ಶರತ್ ಬಚ್ಚೇಗೌಡರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ- ಬಿ.ಎಸ್.ಯಡಿಯೂರಪ್ಪ
ಹೊಸಕೋಟೆ: ಶರತ್ ಬಚ್ಚೇಗೌಡರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಪ್ರಚಾರದ ವೇಳೆ ಹೇಳಿದ್ದಾರೆ. ಶರತ್ ಬಚ್ಚೇಗೌಡರನ್ನ ಉಚ್ಚಾಟನೆ ಮಾಡಲಾಗಿದೆ. ಸಂಸದ ಬಚ್ಚೇಗೌಡ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಯಾರೇ ಮಾಡಿದರೂ ಅವರಿಗೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಅಶೋಕ್ ಸಮ್ಮುಖದಲ್ಲೇ ಎಂಟಿಬಿಯನ್ನ ಪಕ್ಷಕ್ಕೆ ಕರೆತನ್ನಿ ಎಂದು ಹೇಳಿದ್ದೆ ತಂದೆ, ಮಗ, ಇದೀಗ ರಾಗ ಬದಲಿಸಿ ಉಲ್ಟಾ ಹೊಡೆಯುತ್ತಿದ್ದಾರೆ. […]
ಹೊಸಕೋಟೆ: ಶರತ್ ಬಚ್ಚೇಗೌಡರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಪ್ರಚಾರದ ವೇಳೆ ಹೇಳಿದ್ದಾರೆ.
ಶರತ್ ಬಚ್ಚೇಗೌಡರನ್ನ ಉಚ್ಚಾಟನೆ ಮಾಡಲಾಗಿದೆ. ಸಂಸದ ಬಚ್ಚೇಗೌಡ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಯಾರೇ ಮಾಡಿದರೂ ಅವರಿಗೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಅಶೋಕ್ ಸಮ್ಮುಖದಲ್ಲೇ ಎಂಟಿಬಿಯನ್ನ ಪಕ್ಷಕ್ಕೆ ಕರೆತನ್ನಿ ಎಂದು ಹೇಳಿದ್ದೆ ತಂದೆ, ಮಗ, ಇದೀಗ ರಾಗ ಬದಲಿಸಿ ಉಲ್ಟಾ ಹೊಡೆಯುತ್ತಿದ್ದಾರೆ. ಎಂಟಿಬಿ ಕತೆ ತರಲು ಒಪ್ಪಿಗೆ ಕೊಟ್ಟವರು ಅವ್ರೆ, ಇವತ್ತು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಹೊಸಕೋಟೆಯಲ್ಲಿ ಸಿಎಂ B.S.ಯಡಿಯೂರಪ್ಪ ಹೇಳಿದ್ದಾರೆ.
Published On - 3:24 pm, Mon, 18 November 19