ಜ್ಯೋತಿಷ್ಯ ಹೇಳ್ತಿದ್ದವನ ಭವಿಷ್ಯವೇ ತಲೆಕೆಳಗಾಯ್ತು: ಕಮಲಾಕರ್ ಭಟ್‌-ಸುಚಿತ್ರಾಳ ಮತ್ತಷ್ಟು ಶೋಕಿ ಪುರಾಣ ಬಯಲು

ಸಿದ್ದಾಪುರದಲ್ಲಿ ವಸಂತ ನಾಯ್ಕ್ ಕೊಲೆ ಪ್ರಕರಣದಲ್ಲಿ ಪ್ರಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಈಗ ಜೈಲು ಸೇರಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಜೊತೆ ಇದ್ದ ಮಹಿಳೆ ಸುಚಿತ್ರಾಳೇ ಈ ಕೊಲೆ ಪ್ರಕರಣದ ಸೂತ್ರದಾರಿ. ಸದ್ಯ ಸುಚಿತ್ರಾ ಹಾಗೂ ಕಮಲಾಕರ್ ಭಟ್ಟ ಲವ್ವಿಡವ್ವಿಯ ಮತ್ತಷ್ಟು ಸ್ಫೋಟಕ ಮಾಹಿತಿಯನ್ನು ಸ್ವತಃ ಮಹಿಳೆಯ ಮಗಳೇ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಹಾಗೇ ಸುಚಿತ್ರಾಳ ಕಲರ್ ಫುಲ್ ಬದುಕು ಹೇಗಿತ್ತು ಎನ್ನುವುದು ಈ ಕೆಳಗಿನಂತಿದೆ ನೋಡಿ.

ಜ್ಯೋತಿಷ್ಯ ಹೇಳ್ತಿದ್ದವನ ಭವಿಷ್ಯವೇ ತಲೆಕೆಳಗಾಯ್ತು: ಕಮಲಾಕರ್ ಭಟ್‌-ಸುಚಿತ್ರಾಳ ಮತ್ತಷ್ಟು ಶೋಕಿ ಪುರಾಣ ಬಯಲು
Kamalakar Bhatt And Suchitra
Edited By:

Updated on: Feb 05, 2026 | 7:53 PM

ಶಿವಮೊಗ್ಗ/ಕಾರವಾರ, (ಫೆಬ್ರವರಿ 04): ನಿಮಗೆ ಸಾಡೇಸಾಥ್ ಆರಂಭವಾಗಿದೆ. ನಿಮಗೆ ಶನಿ ವಕ್ಕರಿಸಿದ್ದಾನೆ ಎಂದು ಜನರಿಗೆ ಜ್ಯೋತಿಷಿ ಹೇಳ್ತಿದ್ದ ಕಮಲಾಕರ್ ಭಟ್‌ನ ಭವಿಷ್ಯವೇ ತಲೆಕೆಳಗಾಗಿದೆ. ಕೊಲೆ ಕೇಸ್‌ನಲ್ಲಿ A3 ಕಮಲಾಕರ್ ಭಟ್ ಜೈಲುಪಾಲಾಗಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜೆಎಂಎಫ್‌ಸಿ ಕೋರ್ಟ್‌, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.  ಜನರ ಭವಿಷ್ಯವನ್ನೇ ಹೇಳುತ್ತಾ ಐಷಾರಾಮಿ ಜೀವನ ನಡೆಸಿದ್ದ ಜ್ಯೋತಿಷಿ ಆತ. ಆದ್ರೆ ರೀಲ್ಸ್‌ ಆಂಟಿ ಹಿಂದೆ ಬೀಳ್ತಿದ್ದಂತೆ ಆತನ ಭವಿಷ್ಯವೇ ಬುಡಮೇಲಾಗಿದೆ. ಕಾರ್‌ನಲ್ಲಿ ಓಡಾಡ್ತಿದ್ದ ಗುರೂಜಿ, ಇಂದು ತನ್ನ ರೀಲ್ಸ್‌ ಆಂಟಿ ಜತೆಯಲ್ಲೇ ಜೈಲುಪಾಲಾಗಿದ್ದಾನೆ.

