖರೀದಿಸಿ ನೀಡಿದ್ದಾರೆ. ಇನ್ನು ಇಂತಹದೊಂದು ಅಕ್ರಮದ ಬಗ್ಗೆ ಕಳೆದೆ ಕೆಲ ದಿನಗಳ ಹಿಂದೆ ಟಿವಿ9 ಸಮಗ್ರ ವರದಿ ಪ್ರಸಾರ ಮಾಡಿತ್ತು. ಅಧಿಕಾರಿಗಳು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳೋ ಮಾತುಗಳನ್ನು ಹೇಳಿದ್ದರು. ಆದ್ರೆ ಇಲ್ಲಿವರಗೆ ಯಾವುದೇ ಕ್ರಮ ಮಾತ್ರವಾಗಿಲ್ಲ. ಈ ಬಗ್ಗೆ ವರದಿ ಪಡೆದು ಕ್ರಮ ಕೈಗೊಳ್ಳೋದಾಗಿ ಡಿಡಿಪಿಐ ಹೇಳ್ತಿದ್ದಾರೆ.

ಕಲಬುರಗಿ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಯಲ್ಲಿ ಕಳಪೆ ಶೂ ಖರೀದಿ ಮಾಡಿದ್ದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಕೂಡಾ ಮೌನಕ್ಕೆ ಶರಣಾಗಿದ್ದರು. ಅಕ್ರಮ ಬಯಲಿಗೆ ಬಂದ ಮೇಲೆ ಕೂಡಾ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರೋದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಇನ್ನಾದರೂ ಶೂ ಖರೀದಿಯಲ್ಲಿ ನಡೆದಿರೋ ಅಕ್ರಮಕ್ಕೆ ಬ್ರೇಕ್ ಹಾಕಿ, ಮಕ್ಕಳಿಗೆ ಗುಣಮಟ್ಟದ ಶೂ ನೀಡುವ ಕೆಲಸವಾಗಬೇಕಿದೆ.

ವರದಿ: ಸಂಜಯ್, ಟಿವಿ9, ಕಲಬುರಗಿ

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