AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರ್ಯಾದಾ ಹತ್ಯೆ ಕೇಸ್: ಇಬ್ಬರು ಅಪರಾಧಿಗಳಿಗೆ ಗಲ್ಲು, ಜಿಲ್ಲಾ ಕೋರ್ಟ್ ತೀರ್ಪು ಎತ್ತಿಹಿಡಿದ ಹೈಕೋರ್ಟ್

ಕಲಬುರಗಿ ಹೈಕೋರ್ಟ್​ನ ದ್ವಿಸದಸ್ಯ ಪೀಠ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ತಂಗಿಯನ್ನ ಜೀವಂತ ಸುಟ್ಟುಹಾಕಿದ್ದ ಇಬ್ಬರು ಸಹೋದರರಿಗೆ ಮರಣದಂಡನೆ ಖಾಯಂ ಮಾಡಿದೆ. ಆ ಮೂಲಕ ವಿಜಯಪುರ ಜಿಲ್ಲಾ ಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.

ಮರ್ಯಾದಾ ಹತ್ಯೆ ಕೇಸ್: ಇಬ್ಬರು ಅಪರಾಧಿಗಳಿಗೆ ಗಲ್ಲು, ಜಿಲ್ಲಾ ಕೋರ್ಟ್ ತೀರ್ಪು ಎತ್ತಿಹಿಡಿದ ಹೈಕೋರ್ಟ್
ಹೈಕೋರ್ಟ್‌ ಕಲಬುರಗಿ ಪೀಠ
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 10, 2025 | 9:35 PM

Share

ಕಲಬುರಗಿ, ಅಕ್ಟೋಬರ್​​ 10: ಮರ್ಯಾದಾ ಹತ್ಯೆ (kill) ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಗಲ್ಲು ಖಾಯಂಗೊಳಿಸಿ (Death sentenced) ವಿಜಯಪುರ ಜಿಲ್ಲಾ ಕೋರ್ಟ್ ಆದೇಶವನ್ನು ಕಲಬುರಗಿ ಹೈಕೋರ್ಟ್​ನ ದ್ವಿಸದಸ್ಯ ಪೀಠ ಎತ್ತಿಹಿಡಿದಿದೆ. ಇಬ್ರಾಹಿಂ ಸಾಬ್(31) ಮತ್ತು ಅಕ್ಬರ್(28)ಗೆ ಗಲ್ಲು ಶಿಕ್ಷೆ. ಹಾಗೂ ಬಾನು ಬೇಗಂ ತಾಯಿ ಮತ್ತು ಕುಟುಂಬದ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2017ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕನಲ್ ಗ್ರಾಮದಲ್ಲಿ ದಲಿತ ಯುವಕ ಸಾಯಿಬಣ್ಣನನ್ನು ಪ್ರೀತಿಸಿ ಬಾನು ಬೇಗಂ ಮದುವೆಯಾಗಿದ್ದಳು. 9 ತಿಂಗಳ ಗರ್ಭಿಣಿ ಆಗಿದ್ದ ಬಾನು ಬೇಗಂ ಅನ್ನು ಸಹೋದರರು ಬೆಂಕಿ ಹಚ್ಚಿ ಕೊಂದಿದ್ದರು.

ಇದನ್ನೂ ಓದಿ: ಮಂಗಳೂರು: ಅಶ್ರಫ್ ಕಲಾಯಿ, ಅಬ್ದುಲ್ ರಹಿಮಾನ್ ಕೊಲೆ ಕೇಸ್ ಆರೋಪಿ ಭರತ್ ಕುಮ್ಡೇಲು ಶರಣಾಗತಿ

ಬಸವನಬಾಗೇವಾಡಿ ಪೊಲೀಸರು ತನಿಖೆ ನಡೆಸಿ ಚಾರ್ಜ್‌ಶಿಟ್ ಸಲ್ಲಿಸಿದರು. ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ ಕೋರ್ಟ್ ಈ ಇಬ್ಬರು ಸಹೋದರರಿಗೆ ಮರಣದಂಡನ ಶಿಕ್ಷೆ ಹಾಗೂ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಳಿಕ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಅಪರಾಧಿಗಳು ಮೇಲ್ಮನವಿ ಸಲ್ಲಿಸಿದ್ದರು.