ಸುಚಿತ್ರಾ, ಗುರೂಜಿಗೆ ನ್ಯಾಯಾಂಗ ಬಂಧನ

ಜನರ ಭವಿಷ್ಯ ಹೇಳುತ್ತಾ ಬದುಕು ಕಟ್ಟಿಕೊಂಡಿದ್ದ ಉತ್ತರಕನ್ನಡ ಜಿಲ್ಲೆಯ ಕಮಲಾಕರ್ ಭಟ್‌, ಸುಚಿತ್ರಾ ಅನ್ನೋ ಈ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಇದನ್ನ ಪ್ರಶ್ನೆ ಮಾಡ್ತಿದ್ದಂತೆ ಮೊನ್ನೆ ದೊಡ್ಡ ರದ್ಧಾಂತವೇ ಆಗಿತ್ತು. ಶಿವಮೊಗ್ಗದಿಂದ ನಾಲ್ಕೈದು ಹುಡುಗರನ್ನ ಕರೆದುಕೊಂಡು ಸಿದ್ದಾಪುರಕ್ಕೆ ಹೋಗಿದ್ದ ಕಮಲಾಕರ, ಸುಚಿತ್ರಾ ಪತಿ ಮಹೇಶ್‌ ಮೇಲೆ ಮೇಲೆ ಅಟ್ಯಾಕ್ ಮಾಡಿಸಿದ್ದ. ಈ ವೇಳೆ ತಡೆಯಲು ಬಂದ ಮಹೇಶ್‌ ಸಹೋದರ ವಸಂತನಿಗೆ ಚಾಕು ಹಾಕಿ ಕೊಲೆ ಮಾಡಿದ್ರು. ಸೋಮವಾರ ರಾತ್ರಿಯೇ ಆರೋಪಿಗಳನ್ನ ವಶಕ್ಕೆ ಪಡೆದಿದ್ದ ಪೊಲೀಸರು ಇಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಜೆಎಂಎಫ್‌ಸಿ ಕೋರ್ಟ್‌ ಮುಂದೆ ಹಾಜರು ಪಡಿಸಿದ್ರು. ವಿಚಾರಣೆ ನಡೆಸಿದ ಕೋರ್ಟ್‌ ಕಮಲಾಕರ್‌ ಭಟ್‌, ಸುಚಿತ್ರಾ ಸೇರಿದಂತೆ 7 ಆರೋಪಿಗಳಿಗೆ 8 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ: ಸ್ವಾಮೀಜಿ ಮಾತ್ರವಲ್ಲ ಹುಡುಗರ ಜೊತೆ ಪತ್ನಿ ಸಂಪರ್ಕ: ಹೆಂಡ್ತಿಯ ಮತ್ತಷ್ಟು ನವರಂಗಿ ಆಟ ಬಿಚ್ಚಿಟ್ಟ ಪತಿ

ಕನಸು ಕಾಣೋದು ಒಂದು ಬದುಕಿನಲ್ಲಿ ಆಗುವುದು ಮತ್ತೊಂದು ಎನ್ನುವ ಭಟ್ಟರ ಮಾತಿನಂತೇ ಇಲ್ಲಿ ಆಗಿದ್ದೇ ಬೇರೆ. ರೀಲ್ಸ್‌ನಲ್ಲೇ ನುಲಿಯುತ್ತಿದ್ರೆ, ಭವಿಷ್ಯ ಹೇಳ್ತಿದ್ದ ಜ್ಯೋತಿಷಿ ಕ್ಲೀನ್‌ಬೋಲ್ಡ್ ಆಗಿದ್ದ. ಹೀಗೆ ಎರಡು ಮಕ್ಕಳ ತಾಯಿ ಸುಚಿತ್ರಾ ಹಾಗೂ ಕಮಲಾಕರ್ ಭಟ್‌ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಇದೇ ಸಂಬಂಧ ಅಮಾಯಕನ ಬಲಿ ಪಡೆದಿದೆ. ಹೌದು.. ಬೆದರಿಕೆ ಹಾಕಲು ಹೋಗಿದ್ದ ಕಮಲಾಕರನ ಗ್ಯಾಂಗ್ ಹೆಣ ಬೀಳಿಸಿದ್ದು, ಇದೀಗ ಕೊಲೆ ಕೇಸ್‌ನಲ್ಲಿ ಈ ಕಮಲಾಕರ್ ಜೈಲು ಪಾಲಾಗಿದ್ದಾನೆ. ಕಮಲಾಕರ ಜೈಲು ಪಾಲಾಗುವುದಕ್ಕೆ ಕಾರಣವೇ ಈಕೆಯ ಸಾಂಗತ್ಯ.

ಕೆಲಸಕ್ಕೆಂದು ಸೇರಿ ಲಿವಿಂಗ್ ಟುಗೆದರ್

ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಇಬ್ಬರು ಬೆಂಗಳೂರಿನಲ್ಲಿ ಪರಿಚವಾಗಿದ್ದು, ಬಳಿಕ ಇವರ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದಳು. ನಂತರ ಸುಚಿತ್ರಾ ಹಾಗೂ ಕಮಲಾಕರ್ ಭಟ್ ನಡುವೆ ಲವ್ವಿಡವ್ವಿ ಶುರುವಾಗಿದ್ದು, ಜ್ಯೋತಿಷಿ ಸುಚಿತ್ರಾಳಿಗೆ ಶಿವಮೊಗ್ಗದಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಟ್ಟಿದ್ದ ಹೀಗಾಗಿ ಸುಚಿತ್ರಾ 9 ತಿಂಗಳಿನಿಂದ ಶಿವಮೊಗ್ಗದ ಗುತ್ತೆಪ್ಪ ಕಾಲನಿಯ ಬಡಾವಣೆಯಲ್ಲಿ ಮನೆಯಲ್ಲಿ ಮಗಳೊದಿಗೆ ಕಮಲಾಕರ್ ಭಟ್ ಜೊತೆ ವಾಸವಾಗಿದ್ದಳು.

