ದರ್ಗಾ ಸಮೀಪ ಕಾರ್ತಿಕ ದೀಪ ಹಚ್ಚಲು ಅನುಮತಿ: ಜಡ್ಜ್ ಪದಚ್ಯುತಿಗೆ ಸಹಿ ಹಾಕಿದ ಕರ್ನಾಟಕದ ಕೈ ಸಂಸದರು
ದರ್ಗಾದ ಸಮೀಪದಲ್ಲಿರುವ ಸ್ಥಳದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಿ ಕೋರ್ಟ್ ಅನುಮತಿ ನೀಡಿದ್ದು, ಇದರು ಭಾರೀ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಇದೀಗ ಆದೇಶ ನೀಡಿದ ನ್ಯಾಯಮೂರ್ತಿಯನ್ನು ಪದಚ್ಯುತಿಗೊಳಿಸಬೇಕೆಂಬ ಆಗ್ರಹ ವ್ಯಕ್ತವಾಗಿದ್ದು, ಮಹಾಭಿಯೋಗ ನೋಟೀಸ್‌ಗೆ ಕರ್ನಾಟಕ ಕಾಂಗ್ರೆಸ್ನ ಮೂವರು ಸಂಸದರು ಸಹಿ ಹಾಕಿದ್ದಾರೆ.ಈ ಮೂಲಕ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಏನಿದು ಪ್ರಕರಣ? ಸಹಿ ಹಾಕಿದ ಕರ್ನಾಟಕದ ಸಂಸದರು ಯಾರು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು, (ಡಿಸೆಂಬರ್ 12): ತಮಿಳುನಾಡಿನ (Tamil Nadu)ತಿರುಪರಾನುಕುಂದ್ರಂ ಬೆಟ್ಟದ ಮೇಲಿನ ದರ್ಗಾದ ಸಮೀಪದಲ್ಲಿರುವ ಸ್ಥಳದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಿ ಮದ್ರಾಸ್ ಹೈಕೋರ್ಟ್ (Madras High Court )ಅನುಮತಿ ನೀಡಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಆದೇಶ ನೀಡಿದ ನ್ಯಾಯಮೂರ್ತಿ ಸ್ವಾಮಿನಾಥನ್ (Justice G. R. Swaminathan) ಅವರನ್ನು ಪದಚ್ಯುತಿಗೊಳಿಸುವಂತೆ ಕೋರಿ ಸಂವಿಧಾನದ 124 ನೇ ವಿಧಿಯೊಂದಿಗೆ 217 ನೇ ವಿಧಿಯ ಅಡಿಯಲ್ಲಿ ಲೋಕಸಭೆಯಲ್ಲಿ ನಿರ್ಣಯ ಮಂಡಿಸಲಾಗಿದೆ. ಇನ್ನು ಜಡ್ಜ್ ಸ್ವಾಮಿನಾಥನ್ ಪದಚ್ಯುತಿಗೆ ಮಹಾಭಿಯೋಗ ನೋಟೀಸ್ ನೀಡಲಾಗಿದ್ದು, ಈ ನೋಟೀಸ್‌ಗೆ ಕರ್ನಾಟಕದ ಕಾಂಗ್ರೆಸ್ ಸಂಸದರಾದ ಶ್ರೇಯಸ್ ಪಟೇಲ್ (ಹಾಸನ), ಪ್ರಭಾ ಮಲ್ಲಿಕಾರ್ಜುನ (ದಾವಣಗೆರೆ) ಹಾಗೂ ಜಿ.ಕುಮಾರನಾಯ್ಕ್ (ರಾಯಚೂರು) ಕೂಡ ಸಹಿ ಹಾಕಿದ್ದಾರೆ. ಇದಕ್ಕೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನ್ಯಾಯಮೂರ್ತಿಗಳ ವಿರುದ್ಧ ಡಿಎಂಕೆ ಮತ್ತು ಇಂಡಿಯಾ ಒಕ್ಕೂಟದ ಸಂಸದರ ಬೆಂಬಲದೊಂದಿಗೆ ವಾಗ್ದಂಡನೆಯ ನಿರ್ಣಯವನ್ನು ಲೋಕಸಭೆಯ ಸ್ಪೀಕರ್‌ಗೆ ಮಂಡಿಸಿದ್ದಾರೆ . ಡಿಸೆಂಬರ್ 9 ರಂದು ಸಂವಿಧಾನದ 124 ನೇ ವಿಧಿಯೊಂದಿಗೆ 217 ನೇ ವಿಧಿಯ ಅಡಿಯಲ್ಲಿ ನ್ಯಾಯಮೂರ್ತಿ ಸ್ವಾಮಿನಾಥನ್ ರನ್ನ ಪದಚ್ಯುತಗೊಳಿಸುವಂತೆ ಕೋರಿ ಈ ನಿರ್ಣಯ ಮಂಡಿಸಲಾಗಿದೆ.
