Karnataka Dam Water Level: ಆ.29ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ವಿವರ ಇಲ್ಲಿದೆ
ಕರ್ನಾಟಕದ ಜಲಾಶಯಗಳ ಆಗಸ್ಟ್ 29ರ ನೀರಿನ ಮಟ್ಟ: ತುಂಗಭದ್ರಾ, ಮಲಪ್ರಭಾ, ಕೆಆರ್‌ಎಸ್, ಲಿಂಗನಮಕ್ಕಿ, ಭದ್ರಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತು ಒಳ ಹರಿವು ಎಷ್ಟಿದೆ? ಯಾವ ಡ್ಯಾಂ ನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ ಎಂಬ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ಬರದ ಛಾಯೆ ಆವರಿಸಿರುವ ನಡುವೆಯೇ ಮತ್ತೆ ಕಾವೇರಿ ನೀರು ವಿಚಾರವಾಗಿ ಕಂಟಕ ಎದುರಾಗಿದೆ. ಈಗಾಗಲೇ ತಮಿಳುನಾಡಿಗೆ 10 ಟಿಎಂಸಿ ನೀರು ಬಿಟ್ಟಿರುವ ಕರ್ನಾಟಕಕ್ಕೆ ಇನ್ನೂ 15 ದಿನ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (CWRC) ಸೂಚಿಸಿದೆ, ಇದರ ಬೆನ್ನಲ್ಲೇ ಮಂಗಳವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು, ಅಲ್ಲಿ ಸಮಿತಿಯ ಈ ಸೂಚನೆಗೆ ವಿರೋಧ ವ್ಯಕ್ತಪಡಿಸಲು ಕರ್ನಾಟಕ ನಿರ್ಧರಿಸಿದೆ. ಹಾಗಾದರೆ ಆಗಸ್ಟ್ 29ರಂದು ಕೃಷ್ಣರಾಜಸಾಗರ ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
| ಜಲಾಶಯಗಳ ನೀರಿನ ಮಟ್ಟ | ||||||
| ಕರ್ನಾಟಕದ ಪ್ರಮುಖ ಜಲಾಶಯಗಳು (Dam) | ಗರಿಷ್ಠ ನೀರಿನ ಮಟ್ಟ (ಮೀ) | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ನೀರಿನ ಮಟ್ಟ (ಟಿಎಂಸಿ) | ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) | ಹೊರಹರಿವು (ಕ್ಯೂಸೆಕ್ಸ್) |
| ಆಲಮಟ್ಟಿ ಜಲಾಶಯ (Almatti Dam) | 519.6 | 123.08 | 122.48 | 122.83 | 0 | 3049 |
| ತುಂಗಭದ್ರಾ ಜಲಾಶಯ (Tungabhadra Dam) | 497.71 | 105.79 | 81.10 | 104.87 | 1636 | 10730 |
| ಮಲಪ್ರಭಾ ಜಲಾಶಯ (Malaprabha Dam) | 633.80 | 37.73 | 23.01 | 35.93 | 894 | 894 |
| ಕೆ.ಆರ್.ಎಸ್ (KRS Dam) | 38.04 | 49.45 | 24.32 | 49.28 | 1328 | 2345 |
| ಲಿಂಗನಮಕ್ಕಿ ಜಲಾಶಯ (Linganamakki Dam) | 554.44 | 151.75 | 71.54 | 135.81 | 1156 | 4694 |
| ಕಬಿನಿ ಜಲಾಶಯ (Kabini Dam) | 696.13 | 19.52 | 13.66 | 19.51 | 1689 | 4325 |
| ಭದ್ರಾ ಜಲಾಶಯ (Bhadra Dam) | 657.73 | 71.54 | 48.30 | 70.38 | 1279 | 3224 |
| ಘಟಪ್ರಭಾ ಜಲಾಶಯ (Ghataprabha Dam) | 662.91 | 51.00 | 42.11 | 51.00 | 725 | 4703 |
| ಹೇಮಾವತಿ ಜಲಾಶಯ (Hemavathi Dam) | 890.58 | 37.10 | 26.12 | 37.06 | 563 | 5210 |
| ವರಾಹಿ ಜಲಾಶಯ (Varahi Dam) | 594.36 | 31.10 | 9.97 | 21.14 | 256 | 976 |
| ಹಾರಂಗಿ ಜಲಾಶಯ (Harangi Dam) | 871.38 | 8.50 | 7.94 | 7.78 | 518 | 1700 |
| ಸೂಫಾ (Supa Dam) | 564.00 | 145.33 | 78.71 | 91.77 | 2761 | 5208 |
ದೆಹಲಿಯಲ್ಲಿ ಸೋಮವಾರ ನಡೆದ ಸಮಿತಿ ಸಭೆಯ ಆರಂಭದಲ್ಲೇ ತಮಿಳುನಾಡು 10 ದಿನ 25 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆಗ್ರಹಿಸಿತು. ಆಗ ಸಮಿತಿ ಮುಖ್ಯಸ್ಥರು ನಿತ್ಯ 7,500 ಕ್ಯುಸೆಕ್ ನೀರು ಬಿಡುವಂತೆ ಸೂಚಿಸಿದರು. ಆದರೆ, ಕರ್ನಾಟಕದ ಅಧಿಕಾರಿಗಳು ಮಾತ್ರ ಇದಕ್ಕೆ ಒಪ್ಪದಿದ್ದಾಗ 15 ದಿನ ಕಾಲ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡಲು ನಿರ್ದೇಶನ ನೀಡಲಾಯಿತು. ಅಂತಿಮವಾಗಿ 3 ಸಾವಿರ ಕ್ಯುಸೆಕ್ ನೀರು ಬಿಡುವುದಾಗಿ ಕರ್ನಾಟಕವು ಸಮಿತಿ ಮುಂದೆ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




