DCM ಸವದಿ ಬಿಜೆಪಿಗೆ ಮಾಸ್ಟರ್ ಸ್ಟ್ರೋಕು, ಹೆಚ್ಡಿಕೆ ಕುಮ್ಮಕ್ಕು
ಬೆಳಗಾವಿ: ಡಿ.5ರಂದು ಅಥಣಿ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮಾಸ್ಟರ್ ಸ್ಟ್ರೋಕ್ ಕೊಟ್ರಾ ಡಿಸಿಎಂ ಲಕ್ಷ್ಮಣ ಸವದಿ? ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕುಮ್ಮಕ್ಕು ಸಹ ಇದೆ ಎಂದು ಹೇಳಲಾಗುತ್ತಿದೆ. ಅಥಣಿ ಕ್ಷೇತ್ರದಿಂದ ಸ್ಪರ್ಧಿಸಲು ಲಕ್ಷ್ಮಣ್ ಸವದಿ ತುಂಬಾ ನಿರೀಕ್ಷೆಯಿಟ್ಟುಕೊಂಡಿದ್ದರು. ಆದ್ರೆ ಬಿಜೆಪಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಟಿಕೆಟ್ ಘೋಷಿಸಿತು. ಇದರಿಂದ ಲಕ್ಷ್ಮಣ ಸವದಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ ಇದೀಗ ಡಿಸಿಎಂ ಸವದಿ ಆಪ್ತ ಗುರು […]
ಬೆಳಗಾವಿ: ಡಿ.5ರಂದು ಅಥಣಿ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮಾಸ್ಟರ್ ಸ್ಟ್ರೋಕ್ ಕೊಟ್ರಾ ಡಿಸಿಎಂ ಲಕ್ಷ್ಮಣ ಸವದಿ? ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕುಮ್ಮಕ್ಕು ಸಹ ಇದೆ ಎಂದು ಹೇಳಲಾಗುತ್ತಿದೆ.
ಅಥಣಿ ಕ್ಷೇತ್ರದಿಂದ ಸ್ಪರ್ಧಿಸಲು ಲಕ್ಷ್ಮಣ್ ಸವದಿ ತುಂಬಾ ನಿರೀಕ್ಷೆಯಿಟ್ಟುಕೊಂಡಿದ್ದರು. ಆದ್ರೆ ಬಿಜೆಪಿ ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಟಿಕೆಟ್ ಘೋಷಿಸಿತು. ಇದರಿಂದ ಲಕ್ಷ್ಮಣ ಸವದಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ ಇದೀಗ ಡಿಸಿಎಂ ಸವದಿ ಆಪ್ತ ಗುರು ದಾಶ್ಯಾಳಗೆ ಅಥಣಿ ಕ್ಷೇತ್ರದ ಜೆಡಿಎಸ್ ಟಿಕೆಟ್ ಕನ್ಫರ್ಮ್ ಆಗಿದೆ. ಹೆಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿ ಜೆಡಿಎಸ್ನ ಬಿ ಫಾರಂ ಪಡೆಯಲು ಗೋಕಾಕ್ಗೆ ಗುರು ದಾಶ್ಯಾಳ ತೆರಳಿದ್ದಾರೆ.
ಗುರು ದಾಶ್ಯಾಳ ಯಾರು?: ಡಿಸಿಎಂ ಲಕ್ಷ್ಮಣ ಸವದಿ ಆಪ್ತ ಗುರು ದಾಶ್ಯಾಳ ಅಥಣಿ ತಾಲೂಕಿನ ತೆಲಸಂಗ ಜಿಲ್ಲಾ ಪಂಚಾಯತ್ನ ಬಿಜೆಪಿ ಸದಸ್ಯ. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಸ್ವಗ್ರಾಮ ತೆಲಸಂಗ. ಹೀಗಾಗಿ ಕುಮಟಳ್ಳಿಗೆ ಟಾಂಗ್ ನೀಡಲು ಗುರು ಅವರನ್ನ ಡಿಸಿಎಂ ಸವದಿ ಕಣಕ್ಕಿಳಿಸಿದ್ರಾ? ಇದರ ಹಿಂದೆ ಬಿಜೆಪಿ ಮತ ವಿಭಜನೆ ಮಾಡುವ ಪ್ಲಾನ್ ಆಗಿದೆಯಾ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
Published On - 6:43 pm, Mon, 18 November 19