ಇದನ್ನೂ ಓದಿ; ದೇವಸ್ಥಾನ ಮುಂಭಾಗ ದಫ್ ಪ್ರದರ್ಶನಕ್ಕೆ ಹಿಂದೂ ಸಂಘಟನೆಗಳು ವಿರೋಧ: ಮಸೀದಿ ಮುಂದೆ ಹನುಮಾನ್ ಚಾಲೀಸ್ ಪಠಣ ಎಚ್ಚರಿಕೆ
ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲಿನ ದರ್ಗಾದ ಸಮೀಪದಲ್ಲಿರುವ ಸ್ಥಳದಲ್ಲಿ ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಿ ನ್ಯಾಯಮೂರ್ತಿ ಸ್ವಾಮಿನಾಥನ್ ತೀರ್ಪು ನೀಡಿದ್ದರು. ಈ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗಿಸಲು ತಮಿಳುನಾಡು ಸರ್ಕಾರ ನಿಷೇಧ ಹೇರಿತ್ತು.ಇದರ ವಿರುದ್ಧ ಹಿಂದೂಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ತೀರ್ಪು ನೀಡುವ ವೇಳೆ ಜಸ್ಟೀಸ್ ಸ್ವಾಮಿನಾಥನ್, ಕಾರ್ತಿಕ ದೀಪ ಹಚ್ಚುವುದರಿಂದ ಹತ್ತಿರದ ದರ್ಗಾ ಅಥವಾ ಮುಸ್ಲಿಂ ಸಮುದಾಯದ ಹಕ್ಕು ಉಲ್ಲಂಘನೆ ಆಗುವುದಿಲ್ಲ ಎಂದು ಹೇಳಿದ್ದರು. ಹಿಂದೂಗಳ ಪರ ಆದೇಶ ನೀಡಿದ ನ್ಯಾಯಮೂರ್ತಿ ವಿರುದ್ದ ವಾಗ್ದಂಡನೆಗೆ ಕರ್ನಾಟಕದ ಮೂರು ಸಂಸದರ ಸಹಿ ಹಾಕಿದ್ದಾರೆ. ಇದಕ್ಕೆ ಇದೀಗ ಕರ್ನಾಟಕ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕದ 3 ಎಂಪಿಗಳ ವಿರುದ್ಧ ಆಕ್ರೋಶ
ತಿರುಪರಂಕುಂದ್ರಂನಲ್ಲಿ ಕಾರ್ತಿಕೇಯ ದೀಪ ಬೆಳಗಿಸುವ ವಿಚಾರಕ್ಕೆ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಪದಚ್ಯುತಿ ನಿರ್ಣಯ ಮಂಡಿಸಿದ್ದಕ್ಕೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಂಸತ್ತಿನಲ್ಲಿ ಖಂಡಿಸಿದ್ದು, ಮಹಾಭಿಯೋಗ ನಿರ್ಣಯ ಮಂಡಿಸಿದ ಡಿಎಂಕೆಯ ಅಸಂವಿಧಾನಿಕವನ್ನು ಖಂಡಿಸುತ್ತೇನೆ. ಇದು ದೇಶದ ನ್ಯಾಯಾಂಗ ಹಾಗೂ ನ್ಯಾಯಾಧೀಶರ ನಿಷ್ಪಕ್ಷಪಾತದ ಮೇಲಿನ ದಾಳಿ ಎಂದು ಕಿಡಿಕಾರಿದ್ದಾರೆ.
View this post on Instagram
ಇನ್ನು ಇದಕ್ಕೆ ಬೆಂಬಲಿಸಿ ಸಹಿ ಮಾಡಿದ ಕರ್ನಾಟಕದ ಮೂರುವ ಕಾಂಗ್ರೆಸ್ ಸಂಸದರಾದ ಶ್ರೇಯಸ್ ಪಾಟೀಲ್, ಕುಮಾರ್ ನಾಯ್ಕ್, ಪ್ರಭಾ ಮಲ್ಲಿಕಾರ್ಜುನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ತಿಕ ದೀಪ ಆರಿಸಿದ ಹಿಂದೂ ವಿರೋಧಿ ಸಂಸದರಿಗೆ ಧಿಕ್ಕಾರ ಎಂದು ಪೋಸ್ಟರ್ ಹಾಕಿದೆ. ಇನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಹ ಟೀಕಿಸಿದ್ದು, ಪಕ್ಷ ಯಾವುದೇ ಇರಲಿ. ಪರಿಸ್ಥಿತಿ ಏನೇ ಇರಲಿ. ಸನಾತನ ಸಂಸ್ಕೃತಿಗೆ, ಹಿಂದೂ ಧಾರ್ಮಿಕ ಭಾವನೆಗಳಿಗೆ ಈ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದ್ರೆ, ಇವರು ಧರ್ಮ ಭ್ರಷ್ಟ, ಹಿಂದೂ ವಿರೋಧಿಗಳು ಎಂದು ಕಿಡಿಕಾರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:41 pm, Fri, 12 December 25




