Evening Digest: ಮುಂಬೈನ ಟೇಲರ್ ಉಮೇಶ್ನ್ನು ಕೊಂದಿದ್ದು ತಬ್ಲಿಘಿ ಜಮಾತ್, ಇ-ಬಸ್ಗೆ ಹೆಚ್ಚು ಸೌಲಭ್ಯ, ಇಂದಿನ ಪ್ರಮುಖ ಸುದ್ದಿಗಳು
ಸಿರಿಧಾನ್ಯ ಆಹಾರ ಉತ್ಸವದಲ್ಲಿ ಜತೆಯಾಗಿ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ, ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿಯ ಕೊಲೆ, ಕರ್ನಾಟಕದಲ್ಲಿ ಇ-ಬಸ್‌ಗಳಿಗೆ ಮೂಲಸೌಕರ್ಯ ಹೆಚ್ಚಿಸಿದ ಕೆಎಸ್‌ಆರ್‌ಟಿಸಿ ಸೇರಿದಂತೆ ಮಂಗಳವಾರದ ಎಲ್ಲಾ ಪ್ರಮುಖ 10 ಸುದ್ದಿಗಳು ಇಲ್ಲಿವೆ
ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಪೋಸ್ಟ್ ಹಾಕಿದ್ದ ಉಮೇಶ್ ಕೊಲ್ಹೆಯನ್ನು ಕೊಂದಿದ್ದು ತಬ್ಲಿಘಿ ಜಮಾತ್ ಸದಸ್ಯರು: ಎನ್ಐಎ
ಮುಂಬೈ: ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಮಹಾರಾಷ್ಟ್ರದ ಅಮರಾವತಿಯ ಫಾರ್ಮಸಿಸ್ಟ್ ಉಮೇಶ್ ಕೊಲ್ಹೆ ಅವರನ್ನು ಪ್ರವಾದಿ ಮೊಹಮ್ಮದ್‌ನ ಅವಮಾನದ ಪ್ರತೀಕಾರಕ್ಕಾಗಿ ತಬ್ಲಿಘಿ ಜಮಾತ್‌ನ ತೀವ್ರಗಾಮಿ ಇಸ್ಲಾಮಿಸ್ಟ್‌ಗಳು ಹತ್ಯೆ ಮಾಡಿದ್ದಾರೆ ಎಂದು ಎನ್‌ಐಎ ನ್ಯಾಯಾಲಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಹೇಳಿದೆ.
ಸಿರಿಧಾನ್ಯ ಆಹಾರ ಉತ್ಸವದಲ್ಲಿ ಜತೆಯಾಗಿ ಕುಳಿತು ಭೋಜನ ಸವಿದ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ
ಕೇಂದ್ರ ಕೃಷಿ ಸಚಿವಾಲಯ ಇಂದು ಸಂಸತ್ನಲ್ಲಿ ಎಲ್ಲ ಸಂಸದರಿಗೆ ಸಿರಿಧಾನ್ಯ ಭೋಜನವೇರ್ಪಡಿಸಿದ್ದು ಪ್ರಧಾನಿ ನರೇಂದ್ರ ಮೋದಿ , ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಮತ್ತು ಇತರ ಸಂಸದರು ಈ ಭೋಜನಕೂಟದಲ್ಲಿ ಭಾಗಿಯಾಗಿದ್ದಾರೆ.ನಾವು 2023 ನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಗುರುತಿಸಲು ತಯಾರಿ ನಡೆಸುತ್ತಿರುವಾಗ, ಸಂಸತ್ತಿನಲ್ಲಿ ಸಿರಿಧಾನ್ಯ ಭಕ್ಷ್ಯಗಳನ್ನು ಬಡಿಸಿದ ರುಚಿಕರವಾದ ಭೋಜನಕೂಟದಲ್ಲಿ ಭಾಗವಹಿಸಿದ್ದೇವೆ. ಪಕ್ಷಾತೀತವಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದು ಮೋದಿ ಊಟದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಈಶ್ವರಪ್ಪ, ರಮೇಶ್ ಜೊತೆ ದೂರವಾಣಿಯಲ್ಲಿ ಮಾತಾನಾಡಿದ್ದೇನೆ, ಅವರ ವಿಚಾರ ನನ್ನ ತಲೆಯಲ್ಲಿದೆ- ಸಿಎಂ ಬೊಮ್ಮಾಯಿ
ಬೆಳಗಾವಿ: ಶಾಸಕ ರಮೇಶ್ ಜಾರಕಿಹೊಳಿ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಕೆ.ಎಸ್.ಈಶ್ವರಪ್ಪ ಅವರೊಂದಿಗೆ ದೂರವಾಣಿ ಮೂಲಕ ಸುಮಾರು 13 ನಿಮಿಷಗಳ ಕಾಲ ಮಾತಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕದಲ್ಲಿ ಇ-ಬಸ್‌ಗಳಿಗೆ ಮೂಲಸೌಕರ್ಯ ಹೆಚ್ಚಿಸಿದ ಕೆಎಸ್‌ಆರ್‌ಟಿಸಿ
ಬೆಂಗಳೂರು: ರಾಜ್ಯದಲ್ಲಿ ಇ-ಬಸ್‌ಗಳಿಗೆ ಮೂಲಸೌಕರ್ಯಗಳನ್ನು ನಿರ್ಮಿಸುವ ಪ್ರಯತ್ನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೆಂಗಳೂರು, ಮೈಸೂರು, ವಿರಾಜಪೇಟೆ, ಮಡಿಕೇರಿ, ದಾವಣಗೆರೆ, ಶಿವಮೊಗ್ಗ ಮತ್ತು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಸೌಲಭ್ಯಗಳನ್ನು ಹೆಚ್ಚಿಸಲು ಒತ್ತು ನೀಡಿದೆ.