ಇದೀಗ ಕಲಬುರಗಿ ಹೈಕೋರ್ಟ್​​ನ ದ್ವಿಸದಸ್ಯ ಪೀಠ ಈ ತೀರ್ಪುನ್ನು ಮಾನ್ಯ ಮಾಡಿದೆ. ಆ ಮೂಲಕ ಇಬ್ಬರು ಅಪರಾಧಿಗಳಿಗೆ ಗಲ್ಲು ಖಾಯಂಗೊಳಿಸಿ ಕೊಲೆಯಾದ ಬಾನು ಬೇಗಂನ ತಾಯಿ ಹಾಗೂ ಕುಟುಂಬದ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಜಾತ್ರೆಗೆ ಕರೆದುಕೊಂಡು ಹೋಗಿ ಅಂಗನವಾಡಿ ಶಿಕ್ಷಕಿಯ ಕೊಲೆ: ಕಿರಾತಕ ಅಂದರ್

ಜಾತ್ರೆಗೆಂದು ಕರೆದುಕೊಂಡು ಹೋಗಿ ಅಂಗನವಾಡಿ ಶಿಕ್ಷಕಿಯನ್ನು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಮೂಲದ ಅಶ್ವಿನಿ ಪಾಟೀಲ್(50) ಹತ್ಯೆಯಾದ ಅಂಗನವಾಡಿ ಶಿಕ್ಷಕಿ. ಅಕ್ಟೋಬರ್ 2ರಂದು ಕಕ್ಕೇರಿ ಬಿಷ್ಟಾದೇವಿ ಜಾತ್ರೆಗೆಂದು ಅಶ್ವಿನಿ ಹೋಗಿದ್ದರು. ವಾಪಸ್​ ಮನೆಗೆ ಬಂದಿರಲಿಲ್ಲ. ನಂದಗಡ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು.

ಇದನ್ನೂ ಓದಿ: ಬೆಂಗಳೂರಲ್ಲೊಂದು ಹೃದಯ ವಿದ್ರಾವಕ ಘಟನೆ: ಮಕ್ಕಳನ್ನ ಕೊಂದು ನೇಣಿಗೆ ಕೊರಳೊಡ್ಡಿದ ತಾಯಿ

ಕೇಸ್ ದಾಖಲಾದ ನಾಲ್ಕು ದಿನದಲ್ಲಿ ಅರಣ್ಯ ಪ್ರದೇಶದಲ್ಲಿ ಅಶ್ವಿನಿ ಶವವಾಗಿ ಪತ್ತೆ ಆಗಿದ್ದರು. ಅಂದು ಜಾತ್ರೆಗೆ ಕರೆದುಕೊಂಡು ಹೋಗಿದ್ದ ಶಂಕರ್ ಪಾಟೀಲ್​​​ ಪೊಲೀಸರು ವಿಚಾರಣೆ ಮಾಡಿದ್ದು, ತಾನೂ ಜಾತ್ರೆಗೆ ಕರೆದುಕೊಂಡು ಹೋಗಿದ್ದಾಗಿ ಒಪ್ಪಿಕೊಂಡಿದ್ದ. ಆದರೆ ಕೊಲೆ ಮಾಡಿಲ್ಲ ಎಂದು ಡ್ರಾಮಾ ಮಾಡುತ್ತಿದ್ದವನಿಗೆ ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದ. ಅಶ್ವಿನಿ ಪಾಟೀಲ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಶಂಕರ್​​, ಅವರಿಂದ ಐದು ಲಕ್ಷ ರೂ ಸಾಲ ಪಡೆದಿದ್ದ, ವಾಪಾಸ್ ಕೇಳಿದ್ದಕ್ಕೆ ಹತ್ಯೆ ಮಾಡಿದ್ದಾನೆ ಎನ್ನಲಾಗುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.