AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ರಾಜ್ಯದ ಪ್ರಮುಖ ಜಲಾಶಯಗಳಿಗೆ ಹೆಚ್ಚಿದ ಒಳಹರಿವು: ಭರ್ತಿಯ ಹಾದಿಯಲ್ಲಿ ಕಬಿನಿ, ಆಲಮಟ್ಟಿ ಡ್ಯಾಂ!

ಕರ್ನಾಟಕದ ಜಲಾಶಯಗಳ (ಆಗಸ್ಟ್ 10) ನೀರಿನ ಮಟ್ಟ: ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ವಿಜಯಪುರದ ಆಲಮಟ್ಟಿ ಡ್ಯಾಂಗೆ 89 ಸಾವಿರ ಕ್ಯೂಸೆಕ್ ಒಳಹರಿವಿದ್ದು, ಮೈಸೂರಿನ ಕಬಿನಿ ಜಲಾಶಯ ಭರ್ತಿಗೆ ಕೇವಲ ಒಂದು ಅಡಿ ಬಾಕಿಯಿದೆ. ಇತ್ತ ಕಾವೇರಿ ಕೊಳ್ಳದ ಕೆಆರ್‌ಎಸ್ ಜಲಾಶಯದ ಇಂದಿನ ನೀರಿನ ಮಟ್ಟ ಹಾಗೂ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Dam Water Level: ರಾಜ್ಯದ ಪ್ರಮುಖ ಜಲಾಶಯಗಳಿಗೆ ಹೆಚ್ಚಿದ ಒಳಹರಿವು: ಭರ್ತಿಯ ಹಾದಿಯಲ್ಲಿ ಕಬಿನಿ, ಆಲಮಟ್ಟಿ ಡ್ಯಾಂ!
ಭರ್ತಿಯ ಹಾದಿಯಲ್ಲಿ ಕಬಿನಿ, ಆಲಮಟ್ಟಿ ಡ್ಯಾಂ
ಭಾವನಾ ಹೆಗಡೆ
|

Updated on: Aug 10, 2026 | 11:38 AM

Share

ಮುಖ್ಯಾಂಶಗಳು

  • ಆಲಮಟ್ಟಿ ಜಲಾಶಯಕ್ಕೆ ಕೃಷ್ಣಾ ನದಿಯಿಂದ ಭಾರಿ ಪ್ರಮಾಣದ ಒಳಹರಿವು ಮುಂದುವರಿದಿದೆ.
  • ಮೈಸೂರಿನ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಲು ಕೇವಲ ಒಂದೇ ಅಡಿ ಬಾಕಿಯಿದೆ.
  • ಕೆಆರ್‌ಎಸ್ ಡ್ಯಾಂನ ಇಂದಿನ ನೀರಿನ ಸಂಗ್ರಹ 30 ಟಿಎಂಸಿ ದಾಟಿದೆ.

ಬೆಂಗಳೂರು, ಆಗಸ್ಟ್ 10: ಕರ್ನಾಟಕದ ವಿವಿಧ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಮಳೆ ಚುರುಕಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು (Dam water level) ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ ಕೃಷ್ಣಾ ನದಿಯಿಂದ ದಾಖಲೆ ಪ್ರಮಾಣದ ನೀರು ಹರಿದುಬರುತ್ತಿದ್ದು, ಇತ್ತ ಮೈಸೂರಿನ ಕಬಿನಿ ಜಲಾಶಯ ಭರ್ತಿಯಾಗಲು ಕೇವಲ ಒಂದೇ ಅಡಿ ಬಾಕಿಯಿದೆ. ಕಾವೇರಿ ಕೊಳ್ಳದ ಕೆಆರ್‌ಎಸ್ ಡ್ಯಾಂನಲ್ಲೂ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

1. ಆಲಮಟ್ಟಿ ಜಲಾಶಯ

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂ ಗರಿಷ್ಠ ಮಟ್ಟಕ್ಕೆ ತಲುಪುತ್ತಿದ್ದು, ಕೃಷ್ಣಾ ನದಿಯಿಂದ ಭಾರಿ ಪ್ರಮಾಣದ ಒಳಹರಿವು ಮುಂದುವರಿದಿದೆ.

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 519.42 ಮೀಟರ್
  • ಒಳಹರಿವು: 89,777 ಕ್ಯೂಸೆಕ್
  • ಹೊರಹರಿವು: 41,155 ಕ್ಯೂಸೆಕ್

2. ಕೆಆರ್‌ಎಸ್ ಜಲಾಶಯ

ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಒಳಹರಿವು ಸ್ಥಿರವಾಗಿದ್ದು, ಇಂದಿನ ನೀರಿನ ಸಂಗ್ರಹ 30 ಟಿಎಂಸಿ ದಾಟಿದೆ.

