Karnataka Budget 2021: ಕೇಂದ್ರ ಸಚಿವೆ ನಿರ್ಮಲಾ ಹಾಕಿಕೊಟ್ಟ ಡಿಜಿಟಲ್ ಬಜೆಟ್ ಮೇಲ್ಪಂಕ್ತಿ ಅನುಸರಿಸದ ಸಿಎಂ ಯಡಿಯೂರಪ್ಪ
Karnataka State Budget 2021; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನ ಸಾಫ್ಟ್ ಕಾಪಿಯನ್ನು (ಆನ್ಲೈನ್ ಪ್ರತಿ) ಎಲ್ಲಾ ಲೋಕಸಭಾ ಸದಸ್ಯರಿಗೂ ಟ್ಯಾಬ್ ಮೂಲಕ ಓದುವ ಅನುಕೂಲ ಮಾಡಿಕೊಟ್ಟಿದ್ದರು. ಸಿಎಂ ಯಡಿಯೂರಪ್ಪ ಅವರು ಈ ಕ್ರಮ ಅನುಸರಿಸಬಹುದಿತ್ತು. ಈ ಮೂಲಕ ಡಿಜಿಟಲ್ ಇಂಡಿಯಾಕ್ಕೆ ಒತ್ತು ನಿಡಬಹುದಿತ್ತು ಎಂಬ ಮಾತುಗಳು ಕೇಳಿಬಂದಿವೆ.
ಬೆಂಗಳೂರು: 2021ನೇ ಸಾಲಿನ ಕೇಂದ್ರ ಬಜೆಟ್ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಪೂರ್ಣ ಆನ್ಲೈನ್ನಲ್ಲಿ ಮಂಡಿಸಿದ್ದರು. ಡಿಜಿಟಲ್ ಇಂಡಿಯಾದ ಕನಸಿನೊಂದಿಗೆ ಆನ್ಲೈನ್ ಬಜೆಟ್ನ ಮೇಲ್ಪಂಕ್ತಿ ಹಾಕಿದ್ದ ಕೇಂದ್ರ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲಿಸಿದಂತೆ ತೋರುತ್ತಿಲ್ಲ. ಕರ್ನಾಟಕ ರಾಜ್ಯ ಬಜೆಟ್ 2021ನ ಪ್ರತಿಗಳನ್ನು ಮುದ್ರಣ ರೂಪದಲ್ಲಿ ಪ್ರಕಟಿಸಿದ್ದಾರೆ. ಈ ಮೂಲಕ ತಮ್ಮದೇ ಪಕ್ಷ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಕಿಕೊಟ್ಟಿದ್ದ ಡಿಜಿಟಲ್ ಬಜೆಟ್ ಮೇಲ್ಪಂಕ್ತಿಯನ್ನು ಅನುಸರಿಸಿಲ್ಲ. ಮುದ್ರಿತ ಬಜೆಟ್ನ ಸೂಟ್ಕೇಸ್ ಜತೆ ಶೇಷಾದ್ರಿಪುರಂನಲ್ಲಿರುವ ರಾಘವೇಂದ್ರ ಮಠಕ್ಕೆ ತೆರಳಿ ನಂತರ ವಿಧಾನಸೌಧಕ್ಕೆ ಆಗಮಿಸಿದ್ದಾರೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನ ಸಾಫ್ಟ್ ಕಾಪಿಯನ್ನು (ಆನ್ಲೈನ್ ಪ್ರತಿ) ಎಲ್ಲಾ ಲೋಕಸಭಾ ಸದಸ್ಯರಿಗೂ ಟ್ಯಾಬ್ ಮೂಲಕ ಓದುವ ಅನುಕೂಲ ಮಾಡಿಕೊಟ್ಟಿದ್ದರು. ಸಿಎಂ ಯಡಿಯೂರಪ್ಪ ಅವರು ಈ ಕ್ರಮ ಅನುಸರಿಸಬಹುದಿತ್ತು. ಈ ಮೂಲಕ ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡಬಹುದಿತ್ತು ಎಂಬ ಮಾತುಗಳು ಕೇಳಿಬಂದಿವೆ.
ಶೇಷಾದ್ರಿಪುರಂನ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ಸಿಎಂ ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನ ಶೇಷಾದ್ರಿಪುರಂನ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ದೈವಭಕ್ತರಾದ ಅವರು ಇಂದು ಮಧ್ಯಾಹ್ನ 12.05ರ ಅಭಿಜಿನ್ ಮಹೂರ್ತದಲ್ಲಿ ಬಜೆಟ್ ಮಂಡಿಸಲಿದ್ದಾರೆ. ಶೇಷಾದ್ರಿಪುರಂನಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ, ವಿಶೇಷ ಪೂಜೆ ಸಲ್ಲಿಸಿದ್ಧಾರೆ.
ಮುಖ್ಯಮಂತ್ರಿಗಳಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಆರ್.ಅಶೋಕ್ ಸಾಥ್ ನೀಡಿದ್ದಾರೆ. ಬಜೆಟ್ ಪ್ರತಿಗೆ ಪೂಜೆ ಮಾಡಿಸಿದ ಬಿ.ಎಸ್.ಯಡಿಯೂರಪ್ಪ, ಕಾವೇರಿ ನಿವಾಸದಿಂದ ಹೊರಟ ಬಳಿಕ ನಿವಾಸದ ಗೇಟ್ ದಾಟುವವರೆಗೂ ಕಾರಿನೊಳಗೆ ಕೈ ಜೋಡಿಸಿಕೊಂಡೇ ಕುಳಿತಿದ್ದಿದ್ದು ವಿಶೇಷವಾಗಿತ್ತು
ಇದನ್ನೂ ಓದಿ: ದೇಶದಲ್ಲೇ ಅತಿ ದೊಡ್ಡ ಗಾತ್ರದ ಬಜೆಟ್ ನೀಡಿರುವ ರಾಜ್ಯ ಯಾವುದು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
Published On - 12:12 pm, Mon, 8 March 21