ಸಂಪುಟ ವಿಸ್ತರಣೆ: ಯಡಿಯೂರಪ್ಪ ಸಿನಿಮಾ ವೀಕ್ಷಣೆ, ರಾಮುಲು ಟೆಂಪಲ್ ರನ್

|

Updated on: Jan 28, 2020 | 11:45 AM

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಟೆನ್ಷನ್​ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಇಂದು ಸಂಜೆ 5.30ಕ್ಕೆ ನಗರದ ಒರಾಯನ್ ಮಾಲ್​ನಲ್ಲಿ ಅರಣ್ಯ, ವನ್ಯಜೀವಿ ಇಲಾಖೆ ಆಯೋಜಿಸಿರುವ ‘ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ’ವನ್ನು ಬಿಎಸ್​ವೈ ವೀಕ್ಷಿಸಲಿದ್ದಾರೆ. ಯಡಿಯೂರಪ್ಪಗೆ ಡಿಸಿಎಂ ಅಶ್ವತ್ಥ್​​ ನಾರಾಯಣ, ಸಿ.ಸಿ.ಪಾಟೀಲ್ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ. ಜ.31ರಂದು ಸಂಪುಟ ವಿಸ್ತರಣೆ ಖಚಿತ? ಜ.31ರಂದು ಸಚಿವ ಸಂಪುಟ ವಿಸ್ತರಣೆ ಬಹುತೇಕ ಖಚಿತ ಎನ್ನಲಾಗಿದೆ. ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳುವ ಬಗ್ಗೆ ನಾಳೆ […]

ಸಂಪುಟ ವಿಸ್ತರಣೆ: ಯಡಿಯೂರಪ್ಪ ಸಿನಿಮಾ ವೀಕ್ಷಣೆ, ರಾಮುಲು ಟೆಂಪಲ್ ರನ್
Follow us on

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಟೆನ್ಷನ್​ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಇಂದು ಸಂಜೆ 5.30ಕ್ಕೆ ನಗರದ ಒರಾಯನ್ ಮಾಲ್​ನಲ್ಲಿ ಅರಣ್ಯ, ವನ್ಯಜೀವಿ ಇಲಾಖೆ ಆಯೋಜಿಸಿರುವ ‘ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ’ವನ್ನು ಬಿಎಸ್​ವೈ ವೀಕ್ಷಿಸಲಿದ್ದಾರೆ. ಯಡಿಯೂರಪ್ಪಗೆ ಡಿಸಿಎಂ ಅಶ್ವತ್ಥ್​​ ನಾರಾಯಣ, ಸಿ.ಸಿ.ಪಾಟೀಲ್ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ.

ಜ.31ರಂದು ಸಂಪುಟ ವಿಸ್ತರಣೆ ಖಚಿತ?
ಜ.31ರಂದು ಸಚಿವ ಸಂಪುಟ ವಿಸ್ತರಣೆ ಬಹುತೇಕ ಖಚಿತ ಎನ್ನಲಾಗಿದೆ. ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳುವ ಬಗ್ಗೆ ನಾಳೆ ಅಂತಿಮ ತೀರ್ಮಾನವಾಗಲಿದೆ. ಸಚಿವ ಸಂಪುಟ ವಿಸ್ತರಣೆ ಸಂಬಂಧ ಯಡಿಯೂರಪ್ಪ ದೆಹಲಿಗೆ ತೆರಳಬೇಕೋ? ಫೋನ್​ನಲ್ಲೇ ಚರ್ಚಿಸಬೇಕೋ ಎಂಬುದು ನಾಳೆ ಫೈನಲ್ ಆಗಲಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿ.ಎಲ್.ಸಂತೋಷ್ ಜತೆ ಸಂಪುಟದ ಬಗ್ಗೆ ಬಿಎಸ್​ವೈ ಚರ್ಚೆ ನಡೆಸಿದ್ದಾರೆ.

ಹೀಗಾಗಿ ಫೋನ್​ನಲ್ಲೇ ಚರ್ಚಿಸಿ ಅಂತಿಮ ಮುದ್ರೆಗೆ ಪ್ಲ್ಯಾನ್ ರೂಪಿಸಿದ್ದಾರೆ. ಒಂದು ವೇಳೆ ದೆಹಲಿಗೆ ಹೋಗಲೇಬೇಕು ಎಂದಾದರೆ ಗುರುವಾರ ಬಿಎಸ್​ವೈ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಅದಕ್ಕಾಗಿ ಜ.30ರ ಕಾರ್ಯಕ್ರಮವನ್ನು ಯಡಿಯೂರಪ್ಪ ಕಾಯ್ದಿರಿಸಿದ್ದಾರೆ.

ಶ್ರೀರಾಮುಲು ಟೆಂಪಲ್ ರನ್:
ಸಚಿವ ಸಂಪುಟ ವಿಸ್ತರಣೆ, ಡಿಸಿಎಂ ಸ್ಥಾನದ ಬೆಳವಣಿಗೆಗಳ ಬೆನ್ನಲ್ಲೇ ಆರೋಗ್ಯ ಸಚಿವ ಶ್ರೀರಾಮುಲು ಇಂದು ಬೆಳ್ಳಂಬೆಳಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವೇಳೆ ಡಿಸಿಎಂ ಸ್ಥಾನ ಸಿಗಲೆಂಬ ಇಚ್ಛೆ ಈಡೇರಿಕೆಯೋ? ಪುತ್ರಿಯ ವಿವಾಹ ಹಿನ್ನೆಲೆಯಲ್ಲಿ ದೇವರಿಗೆ ಪೂಜೆ ಮಾಡಿದ್ದಾರೋ ಎಂಬ ಕುತೂಹಲ ಮೂಡಿಸಿದೆ. ಸಂಕಷ್ಟ ಹಾಗೂ ಇಚ್ಛೆ ಈಡೇರಿಕೆ ಸಂದರ್ಭದಲ್ಲೆಲ್ಲಾ ಶ್ರೀರಾಮುಲು ವೆಂಕಟರಮಣನ ದರ್ಶನ ಪಡೆಯುತ್ತಾರೆ.