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ಮಟ್ಟ: 108.66 ಅಡಿ
  • ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
  • ಇಂದಿನ ಸಂಗ್ರಹ: 30.396 ಟಿಎಂಸಿ
  • ಒಳಹರಿವು: 11,857 ಕ್ಯೂಸೆಕ್
  • ಹೊರಹರಿವು: 2,335 ಕ್ಯೂಸೆಕ್

3. ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 84 ಅಡಿ
  • ಇಂದಿನ ನೀರಿನ ಮಟ್ಟ: 83.04 ಅಡಿ
  • ಗರಿಷ್ಠ ಸಂಗ್ರಹ ಸಾಮರ್ಥ್ಯ: 19.52 ಟಿಎಂಸಿ
  • ಇಂದಿನ ಸಂಗ್ರಹ: 18.89 ಟಿಎಂಸಿ
  • ಒಳಹರಿವು: 12,044 ಕ್ಯೂಸೆಕ್
  • ಒಟ್ಟು ಹೊರಹರಿವು: 12,000 ಕ್ಯೂಸೆಕ್ (ಕಾಲುವೆಗಳಿಗೆ ನೀರು ಸ್ಥಗಿತ)

ಮೈಸೂರಿನ ಕಬಿನಿ ಜಲಾನಯನ ಪ್ರದೇಶದಲ್ಲಿ 10 ಮಿ.ಮೀ ಮಳೆಯಾಗಿದ್ದು, ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಲು ಕೇವಲ 0.96 ಅಡಿ ಮಾತ್ರ ಬಾಕಿಯಿದೆ. ಸುರಕ್ಷತೆಯ ದೃಷ್ಟಿಯಿಂದ ನದಿಗೆ ಭಾರಿ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಸ್ತೆ ಗುಂಡಿಯಲ್ಲಿ 'ಕೆರೆ-ದಂಡೆ' ಆಟ
ರಸ್ತೆ ಗುಂಡಿಯಲ್ಲಿ 'ಕೆರೆ-ದಂಡೆ' ಆಟ
ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಪಾದಯಾತ್ರೆ: ಎರಡನೇ ದಿನಕ್ಕೆ HDD ಸಾಥ್
ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಪಾದಯಾತ್ರೆ: ಎರಡನೇ ದಿನಕ್ಕೆ HDD ಸಾಥ್
ಇಂದು ಪಾಪನಾಶಿನಿ ದ್ವಾದಶಿ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಪಾಪನಾಶಿನಿ ದ್ವಾದಶಿ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಗಲ್ಲ ಅಂದ್ರೆ ಹೋಗ್ತಾ ಇರು; ಅಮುಕು ಡುಮುಕುಗೆ ಗೆಟೌಟ್ ಎಂದ ವಿನಯ್ ಗೌಡ
ಆಗಲ್ಲ ಅಂದ್ರೆ ಹೋಗ್ತಾ ಇರು; ಅಮುಕು ಡುಮುಕುಗೆ ಗೆಟೌಟ್ ಎಂದ ವಿನಯ್ ಗೌಡ
ಕಾಂಗ್ರೆಸ್​​ಗೆ ಹತ್ತಿರವಾಗುತ್ತಿದ್ದಾರಾ ಬಿಜೆಪಿಯ ಪ್ರೀತಂಗೌಡ?
ಕಾಂಗ್ರೆಸ್​​ಗೆ ಹತ್ತಿರವಾಗುತ್ತಿದ್ದಾರಾ ಬಿಜೆಪಿಯ ಪ್ರೀತಂಗೌಡ?
ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಅಧಿಕಾರಿಗಳಿಗೆ ಜೋಶಿ ಸೂಚನೆ
ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಅಧಿಕಾರಿಗಳಿಗೆ ಜೋಶಿ ಸೂಚನೆ
ಶಾಸಕರ ಅಸಮಾಧಾನದ ನಡುವೆ ದೆಹಲಿಗೆ ಹಾರಿದ ಸಿಎಂ ಡಿ.ಕೆ ಶಿವಕುಮಾರ್
ಶಾಸಕರ ಅಸಮಾಧಾನದ ನಡುವೆ ದೆಹಲಿಗೆ ಹಾರಿದ ಸಿಎಂ ಡಿ.ಕೆ ಶಿವಕುಮಾರ್
ಚಲಿಸುತ್ತಿದ್ದಾಗಲೇ ಟೈರ್ ಬ್ಲಾಸ್ಟ್: ಗದ್ದೆಗೆ ನುಗ್ಗಿದ KSRTC ಬಸ್​​
ಚಲಿಸುತ್ತಿದ್ದಾಗಲೇ ಟೈರ್ ಬ್ಲಾಸ್ಟ್: ಗದ್ದೆಗೆ ನುಗ್ಗಿದ KSRTC ಬಸ್​​
ಸಚಿವರ ಪಟ್ಟಿ ಬದಲಾಗಿದ್ದು ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು: ರಾಜಣ್ಣ
ಸಚಿವರ ಪಟ್ಟಿ ಬದಲಾಗಿದ್ದು ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು: ರಾಜಣ್ಣ
ಯತೀಂದ್ರಗೆ ಮತ್ತೊಂದು ಜಾಕ್​​ ಪಾಟ್, ಸಿದ್ದರಾಮಯ್ಯ ಮುನಿಸು ತಣಿಸುವ ಪ್ರಯತ್ನ
ಯತೀಂದ್ರಗೆ ಮತ್ತೊಂದು ಜಾಕ್​​ ಪಾಟ್, ಸಿದ್ದರಾಮಯ್ಯ ಮುನಿಸು ತಣಿಸುವ ಪ್ರಯತ್ನ