ತಂದೆ ಜತೆ ಸ್ಕೂಟಿಯಲ್ಲಿ ಕುಳಿತಿದ್ದ ಮಗು ಮಾಡಿದ ಕೆಲಸ ನೋಡಿ, ಯಾಮಾರಿದ್ರೆ ಜೀವಕ್ಕೆ ಕಂಟಕ
ಮಹಾರಾಷ್ಟ್ರ: ವಿವೇಕ್ ಗುಪ್ತಾ ಎಂಬ ಪತ್ರಕರ್ತರೊಬ್ಬರು ತಮ್ಮ ಟ್ವಿಟರ್ನಲ್ಲಿ ಭಯನಕ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಣತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬರು ತಮ್ಮ ಮಗುವಿನ ಜೊತೆಗೆ ಸ್ಕೂಟರ್ ಸ್ಟಾರ್ಟ್ ಮಾಡಿ ಕುಳಿತಿದ್ದರು, ಅವರ ಜೊತೆಗೆ ಕೆಳಗೆ ಕುಳಿತಿದ್ದ ಮಗು ಸ್ಕೂಟರ್ನ್ನು ರೇಸ್ ಮಾಡಿದೆ, ತಕ್ಷಣ ಸ್ಕೂಟರ್ ಮುಂದೆ ಹೋಗಿ ಕಂಬಕ್ಕೆ ಗುದ್ದಿದೆ. ಇದೀಗ ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೊವನ್ನು ಖ್ಯಾತ ಪತ್ರಕರ್ತವಿವೇಕ್ ಗುಪ್ತಾ ಹಂಚಿಕೊಂಡಿದ್ದಾರೆ. ಮಗುವಿಗೆ ಯಾವುದೇ ಅಪಾಯವಾಗಿಲ್ಲ, ಮಗುವಿನ ತಂದೆಗೆ ಮಾತ್ರ ಗಾಯವಾಗಿದೆ ಎಂದು ಹೇಳಲಾಗಿದೆ. (ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ)
ವೈದ್ಯರ ಕೈಬರಹ ಅರ್ಥೈಸಲು ಗೂಗಲ್ ನಿಂದ ಹೊಸ ಆ್ಯಪ್ ಬಿಡುಗಡೆ: ಯಾವುದು ಗೊತ್ತೇ?
ವೈದ್ಯರ ಕೈಬರಹವನ್ನು ಅರ್ಥಹಿಸಲು ಗೂಗಲ್ ಹೊಸದೊಂದು ಆ್ಯಪ್ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆದ ಗೂಗಲ್ ಇನ್ ಇಂಡಿಯಾ ಈವೆಂಟ್ನಲ್ಲಿ ಟೆಕ್ ದಿಗ್ಗಜ ವಿಶೇಷ ಎಐ ಘೋಷಿಸಿದ್ದು ಇದರ ಮೂಲಕ ಕೈಬರಹವನ್ನ ವೈದ್ಯರ ಪ್ರಿಸ್ಕ್ರಿಪ್ಷನ್ನಲ್ಲಿ ಡಿಕೋಡ್ ಮಾಡಬಹುದು.
ನೀವು ಆ್ಯಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ
ಕ್ರಿಸ್‌ಮಸ್ ಇನ್ನೇನು ಬಂದೇ ಬಿಡ್ತು, ಏನೇನೋ ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ, ಆ್ಯಸಿಡಿಟಿ ಸಮಸ್ಯೆ ಬಗ್ಗೆ ಎಚ್ಚರವಿರಲಿ. ಕ್ರಿಸ್‌ಮಸ್ ಪಾರ್ಟಿಯಿದ್ದರೆ ಹಲವು ರುಚಿಕರ ತಿನಿಸುಗಳಿರುತ್ತವೆ. ನಿಮ್ಮ ಆಯ್ಕೆಯ ಕೇಕ್, ಸಿಹಿತಿಂಡಿಗಳು ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳು ಇರುತ್ತವೆ. ಅಂತಹ ಸಮಯದಲ್ಲಿ ಯಾವುದು ತಿನ್ನಬೇಕು, ಯಾವುದು ಬಿಡಬೇಕೆಂಬುದು ತಿಳಿಯುವುದಿಲ್ಲ, ಅದೊಂಚೂರು, ಇಂದೊಂಚೂರು ಎಂದು ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ. (ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ)
ಅಬುಧಾಬಿ ವಿಮಾನ ನಿಲ್ದಾಣ ಪ್ರವೇಶಿಸಲು ಪಾಸ್ಪೋರ್ಟ್, ಟಿಕೆಟ್ ಬೇಕಿಲ್ಲ; ಮುಖವೇ ಬೋರ್ಡಿಂಗ್ ಪಾಸ್!
