
ಬೆಂಗಳೂರು, ಆಗಸ್ಟ್ 23: ರಾಜ್ಯಾದ್ಯಂತ ಮುಂಗಾರು ಮಳೆ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಸ್ಥಿರವಾಗಿ ಸಾಗಿದೆ. ಕಾವೇರಿ, ಕೃಷ್ಣಾ, ಶರಾವತಿ ಹಾಗೂ ಭದ್ರಾ ನದಿ ಪಾತ್ರಗಳಲ್ಲಿ ಮಳೆಯಾಗುತ್ತಿರುವುದರಿಂದ ಪ್ರಮುಖ ಅಣೆಕಟ್ಟುಗಳಲ್ಲಿ ಜಲಮಟ್ಟ ಏರಿಕೆಯಾಗುತ್ತಿದೆ. ಆಲಮಟ್ಟಿ ಮತ್ತು ಭದ್ರಾ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿದ್ದರೆ, ಕೆಆರ್‌ಎಸ್ ಮತ್ತು ಲಿಂಗನಮಕ್ಕಿ ಜಲಾಶಯಗಳಿಗೆ ನಿರಂತರವಾಗಿ ಒಳಹರಿವು ಹರಿದುಬರುತ್ತಿದೆ. ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಅಗತ್ಯ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ.
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 108.48 ಅಡಿ
ಒಳಹರಿವು: 1,367 ಕ್ಯೂಸೆಕ್
ಹೊರಹರಿವು: 4,824 ಕ್ಯೂಸೆಕ್
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ಸಂಗ್ರಹ: 30.222 ಟಿಎಂಸಿ
ಗರಿಷ್ಠ ಮಟ್ಟ: 519.60 ಮೀಟರ್
ಇಂದಿನ ಮಟ್ಟ: 519.47 ಮೀಟರ್
ಒಳಹರಿವು: 30,026 ಕ್ಯೂಸೆಕ್
ಹೊರಹರಿವು: 24,158 ಕ್ಯೂಸೆಕ್
ಗರಿಷ್ಠ ಮಟ್ಟ: 186 ಅಡಿ 0 ಇಂಚು
ಇಂದಿನ ಮಟ್ಟ: 175 ಅಡಿ 2 ಇಂಚು (2147.16 ಅಡಿ)
ಒಳಹರಿವು: 3,504 ಕ್ಯೂಸೆಕ್
ಹೊರಹರಿವು: 205 ಕ್ಯೂಸೆಕ್
ಗರಿಷ್ಠ ಸಾಮರ್ಥ್ಯ: 71.535 ಟಿಎಂಸಿ
ಇಂದಿನ ಸಂಗ್ರಹ: 58.569 ಟಿಎಂಸಿ
ಗರಿಷ್ಠ ಮಟ್ಟ: 1819 ಅಡಿ
ಇಂದಿನ ಮಟ್ಟ: 1796.20 ಅಡಿ
ಒಳಹರಿವು: 10,173 ಕ್ಯೂಸೆಕ್
ಸಂಗ್ರಹ ಶೇಕಡಾವಾರು: ಶೇ 57.23
ಇಂದಿನ ಮಟ್ಟದ ಏರಿಕೆ: 0.20 ಅಡಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