ದೇಸಿ ಗೋತಳಿ ಹೆಚ್ಚಿಸಲು ವೀರ ಮರಣ ಹೊಂದಿದ ಯೋಧರ ಪತ್ನಿಯರಿಗೆ, ದೇವದಾಸಿಯರಿಗೆ, ಶವಸಂಸ್ಕಾರ ಕಾರ್ಮಿಕರಿಗೆ ಹಾಗೂ ವಿಧವೆಯರಿಗೆ ಹೆಣ್ಣುಕರು ವಿತರಣೆ

ಮಾರುಕಟ್ಟೆ ಬೆಲೆಯ ಶೇಕಡಾ 25ರ ದರದಲ್ಲಿ ಹೆಣ್ಣು ಕರು ವಿತರಣೆಗೆ ಯೋಜನೆ ರೂಪಿಸಲಾಗಿದ್ದು, ಹಳ್ಳಿಕಾರ್, ಅಮೃತ್ ಮಹಲ್, ಮಲೆನಾಡ ಗಿಡ್ಡ, ಖಿಲಾರಿಕೃಷ್ಣ ವ್ಯಾಲಿ ತಳಿಗಳನ್ನು‌ ನೀಡಲು ಸರ್ಕಾರ ನಿರ್ಧರಿಸಿದೆ.

ದೇಸಿ ಗೋತಳಿ ಹೆಚ್ಚಿಸಲು ವೀರ ಮರಣ ಹೊಂದಿದ ಯೋಧರ ಪತ್ನಿಯರಿಗೆ, ದೇವದಾಸಿಯರಿಗೆ, ಶವಸಂಸ್ಕಾರ ಕಾರ್ಮಿಕರಿಗೆ ಹಾಗೂ ವಿಧವೆಯರಿಗೆ ಹೆಣ್ಣುಕರು ವಿತರಣೆ
ಸಾಂಕೇತಿಕ ಚಿತ್ರ
TV9kannada Web Team

| Edited By: guruganesh bhat

Jul 03, 2021 | 6:32 PM

ಬೆಂಗಳೂರು: ರಾಜ್ಯದಲ್ಲಿ ದೇಸಿ ಗೋತಳಿಗಳ ವಂಶಾವಳಿ ಹೆಚ್ಚಿಸಲು ಅಮೃತ ಸಿರಿ ಯೋಜನೆಯಡಿ ವೀರ ಮರಣ ಹೊಂದಿದ ಯೋಧರ ಪತ್ನಿಯರಿಗೆ, ದೇವದಾಸಿಯರಿಗೆ, ಶವಸಂಸ್ಕಾರ ಕಾರ್ಮಿಕರಿಗೆ ಹಾಗೂ ವಿಧವೆಯರಿಗೆ ಉತ್ಕೃಷ್ಟ ತಳಿಯ ಹೆಣ್ಣುಕರು ನೀಡಲು ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ.

ಮಾರುಕಟ್ಟೆ ಬೆಲೆಯ ಶೇಕಡಾ 25ರ ದರದಲ್ಲಿ ಹೆಣ್ಣು ಕರು ವಿತರಣೆಗೆ ಯೋಜನೆ ರೂಪಿಸಲಾಗಿದ್ದು, ಹಳ್ಳಿಕಾರ್, ಅಮೃತ್ ಮಹಲ್, ಮಲೆನಾಡ ಗಿಡ್ಡ, ಖಿಲಾರಿಕೃಷ್ಣ ವ್ಯಾಲಿ ತಳಿಗಳನ್ನು‌ ನೀಡಲು ಸರ್ಕಾರ ನಿರ್ಧರಿಸಿದೆ. ಪಶುಸಂಗೋಪನಾ ಇಲಾಖೆಯ ತಳಿ ಸಂವರ್ಧನಾ ಕೇಂದ್ರಗಳಲ್ಲಿ ಹುಟ್ಟುವ ಕರುಗಳಲ್ಲಿ ಶೇಕಡ 50ರಷ್ಟು ಹೆಣ್ಣು ಕರುಗಳು ಇದ್ದು, ಸಂವರ್ಧನೆಗೆ ಅಗತ್ಯ ಪ್ರಮಾಣದ ಕರುಗಳನ್ನಿಟ್ಟುಕೊಂಡು ಉಳಿದ ಹೆಣ್ಣು ಕರುಗಳನ್ನು ಮಾರುಕಟ್ಟೆ ದರದ ಶೇಕಡ 25ರ ದರದಲ್ಲಿ ಆದ್ಯತಾ ವರ್ಗಗಳಿಗೆ ವಿತರಿಸಲು ಸರ್ಕಾರ ನಿರ್ಧರಿಸಿದೆ.

