PWD ಜೆಇ ಪರೀಕ್ಷೆಯಲ್ಲೂ ಅಕ್ರಮ! ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಉತ್ತರ ಹೇಳಿಕೊಡುತ್ತಿದ್ದ ವಿಡಿಯೋ ವೈರಲ್

PWD ಜೆಇ ಪರೀಕ್ಷೆಯಲ್ಲೂ ಅಕ್ರಮ! ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಉತ್ತರ ಹೇಳಿಕೊಡುತ್ತಿದ್ದ ವಿಡಿಯೋ ವೈರಲ್
ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಉತ್ತರ ಹೇಳಿಕೊಡುತ್ತಿದ್ದಾನೆ.

2021 ರ ಡಿಸೆಂಬರ್ 13 ರಂದು ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜನೀಯರ್ ಪರೀಕ್ಷೆ ನಡೆದಿದೆ. ಈ ಪರೀಕ್ಷೆಗೆ ಆರೋಪಿಗಳು ಲಾಡ್ಜ್​ನಲ್ಲಿ ಕೂತೂ ಉತ್ತರ ಹೇಳುತ್ತಿದ್ದರು ಎಂದು ಹೇಳಲಾಗುತ್ತಿದೆ.  ವಿಡಿಯೋ ಬಗ್ಗೆ ತನಿಖೆ ನಡೆಸಿದರೆ ಸತ್ಯಾಸತ್ಯತೆ ಬಹಿರಂಗವಾಗುತ್ತದೆ.

TV9kannada Web Team

| Edited By: sandhya thejappa

Apr 24, 2022 | 1:11 PM


ಕಲಬುರಗಿ: ಈಗಾಗಲೇ ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಯಲಾಗಿದ್ದು, ಇದೀಗ ಮತ್ತೊಂದು ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅನುಮಾನ ಮೂಡಿದೆ. ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ (Electronic Device) ಮೂಲಕ ಉತ್ತರ ಹೇಳಿಕೊಡುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಆರೋಪಿಗಳು ಪರೀಕ್ಷೆಯಲ್ಲಿ ಉತ್ತರ ಹೇಳಿಕೊಡುತ್ತಿದ್ದರು. ರಹಸ್ಯ ಸ್ಥಳದಲ್ಲಿ ಕೂತು ಉತ್ತರ ಹೇಳುತ್ತಿದ್ದರು. ವಿಡಿಯೋದಲ್ಲಿರುವ ವ್ಯಕ್ತಿ ಯಾರು? ಅನ್ನೋದು ಇನ್ನು ತಿಳಿದುಬಂದಿಲ್ಲ.

ವೈರಲ್‌ ಆಗಿರುವ ವಿಡಿಯೋ PWD JE  ಪರೀಕ್ಷೆ:
2021 ರ ಡಿಸೆಂಬರ್ 13 ರಂದು ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜನೀಯರ್ ಪರೀಕ್ಷೆ ನಡೆದಿದೆ. ಈ ಪರೀಕ್ಷೆಗೆ ಆರೋಪಿಗಳು ಲಾಡ್ಜ್​ನಲ್ಲಿ ಕೂತೂ ಉತ್ತರ ಹೇಳುತ್ತಿದ್ದರು ಎಂದು ಹೇಳಲಾಗುತ್ತಿದೆ.  ವಿಡಿಯೋ ಬಗ್ಗೆ ತನಿಖೆ ನಡೆಸಿದರೆ ಸತ್ಯಾಸತ್ಯತೆ ಬಹಿರಂಗವಾಗುತ್ತದೆ.

ಇನ್ನು ಉತ್ತರ ಹೇಳುವ ವ್ಯಕ್ತಿಗೆ ಪ್ರಶ್ನೆ ಪತ್ರಿಕೆ ಸಿಕ್ಕಿದ್ದು ಹೇಗೆ? ಅವಧಿಗೂ ಮೊದಲೇ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತಾ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಕಿಂಗ್​ಪಿನ್ ಆಗಿರುವ ಮಂಜುನಾಥ ಮೇಳಕುಂದಿ ಮನೆಯಲ್ಲಿ ಪಿಡಬ್ಲೂಡಿ ಪರೀಕ್ಷೆ ಹಾಲ್ ಟಿಕೆಟ್​ಗಳು ಸಿಕ್ಕಿದ್ದವು. ಹತ್ತಕ್ಕೂ ಹೆಚ್ಚು ಹಾಲ್ ಟಿಕೆಟ್​ಗಳು ಪತ್ತೆಯಾಗಿದ್ದವು. ನೀರಾವರಿ ಇಲಾಖೆಯ‌ ಸಹಾಯಕ ಇಂಜನೀಯರ್ ಮಂಜುನಾಥ ಮೇಳಕುಂದಿ ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದಾನೆ. ಪಿಎಸ್ಐ ನೇಮಕ ಅಕ್ರಮದಲ್ಲಿ ಈತ ಕಿಂಗ್​ಪಿನ್.

ಪರೀಕ್ಷೆಗೂ PWD ಇಲಾಖೆಗೂ ಯಾವುದೇ ಸಂಬಂಧವಿಲ್ಲ ಅಂತ ಟಿವಿ9ಗೆ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ. ನಮ್ಮ ಇಲಾಖೆ ಪರೀಕ್ಷೆ ನಡೆಸಿಲ್ಲ, ಕೆಪಿಎಸ್‌ಸಿ ಪರೀಕ್ಷೆ ನಡೆಸಿದೆ. ಎಷ್ಟು ಹುದ್ದೆ ಬೇಕು ಅಂತಾ ನೋಟಿಫಿಕೇಷನ್ ಮಾಡಿ ನೀಡಿದ್ದೇವೆ. ಇಲಾಖೆ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ನನಗೆ ಗೊತ್ತಿಲ್ಲ. ಸಂಜೆಯೊಳಗೆ ಬೆಂಗಳೂರಿಗೆ ಹೋಗಿ ಮಾಹಿತಿ ಪಡೆಯುತ್ತೇನೆ. ರಾಜ್ಯದ ಮೂರ್ನಾಲ್ಕು ಕಡೆ PWD ಇಲಾಖೆ ಪರೀಕ್ಷೆ ನಡೆದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತೇನೆ ಎಂದರು.

