ವಾಹನವಿಲ್ಲ, ಸಾಲ ಮಾಡಿಲ್ಲ, ಆದಾಯವೂ ಕಡಿಮೆ ಎಂದ ವಿಶ್ವನಾಥ್
ಮೈಸೂರು: ಹುಣಸೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಒಂದೇ ಒಂದು ರೂಪಾಯಿ ಸಾಲ ಇಲ್ಲ ಎಂದು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ. ಹೆಚ್.ವಿಶ್ವನಾಥ್ ಆಸ್ತಿ ಲೆಕ್ಕ: ಕಳೆದ ವರ್ಷಕ್ಕಿಂತ ಈ ವರ್ಷ 30,450ರೂ. ಆದಾಯ ಕಡಿಮೆಯಾಗಿದೆ ಎಂದು ನಮೂದಿಸಿದ್ದಾರೆ. ಅಲ್ಲದೆ, ಹೆಚ್.ವಿಶ್ವನಾಥ್ ಹಾಗೂ ಪತ್ನಿ ಶಾಂತಮ್ಮ ಹೆಸರಿನಲ್ಲಿ ಒಂದೇ ಒಂದು ವಾಹನ ಇಲ್ಲ. ಪತಿ ಪತ್ನಿ ಹೆಸರಿನಲ್ಲಿ ಯಾವುದೇ ಸಾಲ ಮಾಡಿಲ್ಲ ಎಂದು ಅಫಿಡೆವಿಟ್ ಸಲ್ಲಿಸಿದ್ದಾರೆ. ಹೆಚ್.ವಿಶ್ವನಾಥ್ ಅವರು ಒಟ್ಟು 7,05,854ರೂ. […]
ಮೈಸೂರು: ಹುಣಸೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಒಂದೇ ಒಂದು ರೂಪಾಯಿ ಸಾಲ ಇಲ್ಲ ಎಂದು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ.
ಹೆಚ್.ವಿಶ್ವನಾಥ್ ಆಸ್ತಿ ಲೆಕ್ಕ: ಕಳೆದ ವರ್ಷಕ್ಕಿಂತ ಈ ವರ್ಷ 30,450ರೂ. ಆದಾಯ ಕಡಿಮೆಯಾಗಿದೆ ಎಂದು ನಮೂದಿಸಿದ್ದಾರೆ. ಅಲ್ಲದೆ, ಹೆಚ್.ವಿಶ್ವನಾಥ್ ಹಾಗೂ ಪತ್ನಿ ಶಾಂತಮ್ಮ ಹೆಸರಿನಲ್ಲಿ ಒಂದೇ ಒಂದು ವಾಹನ ಇಲ್ಲ. ಪತಿ ಪತ್ನಿ ಹೆಸರಿನಲ್ಲಿ ಯಾವುದೇ ಸಾಲ ಮಾಡಿಲ್ಲ ಎಂದು ಅಫಿಡೆವಿಟ್ ಸಲ್ಲಿಸಿದ್ದಾರೆ.
ಹೆಚ್.ವಿಶ್ವನಾಥ್ ಅವರು ಒಟ್ಟು 7,05,854ರೂ. ಮೌಲ್ಯದ ಚರಾಸ್ತಿ ಹೊಂದಿದ್ದು, ಪತ್ನಿ ಶಾಂತಮ್ಮ 17,67,512ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ವಿಶ್ವನಾಥ್ಗೆ 2 ಕೋಟಿ 80 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ, ಪತ್ನಿ ಶಾಂತಮ್ಮ ಹೆಸರಿನಲ್ಲಿ 42 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ.
ಮಕ್ಕಳು ಸ್ವಾವಲಂಬಿತರು: ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ಕಳೆದ ಚುನಾವಣೆಗೂ ಈ ಚುನಾವಣೆಗು ಚರಾಸ್ತಿ ಮೌಲ್ಯ ಕಡಿಮೆ ಇದೆ. ಅಲ್ಲದೆ ಮಕ್ಕಳು ಸ್ವಾವಲಂಬಿತರು ಎಂದು ಹೆಚ್.ವಿಶ್ವನಾಥ್ ಘೋಷಿಸಿಕೊಂಡಿದ್ದಾರೆ.
ಹೆಚ್.ವಿಶ್ವನಾಥ್ ಸಾಲದ ವಿಚಾರ ಮಾಜಿ ಸಚಿವ ಸಾ.ರಾ.ಮಹೇಶ್‌ರಿಂದ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗಿತ್ತು. ಸಾಲವಿತ್ತು ಎಂದು ವಿಶ್ವನಾಥ್ ಅವರೇ ಹೇಳಿದ್ದರು ಅಂತಾ ಸಾ.ರಾ.ಮಹೇಶ್ ಹೇಳಿದ್ದರು. ಆದರೆ ಅಫಿಡೆವಿಟ್‌ನಲ್ಲಿ ಯಾವುದೇ ಸಾಲ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ.
Published On - 8:17 pm, Mon, 18 November 19