AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Air Quality: ಮಂಗಳೂರಿನಲ್ಲಿ ಗಾಳಿಯ ಮಟ್ಟ ಬೆಂಗಳೂರಿಗಿಂತ ಕಳಪೆಯಾಗಿದೆ, ಎಚ್ಚರಿಕೆ ವಹಿಸುವಂತೆ ತಜ್ಞರ ಸೂಚನೆ

ಜನವರಿ 29, 2026 ರಂದು ಕರ್ನಾಟಕದ ವಾಯು ಗುಣಮಟ್ಟ 'ಸಾಧಾರಣ'ದಿಂದ 'ಕಳಪೆ' ಹಂತದಲ್ಲಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ PM2.5 ಹೆಚ್ಚಳದಿಂದ 'ಅನಾರೋಗ್ಯಕರ' ಮಟ್ಟ ತಲುಪಿದೆ. ಬೆಳಗಾವಿ, ಕಲಬುರಗಿಯಲ್ಲಿ ಉತ್ತಮವಾಗಿದೆ. ಮಕ್ಕಳು, ವೃದ್ಧರು ಹೊರಗಿನ ಚಟುವಟಿಕೆಗಳನ್ನು ಮಿತಿಗೊಳಿಸಿ, ಮಾಸ್ಕ್ ಬಳಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ದಟ್ಟ ಮಂಜು ಮತ್ತು ಕಾಮಗಾರಿಗಳು ಮಾಲಿನ್ಯಕ್ಕೆ ಕಾರಣ.

Bengaluru Air Quality: ಮಂಗಳೂರಿನಲ್ಲಿ ಗಾಳಿಯ ಮಟ್ಟ ಬೆಂಗಳೂರಿಗಿಂತ ಕಳಪೆಯಾಗಿದೆ, ಎಚ್ಚರಿಕೆ ವಹಿಸುವಂತೆ ತಜ್ಞರ ಸೂಚನೆ
ಸಾಂದರ್ಭಿಕ ಚಿತ್ರ Image Credit source: Google
ಅಕ್ಷಯ್​ ಪಲ್ಲಮಜಲು​​
|

Updated on: Jan 29, 2026 | 7:14 AM

Share

ಕರ್ನಾಟಕದಾದ್ಯಂತ ಇಂದು (ಜನವರಿ 29, 2026) ವಾಯು ಗುಣಮಟ್ಟವು (AQI) ವಿವಿಧ ನಗರಗಳಲ್ಲಿ ವಿಭಿನ್ನವಾಗಿ ದಾಖಲಾಗಿದೆ. ಒಟ್ಟಾರೆಯಾಗಿ ರಾಜ್ಯದ ವಾಯು ಗುಣಮಟ್ಟವು ಸಾಧಾರಣ (Moderate) ದಿಂದ ಕಳಪೆ (Poor) ಹಂತದವರೆಗೆ ಇದೆ. ನಗರದಲ್ಲಿ ವಾಯು ಮಾಲಿನ್ಯವು ‘ಅನಾರೋಗ್ಯಕರ’ ಹಂತದಲ್ಲಿದೆ. ವಿಶೇಷವಾಗಿ PM2.5 ಮತ್ತು PM10 ಕಣಗಳ ಪ್ರಮಾಣ ಹೆಚ್ಚಾಗಿರುವುದರಿಂದ ಉಸಿರಾಟದ ತೊಂದರೆ ಇರುವವರು, ಮಕ್ಕಳು ಮತ್ತು ವೃದ್ಧರು ಜಾಗರೂಕರಾಗಿರಿ ಎಂದು ತಜ್ಞರು ಹೇಳಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ಇಂದು ಮುಂಜಾನೆ ದಟ್ಟ ಮಂಜು ಇದ್ದ ಕಾರಣ, ಮಾಲಿನ್ಯಕಾರಕ ಕಣಗಳು ಭೂಮಿಯ ಸಮೀಪದಲ್ಲೇ ಅಡಕವಾಗಿದ್ದು AQI ಮಟ್ಟ ಏರಿಕೆಯಾಗಲು ಕಾರಣವಾಗಿದೆ.ಬೆಳಗಾವಿ ಮತ್ತು ಕಲಬುರಗಿ ಭಾಗಗಳಲ್ಲಿ ವಾಯು ಗುಣಮಟ್ಟವು ರಾಜ್ಯದ ಇತರ ಭಾಗಗಳಿಗಿಂತ ಉತ್ತಮವಾಗಿದೆ.

ಬೆಂಗಳೂರು ಮತ್ತು ಮಂಗಳೂರಿನಂತಹ ನಗರಗಳಲ್ಲಿ AQI ಮಟ್ಟ ಹೆಚ್ಚಿರುವುದರಿಂದ, ಹೊರಗಡೆ ವ್ಯಾಯಾಮ ಮಾಡುವವರು ಮುಂಜಾನೆಗಿಂತ ಸಂಜೆ ವೇಳೆ ಮಾಡುವುದು ಉತ್ತಮ. ಸಾಧ್ಯವಾದರೆ ಮಾಸ್ಕ್ ಬಳಸಿ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಇಂದು ಮಾಲಿನ್ಯದ ಮಟ್ಟ ಗಣನೀಯವಾಗಿ ಹೆಚ್ಚಾಗಿದೆ. ಪೀಣ್ಯ ಮತ್ತು ಕೆಂಪೇಗೌಡ ರಸ್ತೆ ಬಳಿ AQI 200 ದಾಟಿದ್ದು, ಮಾಲಿನ್ಯ ಹೆಚ್ಚಿದೆ. ಜಯನಗರ ಮತ್ತು ಬನಶಂಕರಿಯಲ್ಲಿ ಮಾಲಿನ್ಯ ಮಟ್ಟ ಸಾಧಾರಣದಿಂದ ಕಳಪೆ (120-150) ಹಂತದಲ್ಲಿದೆ. ವೈಟ್‌ಫೀಲ್ಡ್ ನಲ್ಲಿ ಕಟ್ಟಡ ಕಾಮಗಾರಿಗಳಿಂದಾಗಿ ಧೂಳಿನ ಪ್ರಮಾಣ ಹೆಚ್ಚಾಗಿದೆ. ಮಧ್ಯಾಹ್ನ ಬಿಸಿಲು ಹೆಚ್ಚಾದಂತೆ ಮತ್ತು ಗಾಳಿಯ ವೇಗ ಸುಧಾರಿಸಿದಂತೆ AQI ಮಟ್ಟ 120-140ಕ್ಕೆ ಇಳಿಯುವ ಸಾಧ್ಯತೆಯಿದೆ. ಆದರೂ ಸಂಜೆ ಮತ್ತೆ ಏರಿಕೆಯಾಗಬಹುದು.