ತನಿಖೆಗೆ ಪ್ರಿಯಾಂಕ್ ಖರ್ಗೆ ಒತ್ತಾಯ:
ಸಾಕಷ್ಟು ಸಾಕ್ಷ್ಯಾಧಾರ ಕಣ್ಮುಂದೆ ಇದ್ದರೂ ಕ್ರಮ ಕೈಗೊಂಡಿಲ್ಲ ಅಂತ ಟಿವಿ9ಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಪಿಎಸ್​ಐ ಪರೀಕ್ಷೆಯಲ್ಲಿ ಬ್ಲೂಟೂತ್ ಸಾಮಗ್ರಿ ಬಳಸಿದ್ದಾರೆ. ತನಿಖೆ ಬಳಿಕ ಯಾಱರಿಗೆ ಹಣ ಹೋಗಿದೆ ಎಂದು ಗೊತ್ತಾಗುತ್ತೆ. ಪ್ರಕರಣದಲ್ಲಿ ಸರ್ಕಾರ ಆರಂಭದಿಂದಲೂ ನಿರಾಸಕ್ತಿ ತೋರಿಸುತ್ತಿದೆ. ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ ಅಂತಾರೆ. ಅಸೂಯೆಯಿಂದ ದೂರು ನೀಡ್ತಿದ್ದಾರೆಂದು ಗೃಹಸಚಿವರು ಹೇಳ್ತಾರೆ. 57 ಸಾವಿರ ಯುವಕರ ಭವಿಷ್ಯ ಹಗುರವಾಗಿ ತೆಗೆದುಕೊಳ್ತಿದ್ದಾರೆ. ಯಾವುದೇ ಪಕ್ಷದವರು ಇರಲಿ ಸೂಕ್ತ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, ಸಿಎಂ ಜೊತೆ ಚರ್ಚಿಸಿ ನಾನೇ ಸಿಐಡಿ ತನಿಖೆಗೆ ವಹಿಸಿದ್ದೇನೆ. ಇಷ್ಟು ದಿನ ಯಾಕೆ ಇವರು ಆಡಿಯೋ ರಿಲೀಸ್ ಮಾಡಲಿಲ್ಲ. ತನಿಖಾಧಿಕಾರಿಗಳಿಗೆ ಆಡಿಯೋ ನೀಡಲಿ, ಸೂಕ್ತ ತನಿಖೆ ಮಾಡ್ತಾರೆ. ದಾಖಲೆ ಇಲ್ಲದೇ ಅಧಿಕಾರಿಗಳು ಯಾರನ್ನೂ ಅರೆಸ್ಟ್​ ಮಾಡಲ್ಲ. ಈ ಪ್ರಕರಣದಲ್ಲಿ ಪ್ರಾಮಾಣಿಕವಾಗಿ ವಿಚಾರಣೆ ಆಗಬೇಕು. ತನಿಖೆಗೆ ಸಹಕಾರ ನೀಡ್ತಿಲ್ಲ, ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ. ಕಷ್ಟಪಟ್ಟು ಓದಿದವರಿಗೆ ನ್ಯಾಯ ಸಿಗಬೇಕು. ಪ್ರಕರಣದಲ್ಲಿ ಪಕ್ಷಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತಾಡ್ತಿದ್ದಾರೆ. ಇದರಿಂದ ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗ್ತಿದ್ದಾರೆ. ಇಷ್ಟು ದಿನ ಪ್ರಿಯಾಂಕ್ ಖರ್ಗೆ ಯಾಕೆ ದೂರು ನೀಡಲಿಲ್ಲ. ತಮ್ಮ ಜೊತೆಯಲ್ಲಿದ್ದವರು ಬಂಧನವಾದ ಬಳಿಕ ಗಲಿಬಿಲಿ ಆಗಿದ್ದಾರೆ. ತನಿಖಾಧಿಕಾರಿಗಳಿಗೆ ಆಡಿಯೋ ಕೊಡಲಿ, ತನಿಖೆ ನಡೆಸುತ್ತೇವೆ. ದಿವ್ಯಾ ಹಾಗರಗಿ ಎಲ್ಲೇ ಇದ್ದರೂ ಬಂಧಿಸಲಾಗುತ್ತದೆ ಎಂದರು.

ಇದನ್ನೂ ಓದಿ

ದೇವರ ರೀತಿ ಬೆಳ್ಳಿಯ ರಥದಲ್ಲಿ ಡಾ. ರಾಜ್​ ಪ್ರತಿಮೆ ಮೆರವಣಿಗೆ ಮಾಡಲು ಸಜ್ಜಾದ ಅಭಿಮಾನಿಗಳು

ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರ ಭೇಟಿಗೆ ಕೆಲವೇ ಗಂಟೆಗಳ ಮೊದಲು ಸಮಾವೇಶ ಸ್ಥಳದಿಂದ 8 ಕಿಮೀ ದೂರದಲ್ಲಿ ಸ್ಫೋಟ

Follow us on

Related Stories

Most Read Stories

Click on your DTH Provider to Add TV9 Kannada