ಸುಚಿತ್ರಾಳ ಐಷರಾಮಿ ಜೀವನ

ಸುಚಿತ್ರಾ ಪತಿ ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮಾಡ್ತಿದ್ರೆ, ಸುಚಿತ್ರಾ ಸಿದ್ದಾಪುರದಲ್ಲಿ ಡ್ಯಾನ್ಸ್‌ ಕ್ಲಾಸ್‌ ನಡೆಸುತ್ತಿದ್ದಳು. ರೀಲ್ಸ್‌, ಡ್ಯಾನ್ಸ್ ಅಂತಾ ಐಷಾರಾಮಿ ಲೈಫ್ ಹಿಂದೆ ಬಿದ್ದ ಸುಚಿತ್ರಾ ಗಂಡನಿಂದ ದೂರ ಆಗಿ, ಕಮಲಾಕರ್ ಭಟ್‌ ಹಿಂದೆ ಬಿದ್ದಿದ್ದಳು. ಶಿವಮೊಗ್ಗದಲ್ಲಿ ಈಕೆಗಾಗಿ ಬಾಡಿಗೆ ಮನೆ ಮಾಡಿಕೊಟ್ಟಿದ್ದ ಕಮಲಾಕರ, ಓಡಾಟಕ್ಕೆ ಎರಡು ಕಾರು ಕೊಟ್ಟಿದ್ದ.  ಹೀಗಾಗಿ ಬಿಂದಾಸ್‌ ಲೈಫ್ ಲೀಡ್ ಮಾಡುತ್ತಿದ್ದ ಸುಚಿತ್ರಾ, ಹರ್ಷ ಎನ್ನುವ ಕಾರು ಚಾಲಕನನ್ನು ಇಟ್ಟುಕೊಂಡಿದ್ದಳು. ಬಳಿಕ ತನ್ನ ಗುರೂಜಿ ನಡುವೆ ಅಡ್ಡಿಯಾಗಿದ್ದ ಸ್ವಂತ ಮಗಳನ್ನೇ ಮನೆಯಿಂದ ಹೊರ ಹೋಗು ಎಂದಿದ್ದಳಂತೆ. ಇಲ್ಲದಿದ್ರೆ ವಿಷ ಹಾಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಳಂತೆ.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ: ದೂರು ನೀಡಿದ್ದಕ್ಕೆ ಹಲ್ಲೆ; ಓರ್ವ ಸಾವು

ಜ್ಯೋತಿಷಿ-ತಾಯಿಯ ಮುಖವಾಡ ಕಳಚಿಟ್ಟ ಪುತ್ರಿ


ಇನ್ನು ಸುಚಿತ್ರಾಳ ಮಗಳು ಸುಮಾಶ್ರೀ ಟಿವಿ9 ಜತೆ ಮಾನಾಡಿದ್ದು, ತಾಯಿ ಹಾಗೂ ಗುರೂಜಿಯ ಮುಖವಾಡವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಕಳೆದ ಆರು ತಿಂಗಳಿಂದ ಶಿವಮೊಗ್ಗದಲ್ಲಿ ತಾಯಿ ಜೊತೆ ವಾಸವಾಗಿದ್ದು, ತಾಯಿ ಮತ್ತು ಕಮಲಾಕರ್ ಭಟ್ ಇಬ್ಬರು ಸೇರಿ ನನಗೆ ಜೀವ ಬೆದರಿಕೆ ಹಾಕುತ್ತಿದ್ದರು.ಮನೆ ಬಿಟ್ಟು ಹೋಗಲು ಇಬ್ಬರು ಬಲವಂತ ಮಾಡುತ್ತಿದ್ದರು. ಈ ಹಿನ್ನಲೆ ನಾನು ತಂದೆಗೆ ಮಾಹಿತಿ ನೀಡಿದೆ. ತಂದೆ ಊರಿಗೆ ಬರಲು ಸೂಚನೆ ನೀಡಿದರು. ಅದರಂತೆ ನಾನು ಸಿದ್ದಾಪುರಕ್ಕೆ ಹೋಗಿ ದೂರು ನೀಡಿರುವೆ. ನನ್ನ ತಂದೆ ಮತ್ತು ದೊಡ್ಡಪ್ಪ ಮೇಲೆ ಅಟ್ಯಾಕ್ ಮಾಡಿದ್ದು, ಘಟನೆಯಲ್ಲಿ ದೊಡ್ಡಪ್ಪ ಮೃತಪಟ್ಟಿದ್ದಾರೆ. ಗುರುಜಿ ಮತ್ತು ತಾಯಿಗೆ ಕಠಿಣ ಶಿಕ್ಷೆ ಆಗಬೇಕು ಎಂದಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:27 pm, Wed, 4 February 26

ಬಸವರಾಜ ಮುದನೂರ್, ಚಿತ್ರದುರ್ಗ

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us