ಕರಾವಳಿ ಭಾಗದಲ್ಲಿ ತೇವಾಂಶ ಹೆಚ್ಚಿರುವುದರಿಂದ ಮಾಲಿನ್ಯಕಾರಕ ಕಣಗಳು ಕೆಳಮಟ್ಟದಲ್ಲೇ ಉಳಿದಿವೆ. ಇದು ಉಸಿರಾಟದ ಸಮಸ್ಯೆ ಇರುವವರಿಗೆ ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಗಾಳಿಯ ಗುಣಮಟ್ಟ ಬೆಂಗಳೂರಿಗೆ ಹೋಲಿಸಿದರೆ ಉತ್ತಮವಾಗಿದೆ. ಆದರೆ ಮಧ್ಯಾಹ್ನ ಬಿಸಿಲು ಹೆಚ್ಚಾದಂತೆ ಧೂಳಿನ ಪ್ರಮಾಣ ಸ್ವಲ್ಪ ಏರಬಹುದು. ಬೆಂಗಳೂರು ನಿವಾಸಿಗಳು AQI 200 ದಾಟಿರುವುದರಿಂದ, ಹೃದಯ ಅಥವಾ ಶ್ವಾಸಕೋಶದ ಸಮಸ್ಯೆ ಇರುವವರು ಮತ್ತು ಮಕ್ಕಳು ಇಂದು ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡುವುದು ಉತ್ತಮ. ಮಧ್ಯಾಹ್ನ 1 ಗಂಟೆಯಿಂದ 4 ಗಂಟೆಯವರೆಗೆ ಗಾಳಿಯ ಗುಣಮಟ್ಟ ಸ್ವಲ್ಪ ಸುಧಾರಿಸುತ್ತದೆ, ಆದ್ದರಿಂದ ಈ ಸಮಯದಲ್ಲಿ ಹೊರಗೆ ಹೋಗುವುದು ಸುರಕ್ಷಿತ.ರಸ್ತೆ ಬದಿಯಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸುವುದು ಧೂಳಿನಿಂದ ರಕ್ಷಣೆ ನೀಡುತ್ತದೆ.

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ (ಮಂಗಳೂರು, ಉಡುಪಿ ಮತ್ತು ಕಾರವಾರ) ಇಂದು (ಜನವರಿ 29, 2026) ವಾಯು ಗುಣಮಟ್ಟವು (AQI) ‘ಸಾಧಾರಣ’ದಿಂದ ‘ಕಳಪೆ’ ಹಂತದಲ್ಲಿದೆ. ವಿಶೇಷವಾಗಿ ಮಂಗಳೂರಿನಲ್ಲಿ ಮಾಲಿನ್ಯದ ಮಟ್ಟ ಬೆಂಗಳೂರನ್ನು ಹಿಂದಿಕ್ಕಿರುವುದು ಆತಂಕಕಾರಿಯಾಗಿದೆ. ಗಾಳಿಯಲ್ಲಿನ PM2.5 ಕಣಗಳ ಪ್ರಮಾಣ 79 µg/m³ ವರೆಗೆ ಏರಿಕೆಯಾಗಿದೆ. ರಸ್ತೆ ಕಾಮಗಾರಿಗಳು, ವಾಹನಗಳ ಹೊಗೆ ಮತ್ತು ಚಳಿಗಾಲದ ಮಂಜು ಈ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ವರದಿಗಳ ಪ್ರಕಾರ ಉಡುಪಿಯಲ್ಲಿ AQI 90 ರಷ್ಟಿದ್ದು ಸಾಧಾರಣವಾಗಿತ್ತು, ಆದರೆ ದಿನ ಕಳೆದಂತೆ ಕೆಲವು ಕಡೆಗಳಲ್ಲಿ 167 ರವರೆಗೆ ತಲುಪಿದೆ. ಸೂಕ್ಷ್ಮ ವ್ಯಕ್ತಿಗಳು ಸ್ವಲ್ಪ ಉಸಿರಾಟದ ಕಿರಿಕಿರಿ ಅನುಭವಿಸಬಹುದು. ಮಂಗಳೂರು ಮತ್ತು ಉಡುಪಿಗೆ ಹೋಲಿಸಿದರೆ ಕಾರವಾರದ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಇಲ್ಲಿ ಹವಾಮಾನವು ಆಹ್ಲಾದಕರವಾಗಿದ್ದು, ವಾಯು ಮಾಲಿನ್ಯದ ಪ್ರಭಾವ ಕಡಿಮೆ ಇದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಇಂದು ಬೆಳಗಾವಿ, ವಿಜಯಪುರದಲ್ಲಿ ಬಿಸಿಲಿನ ತಾಪ ಹೆಚ್ಚಿರಲಿದೆ

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