Cattle Helpline ಬೆಂಗಳೂರಿನಲ್ಲಿ ದೇಶದ ಮೊದಲ ಪಶು ಸಹಾಯವಾಣಿ ಕೇಂದ್ರ ಲೋಕಾರ್ಪಣೆ ಕರ್ನಾಟಕ ರಾಜ್ಯದ ರೈತರು ಹಾಗೂ ಪಶುಸಾಕಣೆದಾರರು ಜಾನುವಾರುಗಳ ಆರೋಗ್ಯ ಮತ್ತು ಉತ್ಪಾದನೆ ಅಥವಾ ಈ ಸಂಬಂಧ ಯಾವುದೇ ಮಾಹಿತಿ, ಸಲಹೆಯನ್ನು ಪಡೆಯಲು ದೇಶದ ಮೊಟ್ಟಮೊದಲ ಸುಸಜ್ಜಿತ ಪ್ರಾಣಿ ಕಲ್ಯಾಣ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಳೆದ ಜೂನ್ 23 ರಂದು  ಮೊದಲ ಪ್ರಾಣಿ ಕಲ್ಯಾಣ ಸಹಾಯವಾಣಿಯ ವಾರ್ ರೂಮನ್ನು ಲೋಕಾರ್ಪಣೆ ಮಾಡಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಪಶುಪಾಲನಾ ಭವನದಲ್ಲಿ, ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಆಯೋಗದಲ್ಲಿ (ಸಿಎಹೆಚ್‌ವಿಎಸ್) ವಾರ್ ರೂಮ್ ಸ್ಥಾಪಿಸಲಾಗಿದೆ. ಸುಮಾರು ರೂ. 45.00 ಲಕ್ಷ ವೆಚ್ವದಲ್ಲಿ ವಾರ್ ರೂಮ್ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ್ದ ಸಿಎಂ ಬಿ.ಎಸ್ ಯಡಿಯೂರಪ್ಪ ಸಹಾಯವಾಣಿ ಆರಂಭಿಸಿದ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ್ದರು. ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಇಂತಹದೊಂದು ಸುಸಜ್ಜಿತ ಪ್ರಾಣಿ ಕಲ್ಯಾಣ ಸಹಾಯವಾಣಿ ಆರಂಭವಾಗಿದ್ದು ರೈತರು, ಸಾಕಾಣಿಕೆದಾರರು ತಮ್ಮ ಜಾನುವಾರುಗಳ ಆರೋಗ್ಯ ಹಾಗೂ ಉತ್ಪಾದಕತೆ ಹೆಚ್ಚಿಸಲು ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿಸಿದ್ದರು.

ಸಹಾಯವಾಣಿಯ ವಿಶೇಷತೆಗಳು -ರೈತರು, ಪಶುಪಾಲಕರು (8277100200) ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪಶು ಆರೈಕೆ ಸಂಬಂಧ ಮಾಹಿತಿ ಪಡೆಯಬಹುದು. -ಮುಖ್ಯವಾಗಿ ಕುರಿ, ಮೇಕೆ, ಮೊಲ, ಹಂದಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ ಬಗ್ಗೆ ಮಾಹಿತಿ ಪಡೆಯಬಹುದು. -ತುರ್ತು ಸಮಯದಲ್ಲಿ ಅಪಘಾತ ಹಾಗೂ ಇತರೆ ಕಾಯಿಲೆಗಳಿಂದ ನರಳುತ್ತಿರುವ ರಾಸುಗಳಿಗೆ ತಕ್ಷಣಕ್ಕೆ ಪಶು ವೈದ್ಯರು ದೊರೆಯದಿದ್ದಾಗ ಚಿಕಿತ್ಸೆ ಬಗ್ಗೆ ಸಲಹೆ. -ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ ಜಾರಿಗೊಳಿಸುವ ಸಂಬಂಧ ಸಲಹೆ ಹಾಗೂ ಮಾಹಿತಿಯನ್ನು ಈ ಸಹಾಯವಾಣಿಯಿಂದ ಪಡೆಯಬಹುದು.

ಇದನ್ನೂ ಓದಿ:  

ನಮ್ಮನೆಯ ಸಾಕುಪ್ರಾಣಿಗಳಿಗೂ ಕೊರೊನಾ ಬಾಧೆ: ಅಂಜಿಕೆ ಅನಗತ್ಯ, ಎಚ್ಚರಿಕೆ ಅತ್ಯಗತ್ಯ

ಸಾಕುಪ್ರಾಣಿಗಳು ಮತ್ತು ಕೊರೊನಾ ಸೋಂಕು: ಸತ್ಯ ಮತ್ತು ಮಿಥ್ಯಗಳು

(Karnataka Animal Husbandry Department decides Distribution of female cattle to to war heroes wives devadasis funeral workers and widows)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada