Karnataka Budget: ಬೆಂಗಳೂರಿಗೆ ತೆರಿಗೆ ಬಿಸಿ; ಬ್ರ್ಯಾಂಡ್ ಬೆಂಗಳೂರು ಅಡಿ ಮೂಲಭೂತ ಸೌಕರ್ಯಕ್ಕೆ ಒತ್ತು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ 2024 ಮಂಡನೆ ಮಾಡುತ್ತಿದ್ದು, ಬ್ರ್ಯಾಂಡ್ ಬೆಂಗಳೂರು ಕಲ್ಪನೆಯಡಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಆದರೆ, ಬೆಂಗಳೂರಿಗೆ ತೆರಿಗೆ ಬಿಸಿ ತಟ್ಟಿದೆ. 2044-25ರ ಸಾಲಿನಲ್ಲಿ 6,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಇಟ್ಟುಕೊಂಡಿದೆ.
ಬೆಂಗಳೂರು, ಫೆ.16: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕರ್ನಾಟಕ ಬಜೆಟ್ 2024 (Karnataka Budget 2024) ಮಂಡನೆ ಮಾಡುತ್ತಿದ್ದು, ಬ್ರ್ಯಾಂಡ್ ಬೆಂಗಳೂರು (Brand Bengaluru) ಕಲ್ಪನೆಯಡಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ಆದರೆ, ಬೆಂಗಳೂರಿಗೆ ತೆರಿಗೆ ಬಿಸಿ ತಟ್ಟಿದೆ. 2044-25ರ ಸಾಲಿನಲ್ಲಿ 6,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಇಟ್ಟುಕೊಂಡಿದೆ. ಪರಿಷ್ಕೃತ ಜಾಹೀರಾತು ನೀತಿಯಿಂದ 2,000 ಕೋಟಿ ತೆರಿಗೆ ನಿರೀಕ್ಷೆ ಹೊಂದಲಾಗಿದ್ದು, ಬೆಂಗಳೂರಲ್ಲಿ ಸಂಗ್ರಹವಾಗುವ ತೆರಿಗೆಯಿಂದ ಸಂಚಾರದಟ್ಟಣೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ಬಿಬಿಎಂಪಿ ವ್ಯಾಪ್ತಿಯ 20 ಲಕ್ಷ ಆಸ್ತಿಗಳ ದಾಖಲೆಗಳ ಆಸ್ತಿ ತೆರಿಗೆಗೆ ಡಿಜಿಟಲಿಕರಣ ಹಾಗೂ ಡಿಜಿಟಲ್ ಇ ಖಾತಾ, 1700 ಕೋಟಿ ವೆಚ್ಚದಲ್ಲಿ 147 ಕಿಲೋಮೀಟರ್ ಉದ್ದದ ವೈಟ್ ಟೈಪಿಂಗ್ ಡಿಸೆಂಬರ್ 2025 ಕ್ಕೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಂಚಾರದಟ್ಟಣೆ ಅತ್ಯಂತ ಹೆಚ್ಚಿರುವ ಹಿನ್ನೆಲೆ ಪ್ರಾಯೋಗಿಕವಾಗಿ ಹೆಬ್ಬಾಳ ಜಂಕ್ಷನ್ನಲ್ಲಿ ಟನಲ್ ನಿರ್ಮಾಣ, 200 ಕೋಟಿ ವೆಚ್ಚದಲ್ಲಿ ನಾಲಾ ಬಫರ್ ಒಳಗೆ 100 ಕಿಲೋಮೀಟರ್ ಉದ್ದದ ರಸ್ತೆ ಅಭಿವೃದ್ಧಿಗೆ ಪ್ಲಾನ್ ಮಾಡಲಾಗಿದೆ. ಸುಗಮ ಸಂಚಾರ ಬ್ರಾಂಡ್ ಬೆಂಗಳೂರು ಯೋಜನೆ ಅಡಿ ಅಂತರಾಷ್ಟ್ರೀಯ ಮಟ್ಟದ ತಜ್ಞ ಸಮಿತಿ ನೇಮಕ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: Karnataka Budget: ವಕ್ಫ್ಗೆ 100 ಕೋಟಿ, ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ರೂ. ಘೋಷಣೆ
27 ಸಾವಿರ ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ 73 ಕಿ.ಮೀ ಉದ್ದದ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಮಾಡಲಾಗುವದು. ಈ ರಸ್ತೆಗೆ ಬೆಂಗಳೂರು ಬಿಸಿನೆಸ್ ಕಾರ್ಡ್ ಎಂಬ ಹೊಸ ಪರಿಕಲ್ಪನೆ ನೀಡಲಾಗುವುದು. ಬೆಂಗಳೂರು ನಗರದಲ್ಲಿ 250 ಮೀಟರ್ ಎತ್ತರದ ಸ್ಕೈ ಡೆಕ್ ನಿರ್ಮಾಣಕ್ಕಾಗಿ ಚಿಂತನೆ ಮಾಡಲಾಗಿದೆ. ಬೆಂಗಳೂರು ವಿವಿಧ ಇಲಾಖೆಗಳ ವಿದ್ಯುತ್ ಆರ್ಥಿಕ ಹೊರೆ ಕಡಿಮೆಗೊಳಿಸಲು ಸೋಲಾರ್ ಪಾರ್ಕ್ ಸ್ಥಾಪನೆ ಮಾಡಲಾಗುವುದು.
ಬಿಎಂಟಿಸಿ ಸೇವೆಯೊಂದಿಗೆ ಮೆಟ್ರೋ ರೈಲ್ ಹಾಗೂ ಸಬ್ ಅರ್ಬನ್ ರೈಲುಗೆ ಕನೆಕ್ಟಿವಿಟಿ ಕೊಡುವುದು, 2025 ಮಾರ್ಚ್ ವೇಳೆಗೆ ಹೊಸದಾದ 45 ಕಿ.ಮೀ ಮಾರ್ಗದ ಮೆಟ್ರೋ ಉದ್ಘಾಟನೆ, ಮೆಟ್ರೋ ಯೋಜನೆ ಹಂತ 2 ಹಾಗೂ ಹಂತ 2ಎ ಯೋಜನೆಯಡಿ ಹೊರವರ್ತಲ ರಸ್ತೆ ಹಾಗೂ ವಿಮಾನ ನಿಲ್ದಾಣ ಮಾರ್ಗ 2026 ಜೂನ್ಗೆ ಪೂರ್ಣಗೊಳಿಸಲಾಗುವುದು. ನಮ್ಮ ಮೆಟ್ರೋ ಹಂತ 3 ರ ಅಡಿ ಅಂದಾಜು 15,611 ಕೋಟಿ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