ಯುಎಇ ರಾಜಧಾನಿ ಅಬುಧಾಬಿ ವಿಮಾನ ನಿಲ್ದಾಣ ಪ್ರವೇಶಿಸಬೇಕಿದ್ದರೆ ಇನ್ನು ಟಿಕೆಟ್, ಪಾಸ್ಪೋರ್ಟ್ ಅಗತ್ಯವಿಲ್ಲ. ಪ್ರಯಾಣಿಕರ ಮುಖವೇ ಬೋರ್ಡಿಂಗ್ ಪಾಸ್ ಆಗಲಿದೆ! ಹೌದು, ಪ್ರಯಾಣಿಕರ ಮುಖವನ್ನೇ ಸ್ಕ್ಯಾನ್ ಮಾಡಿ ಒಳ ಬಿಡುವಂಥ ಬಯೋಮೆಟ್ರಿಕ್ ವ್ಯವಸ್ಥೆಯನ್ನು ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದೆ ಎಂದು ‘ಖಲೀಜ್ ಟೈಮ್ಸ್’ ಮಾಧ್ಯಮ ವರದಿ ಮಾಡಿದೆ. ಸದ್ಯ ಈ ಫೇಸ್ ರೆಕಗ್ನಿಷನ್ ಸೇವೆ ಆಯ್ದ ಬ್ಯಾಗೇಜ್ ಟಚ್ಪಾಯಿಂಟ್ಗಳಲ್ಲಿ, ವಲಸೆ ಇ-ಗೇಟ್ಗಳಲ್ಲಿ ಮತ್ತು ಬೋರ್ಡಿಂಗ್ ಗೇಟ್ಗಳಲ್ಲಿ ಲಭ್ಯವಿದೆ ಎಂದು ವರದಿ ತಿಳಿಸಿದೆ.
ಬಿಸಿಸಿಐಯಿಂದ ಬಂತು ಬಿಗ್ ನ್ಯೂಸ್: ದ್ವಿತೀಯ ಟೆಸ್ಟ್ನಿಂದ ಇಬ್ಬರು ಸ್ಟಾರ್ ಪ್ಲೇಯರ್ಸ್ ಔಟ್
ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೆ ಎರಡು ದಿನವಷ್ಟೇ ಬಾಕಿಯಿದೆ. ಹೀಗಿರುವಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಂಡದಲ್ಲಿ ಕೆಲ ಬದಲಾವಣೆ ಮಾಡಿ ಹೊಸ ಟೀಮ್ ಪ್ರಕಟಿಸಿದೆ. ಎರಡನೇ ಟೆಸ್ಟ್ ವೇಳೆ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದ್ದ ರೋಹಿತ್ ಶರ್ಮಾ ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಇವರು ದ್ವಿತೀಯ ಟೆಸ್ಟ್ನಿಂದ ಕೂಡ ಹೊರಬಿದ್ದಿದ್ದಾರೆ. ಇದರ ಜೊತೆಗೆ ನವ್ದೀಪ್ ಸೈನಿ ಕೂಡ ಇಂಜುರಿಯಿಂದಾಗಿ ತಂಡದಿಂದ ಔಟಾಗಿದ್ದರೆ. ರೋಹಿತ್ ಅಲಭ್ಯತೆಯಲ್ಲಿ ಕೆಎಲ್ ರಾಹುಲ್ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಚೇತೇಶ್ವರ್ ಪೂಜಾರ ಉಪ ನಾಯಕನಾಗಿದ್ದಾರೆ.
ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿಯ ಕೊಲೆ, ಶಿಕ್ಷಕಿ ಮೇಲೆ ಹಲ್ಲೆ ಪ್ರಕರಣ: ಆರೋಪಿ ಮುತ್ತಪ್ಪನ ಬಂಧನ
ಗದಗ: ಜಿಲ್ಲೆಯ ನರಗುಂದ ಪಟ್ಟಣದ ಹದಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನ ಹೆಲ್ಲೆಯಿಂದ ವಿದ್ಯಾರ್ಥಿ ಸಾವನ್ನಪ್ಪಿದ್ದು, ಶಿಕ್ಷಕಿ ಮಾರಣಾಂತಿಕವಾಗಿ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುತ್ತಪ್ಪನನ್ನು ನರಗುಂದ ಪೊಲೀಸರು ಹದಲಿ ರಸ್ತೆಯ ಪುಟ್ಟರಾಜ ಸರ್ಕಲ್ನಲ್ಲಿ ಇಂದು (ಡಿ.20) ಮಧ್ಯಾಹ್ನ ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:57 pm, Tue, 20 December 22